ಬೆಂಗಳೂರು: ನಾಗ ಚೈತನ್ಯ (Naga Chaitanya), ಅಖಿಲ್ ಅಕ್ಕಿನೇನಿ ಸೇರಿದಂತೆ ತಂದೆ ನಾಗಾರ್ಜುನ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಯಶಸ್ಸು ಕಾಣುತ್ತಿಲ್ಲ. ಬಿಡುಗಡೆಯಾದ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ನಾಗ ಚೈತನ್ಯ ಸದ್ಯ ತಮ್ಮ ಮುಂಬರುವ ಚಿತ್ರ ʻಕಸ್ಟಡಿʼ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಸ್ಟಡಿ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಕುಟುಂಬ ಸಿನಿಮಾ ಫ್ಲಾಪ್‌ಗಳನ್ನು ಹೇಗೆ ಎದುರಿಸುತ್ತದೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾಗ ಚೈತನ್ಯ ಅವರ ಮುಂಬರುವ ಚಿತ್ರ, ಕಸ್ಟಡಿ ಮೇ 12ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ತಮಿಳು-ತೆಲುಗು ದ್ವಿಭಾಷಾ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು ವೆಂಕಟ್ ಪ್ರಭು ಅವರ ನಿರ್ದೇಶನವಿದೆ. ಕಸ್ಟಡಿ ಪತ್ರಿಕಾಗೋಷ್ಠಿಯಲ್ಲಿ ನಾಗಚೈತನ್ಯ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು.
“ನಾವು ಯಾವಾಗಲೂ ಸಕ್ಸೆಸ್ ಸಿನಿಮಾಗಳನ್ನೇ ನೀಡಲು ಬಯಸುತ್ತೇವೆ. ನಮ್ಮ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಯಾವಾಗಲೂ ಚಿರಋಣಿ. ಕೆಲವು ಸಿನಿಮಾಗಳು ಅಷ್ಟಾಗಿ ಯಶಸ್ಸು ಕಂಡಿಲ್ಲ. ವೃತ್ತಿಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಇವೆಲ್ಲದರ ಜತೆಯೇ ಪ್ರಯಾಣಿಸುತ್ತೇವೆ. ಈ ಹಂತ ಸ್ವಲ್ಪ ದಿನದಲ್ಲಿಯೇ ಕಳೆದು ಹೋಗುತ್ತದೆ. ಮತ್ತೆ ಒಳ್ಳೆಯ ಸಿನಿಮಾಗಳೊಂದಿಗೆ ಬರುತ್ತೇವೆ. ಅಭಿಮಾನಿಗಳ ಅಭಿರುಚಿಯ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆʼʼಎಂದರು.
ಅಖಿಲ್ ಅಕ್ಕಿನೇನಿ ಅವರ ʻಏಜೆಂಟ್ʼ ಸಿನಿಮಾ ಮತ್ತು ನಾಗಾರ್ಜುನ ಅವರ ʻದಿ ಘೋಸ್ಟ್ʼ ಸಿನಿಮಾಗಳು ಸೋಲು ಕಂಡಿವೆ. ಈ ಸಿನಿಮಾಗಳು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಇದನ್ನೂ ಓದಿ: Naga Chaitanya: ವಿಚ್ಛೇದನ ಬಳಿಕ ನಾಗ ಚೈತನ್ಯ ಜೀವನದಲ್ಲಿ ಪಶ್ಚಾತ್ತಾಪ ಪಟ್ಟರೆ? ನಟ ಹೇಳಿದ್ದೇನು?
ಮೇ 12ರಂದು ಕಸ್ಟಡಿ ಸಿನಿಮಾ ತೆರೆಗೆ
ವೆಂಕಟ್ ಪ್ರಭು ಬರೆದು ನಿರ್ದೇಶಿಸಿದ ʻಕಸ್ಟಡಿʼ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ನಾಗ ಚೈತನ್ಯ, ಅರವಿಂದ್ ಸ್ವಾಮಿ ಮತ್ತು ಕೃತಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ
ಆರ್ ಶರತ್‌ಕುಮಾರ್, ವೆನ್ನೆಲ ಕಿಶೋರ್, ಪ್ರೇಮಿ ವಿಶ್ವನಾಥ್, ಸಂಪತ್ ರಾಜ್ ಮತ್ತು ಪ್ರೇಮ್ಗಿ ಅಮರೇನ್ ಪೋಷಕ ಪಾತ್ರಗಳಲ್ಲಿದ್ದಾರೆ. ಅಂದಹಾಗೆ, ಪ್ರಿಯಾಮಣಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್‌ಆರ್ ಕತೀರ್ ಛಾಯಾಗ್ರಹಣ, ವೆಂಕಟ್ ರಾಜೇನ್ ಸಂಕಲನ ಮತ್ತು ಇಳಯರಾಜ ಸಂಗೀತ ಸಂಯೋಜನೆ ಸಿನಿಮಾಕ್ಕಿದೆ.