ಬೆಂಗಳೂರು : ಸಾಲು ಸಾಲು ಸಿನಿಮಾಗಳಲ್ಲಿ ಸೋತ ನಟ ನಾಗಚೈತನ್ಯ (Naga Chaitanya ) ಇದೀಗ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ‘ಬಂಗಾರ್ರಾಜು’ ವರ್ಷದ ಆರಂಭದಲ್ಲಿ ಸಾಧಾರಣ ಎನಿಸಿಕೊಂಡಿದ್ದು ಇದೀಗ ತಮಿಳು ನಿರ್ದೇಶಕ ವೆಂಕಟ್ಪ್ರಭು ಜತೆ ʻಕಸ್ಟಡಿʼ ಎಂಬ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ ಚಿತ್ರತಂಡ.
ಈ ವರ್ಷ ನಾಗಚೈತನ್ಯ ನಟನೆಯ ʻʻಥ್ಯಾಂಕ್ ಯೂʼʼ ಹೀನಾಯ ಸೋಲು ಕಂಡಿತು. ನಾಗಚೈತನ್ಯ ಈ ವರ್ಷ ಬಾಲಿವುಡ್ ಚಿತ್ರರಂಗಕ್ಕೆ ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಮೂಲಕ ಪದಾರ್ಪಣೆ ಮಾಡಿದ್ದರು. ಆದರೆ ಈ ಚಿತ್ರ ಸಹ ಸೋಲನ್ನು ಅನುಭವಿಸಿತು. ಇದರ ಬೆನ್ನಲ್ಲೇ ಇದೀಗ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ | Actress Samantha | ಡಿವೋರ್ಸ್ ನಂತರವೂ ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರಂತೆ ಸಮಂತಾ-ನಾಗಚೈತನ್ಯ!
ಪೊಲೀಸ್ ಪಾತ್ರದ ಮೂಲಕ ಕಸ್ಟಡಿ ಸಿನಿಮಾದಲ್ಲಿ ಮಿಂಚಲಿದ್ದಾರೆ ನಾಗಚೈತನ್ಯ. ಚಿತ್ರವು ಮುಂದಿನ ವರ್ಷ ಮೇ 12 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ತಯಾರಕರು ಟ್ವಿಟರ್ನಲ್ಲಿ ಹೊಸ ಪೋಸ್ಟರ್ನೊಂದಿಗೆ ಅನೌನ್ಸ್ ಮಾಡಿದ್ದಾರೆ.
ಕಸ್ಟಡಿ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಕೆರಳಿಸುವಂತಿದೆ. ತಮಿಳು ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಸ್ವಾಮಿ, ಪ್ರಿಯಾಮಣಿ, ಸಂಪತ್ ರಾಜ್, ಶರತ್ಕುಮಾರ್, ವೆನ್ನೆಲ ಕಿಶೋರ್ ಮತ್ತು ಪ್ರೇಮಿ ವಿಶ್ವನಾಥ್ ತಾರಾಗಣದಲ್ಲಿದ್ದಾರೆ. ಶ್ರೀನಿವಾಸ ಚಿತ್ತೂರಿ ನಿರ್ಮಿಸಿ, ಪವನ್ ಕುಮಾರ್ ಅವರು ಪ್ರಸ್ತುತಪಡಿಸಿದ್ದಾರೆ. ಹಿರಿಯ ಸಂಗೀತ ಸಂಯೋಜಕ ಇಳಯರಾಜ ಮತ್ತು ಅವರ ಪುತ್ರ ಯುವನ್ ಶಂಕರ್ ರಾಜಾ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ | Samantha | ಸಮಂತಾ ಆರೋಗ್ಯ ವಿಚಾರಿಸಲು ಭೇಟಿ ಆಗಲಿದ್ದಾರಾ ಮಾಜಿ ಪತಿ ನಾಗಚೈತನ್ಯ?