Site icon Vistara News

Namma Lachi Kannada Serial: ಲಚ್ಚಿ-ರಿಯಾ ಜತೆ ರಾಧಿಕಾ ಕುಮಾರಸ್ವಾಮಿ; ಕಿರುತೆರೆಗೆ ಎಂಟ್ರಿ ಕೊಟ್ರಾ ನಟಿ?

Namma Lachi Kannada Serial

ಬೆಂಗಳೂರು: ಎಂ. ಶಶಿಧರ್ ನಿರ್ದೇಶನದ ‘ಅಜಾಗ್ರತ’ ಸಿನಿಮಾ ಮುಹೂರ್ತ ಕೆಲವು ದಿನಗಳ ಹಿಂದೆ ನಡೆದಿತ್ತು. ರಾಧಿಕಾ ಕುಮಾರಸ್ವಾಮಿ ಈ ಸಿನಿಮಾಗೆ ನಾಯಕಿ. ಬಾಲಿವುಡ್​ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸಹೋದರ ಇದನ್ನು ನಿರ್ಮಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿಯ ಶಮಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾದ ʼಭೈರಾದೇವಿʼ ಚಿತ್ರ ಬಿಡುಗಡೆಗೆ ಕಾಯುತ್ತಿದೆ. ಇದಕ್ಕೂ ಮುಂಚೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ಇದೀಗ ರಾಧಿಕಾ ಅವರು ಕಿರುತೆರೆಗೆ ಎಂಟ್ರಿ ಕೊಡಲಿದ್ದಾರಾ ಎಂಬ ಚರ್ಚೆಗಳು ಶುರುವಾಗಿವೆ. ಪೂರಕವೆಂಬಂತೆ ಸ್ಟಾರ್ ಸುವರ್ಣದ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿ ನಮ್ಮ ಲಚ್ಚಿ ಧಾರವಾಹಿಯ (Namma Lachi Kannada Serial) ಸಾಂಘವಿ ಜತೆ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡಿದ್ದಾರೆ.

ದಮಯಂತಿ ಸಿನಿಮಾ ಬಳಿಕ ರಾಧಿಕಾ ಕುಮಾರಸ್ವಾಮಿ ಸ್ವಲ್ಪ ಬ್ರೇಕ್‌ ತೆಗೆದುಕೊಂಡಿದ್ದರು. ರಾಧಿಕಾ ಕುಮಾರಸ್ವಾಮಿ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಏಳು ಭಾಷೆಯಲ್ಲಿ ಸಿದ್ದವಾಗುತ್ತಿರುವ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಇದೀಗ ನಮ್ಮ ಲಚ್ಚಿ ಮತ್ತು ರಿಯಾ ಅವರು ರಾಧಿಕಾ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಸಾಂಘವಿ ತಮ್ಮ ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಈಗಾಗಲೇ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಡ್ಯಾನ್ಸಿಂಗ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡು, ವೇದಿಕೆ ಮೇಲೆ ತಮ್ಮ ನೃತ್ಯ ಪ್ರದರ್ಶನವನ್ನು ಮಾಡಿದ್ದಾರೆ. ಇದೀಗ ನಮ್ಮ ಲಚ್ಚಿ ಟೀಂ ಜೊತೆ ಕಾಣಿಸಿಕೊಂಡಿರುವುದು ಈ ಸೀರಿಯಲ್‌ನಲ್ಲಿ ಮುಖ್ಯವಾದ ಪಾತ್ರವೇನಾದರೂ ಮಾಡಿದ್ದಾರಾ ಎಂಬ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.

ಇದನ್ನೂ ಓದಿ: Radhika Kumaraswamy : ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ ಅನೌನ್ಸ್‌!

ಸಾಂಘವಿ ಪೋಸ್ಟ್‌

ಅಜಾಗ್ರತ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ರಾಧಿಕಾ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ ಮತ್ತು ಮರಾಜಯಪ್ರಕಾಶ್, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ಮತ್ತು ವಿನಯಾ ಪ್ರಸಾದ್ ಕೂಡ ನಟಿಸಲಿದ್ದಾರೆ. ಶ್ರೀಹರಿ ಸಂಗೀತ ನೀಡಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಾಹಣ ನೀಡಲಿದ್ದಾರೆ.ಠಿ ಸೇರಿದಂತೆ ಏಳು ಭಾಷೆಗಳಲ್ಲಿ ʼಅಜಾಗ್ರತʼವನ್ನು ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತದೆ ಮತ್ತು ಬಿಡುಗಡೆ ಮಾಡಲಾಗುತ್ತದೆ.

Exit mobile version