ಬೆಂಗಳೂರು : ʼನಮ್ಮ ಪವರ್ ರನ್ ʼ ಎಂಬ ಮಣ್ಣು ರಕ್ಷಣೆಗಾಗಿನ ಓಟ ಕಾರ್ಯಕ್ರಮಕ್ಕೆ ಪುನಿತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಭಾನುವಾರ ಕಂಠೀರವ ಸ್ಟೇಡಿಯಂನಲ್ಲಿ ಚಾಲನೆ ನೀಡಿದ್ದಾರೆ.
ಪುನೀತ್ ಪೋಟೋ ಪಕ್ಕ ನಿಂತು ಅಶ್ವಿನಿ ಪುನೀತ್ ರಾಜ್ಕುಮಾರ್ ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ಇದೇ ಕಾರ್ಯಕ್ರಮ ʼಅಪ್ಪು ಇನ್ಯುʼ ಎಂದು ಆಯೋಜಿಸಲಾಗುತ್ತದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಈ ಸಂದರ್ಭದಲ್ಲಿ ತಿಳಿಸಿದರು.
ಅಂದು ಕಂಠೀರವ ಸ್ಟೇಡಿಯಮ್ಗೆ ಅಪ್ಪು ಅಂತಿಮ ದರ್ಶನಕ್ಕೆ ಆಗಮಿಸಿದ್ದಂತೆಯೇ ಅಪ್ಪು ಅಭಿಮಾನಿಗಳು ಭಾನುವಾರ ಈ ಕಾರ್ಯಕ್ರಮಕ್ಕೂ ಆಗಮಿಸಿದ್ದರು.
ಪ್ರತಿ ವರ್ಷ ಮಾರ್ಚ್ ೧೭ ರಂದು ಅಂದರೆ ಪುನೀತ್ ರಾಜ್ಕುಮಾರ್ ಅವರ ಹುಟ್ಟು ಹಬ್ಬದಂದು ಬೃಹತ್ ಕಾರ್ಯಕ್ರಮ ಸಂಘಟಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದರು. ಈ ಸಂದರ್ಭದಲ್ಲಿ ಸ್ಯಾಂಡಲ್ವುಡ್ನ ಜನಪ್ರಿಯ ಹಾಡುಗಳಿಗೆ ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ | ಅಪ್ಪು ತೊಟ್ಟಿದ್ದ ಜಾಕೆಟ್ ಫ್ರೇಮ್ ಹಾಕಿಸಿಟ್ಟಿರುವ ಸಚಿವರ ಪುತ್ರ!