Site icon Vistara News

Bigg Boss Telugu 7: ಬಿಗ್‌ ಬಾಸ್‌ ವೇದಿಕೆಯಲ್ಲಿ ಸಮಂತಾ ಎಲ್ಲಿ?ಎಂದು ಕೇಳಿದ ಮಾಜಿ ಮಾವ ನಾಗಾರ್ಜುನ!

Nagarjuna Vijay Devarakonda In Bigg boss Telugu 7

ಬೆಂಗಳೂರು: ವಿಜಯ್ ದೇವರಕೊಂಡ ( Vijay Deverakonda) ಮತ್ತು ಸಮಂತಾ ರುತ್ ಪ್ರಭು ಖುಷಿ ಸಿನಿಮಾ ಸಂಭ್ರಮಾಚರಣೆಯಲ್ಲಿದ್ದಾರೆ. ಸೆಪ್ಟೆಂಬರ್ 1ರಂದು ಖುಷಿ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಖುಷಿ ಚಿತ್ರದ ಪ್ರಚಾರಕ್ಕೆಂದು ವಿಜಯ್‌ ದೇವರಕೊಂಡ ಬಿಗ್ ಬಾಸ್ ತೆಲುಗು ಸೀಸನ್ 7 ರಲ್ಲಿ (Bigg Boss Telugu 7) ಕಾಣಿಸಿಕೊಂಡರು. ಹೆಚ್ಚು ಜನಪ್ರಿಯವಾಗಿರುವ ರಿಯಾಲಿಟಿ ಶೋನ ಏಳನೇ ಸೀಸನ್ ಇಂದು (ಸೆಪ್ಟೆಂಬರ್ 3ರಂದು) ಪ್ರೀಮಿಯರ್ ಆಗಲಿದೆ. ವೇದಿಕೆಯಲ್ಲಿ ವಿಜಯ್‌ ಅವರಿಗೆ ಬಿಗ್​ಬಾಸ್ ನಿರೂಪಕ, ಸಮಂತಾರ ಮಾಜಿ ಮಾವ ನಾಗಾರ್ಜುನ (Nagarjuna Akkineni ) ʻಸಮಂತಾ ಎಲ್ಲಿʼ? ಎಂದು ಪ್ರಶ್ನೆ ಮಾಡಿದ್ದಾರೆ? ಈ ಪ್ರೋಮೊ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಬಿಗ್ ಬಾಸ್ ತೆಲುಗು ಸೀಸನ್ 7ರ ಪ್ರೀಮಿಯರ್‌ನಲ್ಲಿ ಖುಷಿ ಸಿನಿಮಾ ಪ್ರಚಾರ ಮಾಡಲು ವಿಜಯ್ ದೇವರಕೊಂಡ ಅತಿಥಿಯಾಗಿ ಕಾಣಿಸಿಕೊಂಡರು. ಈ ವರ್ಷವೂ ಬಿಗ್‌ಬಾಸ್‌ ಸೀಸನ್‌ವನ್ನು ನಾಗಾರ್ಜುನ ಅಕ್ಕಿನೇನಿ ಹೋಸ್ಟ್ ಮಾಡುತ್ತಿದ್ದಾರೆ. ಶೋ ವೇಳೆ ವಿಜಯ್‌ ದೇವರಕೊಂಡ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ತಕ್ಷಣ ನಾಗಾರ್ಜುನ ಅವರು ವಿಜಯ್ ದೇವರಕೊಂಡ ಅವರ ಬಳಿ ಸಿನಿಮಾ ಹಿರೋಯಿನ್‌ ಎಲ್ಲಿ? ಎಂದು ಕೇಳಿದರು. ಬಿಗ್​ಬಾಸ್ ಓಪನಿಂಗ್​ನ ಪ್ರೋಮೊ ಅಷ್ಟೆ ಇದೀಗ ಬಿಡುಗಡೆ ಆಗಿದ್ದು, ಪ್ರೋಮೊನಲ್ಲಿ ಓಪನಿಂಗ್​ ಕಾರ್ಯಕ್ರಮದ ಹಲವು ತುಣುಕುಗಳನ್ನು ಸೇರಿಸಲಾಗಿದೆ. ಅದರಲ್ಲಿ ವಿಜಯ್ ದೇವರಕೊಂಡ ಜತೆಗಿನ ನಾಗಾರ್ಜುನ ಮಾತುಕತೆ ತುಣುಕು ಸಹ ಇದೆ. ವಿಜಯ್ ಬಳಿ ಸಮಂತಾ ಬಗ್ಗೆ ನಾಗಾರ್ಜುನ ಕೇಳಿದ ಪ್ರಶ್ನೆಗೆ ನಾಗಾರ್ಜುನ ಏನು ಉತ್ತರ ಕೊಟ್ಟರು ಎಂಬ ಮಾಹಿತಿ ಎಪಿಸೋಡ್ ಪ್ರಸಾರವಾದ ಬಳಿಕವೇ ತಿಳಿಯಲಿದೆ. ಸಮಂತಾ ರುತ್ ಪ್ರಭು ಈ ಹಿಂದೆ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ನಂತರ ಅಕ್ಟೋಬರ್ 21ರಂದು ಡಿವೋರ್ಸ್‌ ಪಡೆದುಕೊಂಡರು. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಮಾಜಿ ಸೊಸೆಯ ಮೇಲೆ ನಾಗಾರ್ಜುನ ಅವರಿಗೆ ಇಂದಿಗೂ ಕಾಳಜಿ ಇದೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Bigg Boss Telugu 7: ದೊಡ್ಮನೆಗೆ ಕಾಲಿಡಲು ನಟಿ ಶಕೀಲಾ ರೆಡಿ?

ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಒಟ್ಟಿಗೆ ನಟಿಸಿರುವ ಖುಷಿ ಚಿತ್ರದ ಪ್ರೇಮಕಥೆ ಪ್ರಶಂಸಿಸಲ್ಪಟ್ಟಿದೆ. 2018ರ ಮಹಾನಟಿ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗಿದೆ.

Exit mobile version