Site icon Vistara News

Naatu Naatu: ನಾಟು ನಾಟು ಹಾಡನ್ನು ಗೂಗಲ್‌ನಲ್ಲಿ ಹುಡುಕಿದವರ ಸಂಖ್ಯೆಯಲ್ಲಿ ಶೇ.1105 ಏರಿಕೆ!

#image_title

ಬೆಂಗಳೂರು: ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು (Naatu Naatu) ಹಾಡಿಗೆ ಆಸ್ಕರ್‌ ಪ್ರಶಸ್ತಿ ಬಂದಿದೆ. ರಾಮ್‌ ಚರಣ್‌ ಮತ್ತು ಜೂ. ಎನ್‌ಟಿಆರ್‌ ನಟನೆಯ ಈ ಹಾಡು ಆಸ್ಕರ್‌ ಪಡೆದ ಬೆನ್ನಲ್ಲೇ ವಿಶ್ವದಲ್ಲಿ ಮತ್ತೆ ಟ್ರೆಂಡ್‌ ಲಿಸ್ಟ್‌ ಸೇರಿಕೊಂಡಿದೆ. ವರದಿಯೊಂದರ ಪ್ರಕಾರ ಈ ಹಾಡಿಗಾಗಿ ಗೂಗಲ್‌ ಸರ್ಚ್‌ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದನ್ನೂ ಓದಿ: Kaala Bhairava : ಪ್ರಸಿದ್ಧ ಗಾಯಕಿ ರಿಹಾನ್ನಾರನ್ನು ಭೇಟಿಯಾದ ಸಂತಸ ಹಂಚಿಕೊಂಡ ನಾಟು ನಾಟು ಗಾಯಕ ಕಾಲ ಭೈರವ
ಜಪಾನ್‌ನ ಕ್ಯಾಸಿನೋ ಗೈಡ್‌ ವರದಿಯ ಪ್ರಕಾರ, ಆಸ್ಕರ್‌ ಪ್ರಶಸ್ತಿ ಬಂದ ಬೆನ್ನಲ್ಲೇ ಗೂಗಲ್‌ನಲ್ಲಿ ನಾಟು ನಾಟು ಹಾಡನ್ನು ಸರ್ಚ್‌ ಮಾಡಿದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಬರೋಬ್ಬರಿ ಶೇ.1105 ಏರಿಕೆ ದಾಖಲೆಯಾಗಿದೆಯಂತೆ. ಹಾಗೆಯೇ ಟಿಕ್‌ಟಾಕ್‌ನಲ್ಲೂ 52.6 ಮಿಲಿಯನ್‌ ಜನರು ಈ ಹಾಡಿನ ವಿಡಿಯೊ ವೀಕ್ಷಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಬಾಚಿಕೊಂಡಿದ್ದ ನಾಟು ನಾಟು ಹಾಡು ಮಾ.12ರಂದು ಆಸ್ಕರ್‌ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಾಟು ನಾಟು ಹಾಡಿಗೆ ಈ ಪ್ರಶಸ್ತಿ ಬಂದಿರುವ ಬಗ್ಗೆ ಬಾಲಿವುಡ್‌ ಸೇರಿ ಭಾರತೀಯ ಚಿತ್ರರಂಗದ ಎಲ್ಲ ಗಣ್ಯರು ಶುಭ ಹಾರೈಸಿದ್ದಾರೆ.

Exit mobile version