Site icon Vistara News

Naatu Naatu Song: ದಕ್ಷಿಣ ಕೊರಿಯಾದ ರಾಯಭಾರ ಕಚೇರಿ ಸಿಬ್ಬಂದಿಯಿಂದ ‘ನಾಟು ನಾಟು’ ಸಖತ್‌ ಸ್ಟೆಪ್ಸ್‌: ವಿಡಿಯೊ ವೈರಲ್‌!

South Korean ambassador to India shows off his dance

ಬೆಂಗಳೂರು: ರಾಜಮೌಳಿ ನಿರ್ದೇಶನದ ತೆಲುಗು ಸಿನಿಮಾ ʻಆರ್‌ಆರ್‌ಆರ್‌ʼನ (RRR Movie) ‘ನಾಟು ನಾಟು’ ಹಾಡು ಈಗಾಗಲೇ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ. ಸಾಲು ಸಾಲು ಪ್ರಶಸ್ತಿಗಳನ್ನು ಗೆದ್ದಿರುವ ನಾಟು ನಾಟು (Naatu Naatu Song) ಹಾಡಿಗೆ ಇದೀಗ ನವದೆಹಲಿಯಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರ ಕಚೇರಿ ಸಿಬ್ಬಂದಿ (South Korean Embassy Staff) ಹಾಡಿಗೆ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೋಡುಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ದಕ್ಷಿಣ ಕೊರಿಯಾದ ರಾಯಭಾರ ಕಚೇರಿಯು ಇದನ್ನು ‘ನಾಟು ನಾಟು RRR ಡ್ಯಾನ್ಸ್ ಕವರ್ – ಭಾರತದಲ್ಲಿ ಕೊರಿಯನ್ ರಾಯಭಾರ ಕಚೇರಿ’ ಎಂದು ಕ್ಯಾಪ್ಷನ್‌ ಮೂಲಕ ವಿಡಿಯೊ ಹಂಚಿಕೊಂಡಿದೆ. ʻʻಕೊರಿಯನ್ ರಾಯಭಾರಿ ಕಚೇರಿಯಿಂದ ನಾಟು ನಾಟು ನೃತ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಜತೆಗೆ ರಾಯಭಾರ ಕಚೇರಿಯ ಸಿಬ್ಬಂದಿ ನಾಟು ನಾಟು ಡ್ಯಾನ್ಸ್‌ ನೋಡಿʼʼ ಎಂದು ಫೆ.25ರಂದು ಟ್ವೀಟ್‌ ಮೂಲಕ ಹಂಚಿಕೊಂಡಿದೆ.

ಇದನ್ನೂ ಓದಿ: Viral Video : ನಾಟು ನಾಟು ಹಾಡಿಗೆ ನೃತ್ಯ ಮಾಡಿದ ಪಾಕಿಸ್ತಾನಿ ನಟಿ; ಅಬ್ಬಬ್ಬಾ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು

ಇದನ್ನೂ ಓದಿ: Anand Mahindra: ನಟ ರಾಮ್‌ ಚರಣ್‌ ಜತೆ ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆನಂದ್‌ ಮಹೀಂದ್ರಾ, ವಿಡಿಯೊ ವೈರಲ್‌

ಐವತ್ಮೂರು ಸೆಕೆಂಡ್‌ಗಳ ಅವಧಿಯನ್ನು ಹೊಂದಿರುವ ಈ ವಿಡಿಯೊದಲ್ಲಿ ಕೊರಿಯನ್ ಮತ್ತು ಭಾರತೀಯ ಕಾರ್ಮಿಕರು ಹಾಡಿಗೆ ಸ್ಟೆಪ್ಸ್‌ ಹಾಕಿದ್ದಾರೆ. ಆರ್‌ಆರ್‌ಆರ್‌ನ ಪ್ರಮುಖ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಮೇಲೆ ಚಿತ್ರಿಸಲಾದ ‘ನಾಟು ನಾಟು’ ಹಾಡಿನ ಹುಕ್ ಸ್ಟೆಪ್ ಇದೀಗ ಸಖತ್‌ ವೈರಲ್‌ ಆಗಿದೆ. ಅನೇಕರು ವಿಡಿಯೊ ಬಗ್ಗೆ ಶ್ಲಾಘಿಸಿದ್ದಾರೆ.

Exit mobile version