ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಟಾಲಿವುಡ್ ಸ್ಟಾರ್ (Tollywood star) ನಾಗಾರ್ಜುನ (Nagarjuna) ಅವರ ಮಗ ನಾಗ ಚೈತನ್ಯ (Naga Chaitanya Sobhita Dhulipala) ಅವರ ವಿವಾಹ ನಿಶ್ಚಿತಾರ್ಥದ (Engagement ) ಸುದ್ದಿಯೇ ಹೆಚ್ಚು ಚರ್ಚೆಯಲ್ಲಿದೆ. ನಟಿ ಸಮಂತಾ (Samantha) ಅವರೊಂದಿಗಿನ ವಿಚ್ಛೇದನದ ಬಳಿಕ ನಾಗ ಚೈತನ್ಯ ಮತ್ತು ಅವರ ಕುಟುಂಬದ ಕುರಿತು ಅನೇಕ ಸಂಗತಿಗಳು ಅವರ ಅಭಿಮಾನಿಗಳಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು ಆಗಸ್ಟ್ 8ರಂದು ಹೈದರಾಬಾದ್‌ನಲ್ಲಿ ಸಾಂಪ್ರದಾಯಿಕ ಸಮಾರಂಭದ ಮೂಲಕ ವಿವಾಹ ನಿಶ್ಚಿತಾರ್ಥ ಮಾಡಿಕೊಂಡರು. 2022ರಲ್ಲಿ ಯುರೋಪ್ ಪ್ರವಾಸದ ವೇಳೆ ಒಟ್ಟಿಗೆ ಕಾಣಿಸಿಕೊಂಡ ಬಳಿಕ ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿತ್ತು.
ಇವರ ವಿವಾಹ ನಿಶ್ಚಿತಾರ್ಥದ ಸುದ್ದಿಯ ಮಧ್ಯೆ ಈಗ ಟಾಲಿವುಡ್ ಸ್ಟಾರ್ ನಾಗಾರ್ಜುನ ಅವರ ವಯಕ್ತಿಕ ಜೀವನವೂ ಹೆಚ್ಚು ಚರ್ಚೆಗೆ ಬಂದಿದೆ. ಶೋಭಿತಾ ಅವರನ್ನು ಕುಟುಂಬಕ್ಕೆ ಸ್ವಾಗತಿಸುವುದಾಗಿ ನಾಗಾರ್ಜುನ ಅವರು ಇತ್ತೀಚಿಗೆ ದೃಢಪಡಿಸಿದ್ದರು. ನಾಗಾರ್ಜುನ ದಂಪತಿ ನಡುವೆ ಎಲ್ಲವೂ ಸರಿಯಾಗಿದೆ ಎಂದು ತೋರುತ್ತಿರುವಾಗ ಅವರ ಮೊದಲ ಪತ್ನಿ ಲಕ್ಷ್ಮಿ ದಗ್ಗುಬಾಟಿ ಅವರೊಂದಿಗೆ ನಾಗಾರ್ಜುನ ಅವರ ಸಂಪರ್ಕದ ಕುರಿತು ಚರ್ಚೆಯಾಗುತ್ತಿದೆ. ದಗ್ಗುಬಾಟಿ ಕುಟುಂಬವು ಶೋಭಿತಾ ಅವರನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅನುಸರಿಸುತ್ತಿಲ್ಲ ಎಂಬುದನ್ನು ನೆಟ್ಟಿಗರು ಇತ್ತೀಚೆಗೆ ಪತ್ತೆ ಹಚ್ಚಿದ್ದಾರೆ. ಲಕ್ಷ್ಮಿ ಮತ್ತು ನಾಗಾರ್ಜುನ ಅವರ ಮಗ ನಾಗ ಚೈತನ್ಯ.
ವೆಂಕಟೇಶ್ ದಗ್ಗುಬಾಟಿ, ರಾಣಾ ದಗ್ಗುಬಾಟಿ, ಅವರ ಸಹೋದರಿ ಮಾಳವಿಕಾ ದಗ್ಗುಬಾಟಿ ಮತ್ತು ಆಶ್ರಿತಾ ದಗ್ಗುಬಾಟಿ ಅವರು ಶೋಭಿತಾ ಧೂಳಿಪಾಲ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನುಸರಿಸುತ್ತಿಲ್ಲ ಎಂದು ಸೂಚಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ವೊಂದು ಈಗ ಸುದ್ದಿ ಮಾಡಿದೆ. ಆದರೆ ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ರೂತ್ ಪ್ರಭು ಅವರನ್ನು ಅನುಸರಿಸುತ್ತಿದ್ದಾರೆ. ಚೈತನ್ಯ ಈ ಹಿಂದೆ 2017ರಿಂದ 2021ರವರೆಗೆ ನಟ ಸಮಂತಾ ಅವರ ಜತೆಗಿದ್ದರು. ಶೋಭಿತಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಚೈತನ್ಯ ಅವರ ನಿರ್ಧಾರವನ್ನು ದಗ್ಗುಬಾಟಿ ಅವರನ್ನು ಕುಟುಂಬಕ್ಕೆ ಇಷ್ಟವಾಗದಿರಬಹುದು ಎನ್ನುವ ವದಂತಿಗಳು ಹುಟ್ಟಿಕೊಂಡಿವೆ.
ದಗ್ಗುಬಾಟಿ ಕುಟುಂಬ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಸಮಾರಂಭದಲ್ಲೂ ಪಾಲ್ಗೊಂಡಿರಲಿಲ್ಲ. ಈ ವೇಳೆ ಅವರು ತಾಯಿ ಲಕ್ಷ್ಮಿ ಅವರ ಎರಡನೇ ಪತಿ ಶರತ್ ವಿಜಯರಾಘವನ್ ಅವರೊಂದಿಗೆ ಹಬ್ಬಗಳಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Viral Video: ಐಷಾರಾಮಿ ಟೊಯೋಟಾ ಲೆಕ್ಸಸ್ ಕಾರು ಖರೀದಿಸಿದ ಜಾನ್ವಿ ಕಪೂರ್! ಇದರ ದರ ಎಷ್ಟು?
ಚೈತನ್ಯ ಅವರ ನಿಶ್ಚಿತಾರ್ಥದಲ್ಲಿ ರಾಣಾ ದಗ್ಗುಬಾಟಿ ಮತ್ತು ಅವರ ಸಹೋದರಿಯರು ಕಾಣಿಸಿಕೊಳ್ಳದೇ ಇರುವುದನ್ನು ನೆಟಿಜನ್‌ಗಳು ಈ ಹಿಂದೆ ಗಮನಿಸಿದ್ದರು. ಅಕ್ಕಿನೇನಿ ಮತ್ತು ದಗ್ಗುಬಾಟಿ ಕುಟುಂಬದಲ್ಲಿ ಹೇಳಲಾದ ಭಿನ್ನಾಭಿಪ್ರಾಯದ ಬಗ್ಗೆ ವದಂತಿಗಳು ಬಳಿಕ ಹುಟ್ಟಿಕೊಂಡಿತ್ತು. ಇದಕ್ಕೆ ಈವರೆಗೆ ಯಾರೂ ಸ್ಪಷ್ಟನೆಯನ್ನು ನೀಡಿಲ್ಲ.