ಹೈದರಾಬಾದ್: ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು (Naatu Naatu) ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಬೀಗಿದೆ. ಹಾಡಿನ ಮೂಲ ಗಾಯಕರಾದ ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಅವರು ಆಸ್ಕರ್ ವೇದಿಕೆ ಮೇಲೆ ಹಾಡನ್ನು ಹಾಡಿದ್ದರೆ, ಹಾಲಿವುಡ್ ಕಲಾವಿದರು ಆ ಹಾಡಿಗೆ ನೃತ್ಯವನ್ನೂ ಮಾಡಿದ್ದು, ಅದರ ವಿಡಿಯೊ ಎಲ್ಲೆಡೆ ವೈರಲ್ ಕೂಡ ಆಗಿದೆ. ಆದರೆ ಈ ಹಾಡಿಗೆ ಸಿನಿಮಾದ ನಟರಾದ ರಾಮ್‌ಚರಣ್ ಮತ್ತು ಜೂ.ಎನ್‌ಟಿಆರ್ ನೃತ್ಯ ಮಾಡಲಿಲ್ಲವೆಂಬ ಬೇಸರ ಅಭಿಮಾನಿಗಳಿಗಿದೆ. ಅದಕ್ಕೆ ಕಾರಣ ಇದೀಗ ಹೊರಬಿದ್ದಿದೆ.
ಇದನ್ನೂ ಓದಿ: Viral Video: ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ರೈನಾ-ಪಠಾಣ್ ಜೋಡಿ; ವಿಡಿಯೊ ವೈರಲ್
ಆಸ್ಕರ್ ವೇದಿಕೆ ಮೇಲೆ ನಾಟು ನಾಟು ಹಾಡಿಗೆ ನೃತ್ಯ ಮಾಡುವುದಕ್ಕೆ ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ಅವರಿಗೇ ಹೇಳಲಾಗಿತ್ತಂತೆ. ಅದಕ್ಕೆ ರಾಮ್‌ಚರಣ್ ಅವರು ತುದಿಗಾಲಿನಲ್ಲಿ ನಿಂತಿದ್ದು ಬಹಳಷ್ಟು ಉತ್ಸುಕರೂ ಆಗಿದ್ದರಂತೆ. ಆದರೆ ಈ ನೃತ್ಯವನ್ನು ವೇದಿಕೆ ಮೇಲೆ ಮಾಡುವುದಕ್ಕೆ ನಟ ಜೂನಿಯರ್ ಎನ್‌ಟಿಆರ್ ಒಪ್ಪಿಕೊಂಡಿಲ್ಲವಂತೆ. ನೃತ್ಯದ ಅಭ್ಯಾಸ ಮಾಡುವುದಕ್ಕೆ ಸಾಕಷ್ಟು ಸಮಯವಿಲ್ಲ ಎನ್ನುವ ಕಾರಣಕ್ಕೆ ಅವರೇ ಹಿಂದೇಟು ಹಾಕಿದರು ಎಂದು ಹೇಳಲಾಗಿತ್ತು.
ಆದರೆ ಇದಕ್ಕೆ ಬೇರೆಯದ್ದೇ ಕಾರಣವನ್ನು ಆಸ್ಕರ್ ಕಾರ್ಯಕ್ರಮದ ನಿರ್ಮಾಪಕರಾಗಿದ್ದ ರಾಜ್ ಕಪೂರ್ ನೀಡಿದ್ದಾರೆ. “ಆರ್‌ಆರ್‌ಆರ್ ತಂಡವೇ ಈ ಕಾರ್ಯಕ್ರಮ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ ನಟರಾದ ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ಅವರು ಅಮೆರಿಕಕ್ಕೆ ಬರುವಾಗಲೇ ತಡವಾಗಿತ್ತು. ಇಬ್ಬರೂ ಬೇರೆ ಬೇರೆ ಕೆಲಸಗಳಲ್ಲಿ ಬಿಜಿ ಇದ್ದಿದ್ದರಿಂದಾಗಿ ಇಬ್ಬರೂ ಸೇರಿ ನೃತ್ಯಾಭ್ಯಾಸ ಮಾಡಲು ಸಮಯ ಸಿಕ್ಕಿರಲಿಲ್ಲ. ಹಾಗಾಗಿ ಬೇರೆಯವರ ಬಳಿ ಈ ಹಾಡಿಗೆ ನೃತ್ಯ ಮಾಡಿಸಬೇಕಾಯಿತು” ಎಂದು ರಾಜ್ ಕಪೂರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ