Site icon Vistara News

Actress Namitha: ಚೆನ್ನೈ ಪ್ರವಾಹ; ಅವಳಿ ಮಕ್ಕಳೊಂದಿಗೆ ಅಪಾಯಕ್ಕೆ ಸಿಲುಕಿದ್ದ ನಟಿ!

namitha actress

ಬೆಂಗಳೂರು: ಚೆನ್ನೈನ ಪ್ರವಾಹ ಪೀಡಿತ (Actress Namitha) ಸ್ಥಳದಿಂದ ಬಾಲಿವುಡ್‌ ನಟ ಆಮೀರ್ ಖಾನ್ (Aamir Khan) ಅವರನ್ನು ರಕ್ಷಿಸಲಾಗಿರುವುದು ಗೊತ್ತೇ ಇದೆ. ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ನಾಗಪಟ್ಟಿಣಂ, ಕಡಲೂರು ಮತ್ತು ತಿರುವಳ್ಳೂರು ಜಿಲ್ಲೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಚೆನ್ನೈನ ಹೆಚ್ಚಿನ ಭಾಗಗಳು ಪ್ರಸ್ತುತ ನೀರಿನಲ್ಲಿ ಮುಳುಗಿವೆ. ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರವಾಹ ಕಂಡು ಬಂದಿದ್ದು, ರಕ್ಷಣಾ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರತರಾಗಿದ್ದಾರೆ. ಚೆನ್ನೈ ಸಮೀಪದಲ್ಲಿರುವ ಪಲ್ಲಿಕರಣ ನಾರಾಯಣಪುರಂ ಕೆರೆ ಒಡೆದು ಮನೆಗೆ ನುಗ್ಗಿದೆ. ಇದರಿಂದ ನಟಿ ನಮಿತಾ ಮನೆ ಜಲಾವೃತಗೊಂಡಿದೆ. ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಅಪಾರ್ಟ್‌ಮೆಂಟ್‌ ಬಳಿಗೆ ರಕ್ಷಣಾ ತಂಡ ತಲುಪಲು ತಡವಾಗಿದ್ದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಕಳೆದೆರಡು ದಿನಗಳಿಂದ ಮಿಗ್ಜಾಮ್ ಚಂಡಮಾರುತ ಭಾರೀ ಅವಾಂತರವನ್ನೇ ಸೃಷ್ಟಿಸಿತ್ತು. ಪ್ರವಾಹ ಹೆಚ್ಚಿದ್ದರಿಂದ ಪಳ್ಳಿಕರಣ ನಾರಾಯಣಪುರಂ ಕೆರೆಯ ದಡ ಒಡೆದಿದೆ. ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ. ಪಳ್ಳಿಕರಣ, ಸಮೀಪದ ದುರೈಪಕ್ಕಂ ಪ್ರದೇಶ ಜಲಾವೃತಗೊಂಡಿದೆ. ಪಳ್ಳಿಕರಣ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ದಕ್ಷಿಣ ಭಾರತದ ನಟಿ ನಮಿತಾ ವಾಸವಿದ್ದರು. ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ಅಪಾರ್ಟ್‌ಮೆಂಟ್‌ ಬಳಿಗೆ ರಕ್ಷಣಾ ತಂಡ ತಲುಪಲು ತಡವಾಗಿದ್ದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ವರದಿಯಾಗಿದೆ. ನಟಿ ನಮಿತಾ ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 2017ರಲ್ಲಿ ತಿರುಪತಿಯಲ್ಲಿ ಉದ್ಯಮಿ ವೀರೇಂದ್ರ ಚೌಧರಿಯನ್ನು ನಮಿತಾ ಮದುವೆ ಆಗಿದ್ದರು. ಈ ಜೋಡಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದ್ದಾರೆ.

ವಿದ್ಯುತ್ ಮತ್ತು ನೆಟ್‌ವರ್ಕ್‌ ಇಲ್ಲದೆ ಚೆನ್ನೈನ ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದೇನೆ ಎಂದು ವಿಷ್ಣು ವಿಶಾಲ್‌ ಈ ಹಿಂದೆ ಬಹಿರಂಗಪಡಿಸಿದ್ದರು. ತನ್ನ ಮನೆಯೊಳಗೆ ನೀರು ನುಗ್ಗಿದೆ ಎಂದು ತಿಳಿಸಿದ್ದರು. ಫೋಟೊಗಳನ್ನು ಹಂಚಿಕೊಂಡಿದ್ದ ಅವರು, “ನೀರು ನನ್ನ ಮನೆಯೊಳಗೆ ನುಗ್ಗುತ್ತಿದೆ. ಕರಪಕ್ಕಂನಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಏರುತ್ತಿದೆ. ನಾನು ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಇಲ್ಲ, ವೈಫೈ ಇಲ್ಲ, ಫೋನ್ ಸಿಗ್ನಲ್ ಇಲ್ಲ, ಏನೂ ಇಲ್ಲ. ಒಂದು ನಿರ್ದಿಷ್ಟ ಸ್ಥಳದಲ್ಲಿ ಟೆರೇಸ್‌ನಲ್ಲಿ ಮಾತ್ರ ನನಗೆ ಕೆಲವು ಸಿಗ್ನಲ್ ಸಿಗುತ್ತದೆʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: Actress Leelavathi: ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ನೆರವಿಗೆ ಬಂದ ನಟರು

ಈ ಮಧ್ಯೆ ತಮಿಳು ಚಿತ್ರರಂಗದ ನಟರಾದ ಸೂರ್ಯ ಮತ್ತು ಕಾರ್ತಿ 10 ಲಕ್ಷ ರೂ.ಗಳ ಆರಂಭಿಕ ದೇಣಿಗೆಯನ್ನು ಘೋಷಿಸಿದ್ದಾರೆ. ಅಗತ್ಯವಿರುವ ಯಾವುದೇ ರೀತಿಯ ಸಹಾಯ ಒದಗಿಸಲು ಈ ಹಣವನ್ನು ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ನಟರ ಅಭಿಮಾನಿ ಸಂಘಗಳ ಮೂಲಕ ನೆರವು ನೀಡಲಾಗುತ್ತದೆ.

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡು ಬೀಸುತ್ತಿರುವ ಮಿಚಾಂಗ್‌ ಚಂಡಮಾರುತದ ಪರಿಣಾಮ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇದುವರೆಗೆ 8 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ಭೂಕುಸಿತವಾಗಿದೆ. ಕಾರು- ಬೈಕುಗಳು ಕೊಚ್ಚಿಕೊಂಡು ಹೋಗಿವೆ. ಮನೆಗಳು ಕುಸಿದಿವೆ. ಕೋಟಿಗಟ್ಟಲೆ ಆಸ್ತಿಗೆ ಹಾನಿಯಾಗಿದೆ.

Exit mobile version