ಬೆಂಗಳೂರು: ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ (Samantha Ruth Prabhu) ಅವರ ವಿಚ್ಛೇದನ ಬಗ್ಗೆ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಆಗುತ್ತಿರುತ್ತವೆ. ಇವರಿಬ್ಬರು ಮದುವೆಯಾಗಿ ಸುಮಾರು ನಾಲ್ಕು ವರ್ಷಗಳಾಗಿತ್ತು. ಸಮಂತಾ ಜತೆ ವಿಚ್ಛೇದನ ಬಳಿಕ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ತಮ್ಮ ಮುಂಬರುವ ಕಸ್ಟಡಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟ ತೊಡಗಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಮುಂಚಿತವಾಗಿ, ನಾಗ ಚೈತನ್ಯ ಪಶ್ಚಾತ್ತಾಪದ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಚೈತನ್ಯ ಅವರ ಜೀವನದಲ್ಲಿ ಏನಾದರೂ ಪಶ್ಚಾತ್ತಾಪವಾಗಿತ್ತೇ ಎಂದು ಸಂದರ್ಶಕರು ಪ್ರಶ್ನೆ ಕೇಳಿದ್ದರು. ಅದಕ್ಕೆ ಚೈತನ್ಯ ಉತ್ತರ ನೀಡಿ, “ನನ್ನ ಜೀವನದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ. ಎಲ್ಲವೂ ಕೇವಲ ಕಲಿಕೆ ಅಷ್ಟೇʼʼ ಎಂದಿದ್ದಾರೆ. ತೆಲುಗು ಸ್ಟಾರ್ ನಾಗಚೈತನ್ಯ (Naga Chaitanya) ಮತ್ತು ಬಾಲಿವುಡ್ ನಟಿ ಶೋಭಿತಾ ಧೂಲಿಪಾಲ (Sobhita Dhulipala) ಅವರ ಡೇಟಿಂಗ್ ವದಂತಿಗಳು ಹೊಸತೇನಲ್ಲ. ಕೆಲವು ದಿನಗಳ ಹಿಂದೆ ಲಂಡನ್ ರೆಸ್ಟೋರೆಂಟ್‌ನಲ್ಲಿ ಜೋಡಿ ಊಟ ಮಾಡುತ್ತಿರುವ ಹೊಸ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Naga Chaitanya: ಶೋಭಿತಾ-ನಾಗಚೈತನ್ಯ ಡೇಟಿಂಗ್ ಮಾಡಿರುವ ಫೋಟೊ ಇದ್ದಕ್ಕಿದ್ದಂತೆ ಮಾಯಾ!
ಹೋಟೆಲ್‌ನ ಬಾಣಸಿಗ ಸುರೇಂದರ್ ಮೋಹನ್ ಶೇರ್ ಮಾಡಿದ ಫೋಟೊದಿಂದ ಜೋಡಿ ಸಿಕ್ಕಿಬಿದ್ದಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿಯೂ ನಾಗಚೈತನ್ಯ ಮತ್ತು ಶೋಭಿತಾ ಲಂಡಲ್‌ನಲ್ಲಿರುವ ಫೋಟೊ ವೈರಲ್ ಆಗಿತ್ತು. ಆ ಫೋಟೊಗಳು ಡೇಟಿಂಗ್ ವದಂತಿಗೆ ಪುಷ್ಟಿ ನೀಡಿತ್ತು. ಆದರೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇಬ್ಬರ ಫೋಟೊಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ, ಇದು ಫೇಕ್ ಎನ್ನುವ ಮಾತು ಕೇಳಿ ಬಂದಿತ್ತು. ಹೈದರಾಬಾದ್ ಟೈಮ್ಸ್‌ನ ಇತ್ತೀಚಿನ ವರದಿಯ ಪ್ರಕಾರ ಚೈತನ್ಯ ಮತ್ತು ಶೋಭಿತಾ ಅವರು ಆರು ತಿಂಗಳಿನಿಂದ ಡೇಟಿಂಗ್ ಮಾಡುತ್ತಿದ್ದಾರೆ.