Site icon Vistara News

Nana Patekar: ನಾನಾ ಪಾಟೇಕರ್ ವಿಡಿಯೊ ವಿವಾದ; ನನ್ನನ್ನು ಕ್ಷಮಿಸಿ ಎಂದ ನಟ!

Nana Patekar

ಬೆಂಗಳೂರು: ನಾನಾ ಪಾಟೇಕರ್ (Nana Patekar) ತಮ್ಮ ಮುಂದಿನ ಚಿತ್ರದ ಚಿತ್ರೀಕರಣವನ್ನು ವಾರಾಣಸಿಯಲ್ಲಿ ನಡೆಸುತ್ತಿದ್ದಾಗ ಚಿತ್ರೀಕರಣದ ಸಮಯದಲ್ಲಿ, ಹುಡುಗನೊಬ್ಬ ನಟನ ಹತ್ತಿರ ಬಂದು ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದ. ಆ ವೇಳೆ ಹುಡುಗನ ತಲೆಗೆ ನಟ ಥಳಿಸಿದ್ದರು. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಬಾರಿ ಚರ್ಚೆಗೆ ಒಳಗಾಗಿತ್ತು. ನಿರ್ದೇಶಕ ಅನಿಲ್ ಶರ್ಮಾ ಕೂಡ ಈ ಸುದ್ದಿ ಸುಳ್ಳು ಎಂತಲೂ ಹೇಳಿಕೆ ನೀಡಿದ್ದರು. ಇದೀಗ ನಾನಾ ಪಾಟೇಕರ್ ಅವರೇ ವೈರಲ್ ಆಗಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಈ ವೈರಲ್ ವಿಡಿಯೊ ಸುಳ್ಳು ಎಂದು ನಿರ್ದೇಶಕ ಅನಿಲ್ ಶರ್ಮಾ ಈ ಹಿಂದೆ ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಇದು ವಾಸ್ತವವಾಗಿ ಅವರ ಮುಂಬರುವ ಸಿನಿಮಾದ ಒಂದು ಶಾಟ್ ಎಂದು ಅವರು ಹೇಳಿದ್ದರು. ಇದೀಗ ಈ ವಿಡಿಯೊ ಬಗ್ಗೆ ನಾನಾ ಪಾಟೇಕರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

“ನಾನು ಹುಡುಗನಿಗೆ ಹೊಡೆದ ವೀಡಿಯೊ ವೈರಲ್ ಆಗುತ್ತಿದೆ. ಈ ಸೀಕ್ವೆನ್ಸ್ ನಮ್ಮ ಚಿತ್ರದ ಒಂದು ಭಾಗವಾಗಿದ್ದು ನಾವು ಅದರ ರಿಹರ್ಸಲ್​ ಮಾಡುತ್ತಿದ್ದೆವು. ನಾನು ಆ ಹುಡುಗ ಚಿತ್ರತಂಡದ ಸದಸ್ಯ ಎಂದು ಭಾವಿಸಿ ರಿಹರ್ಸಲ್​ ಮಾಡಿದ್ದೇನೆ. ಆ ಬಳಿಕ ನನಗೆ ತಿಳಿಯಿತ್ತು ಆತ ಚಿತ್ರತಂಡದ ಸದಸ್ಯನಲ್ಲವೆಂದು. ಹಾಗಾಗಿ ನಾನು ಅವನನ್ನು ಮತ್ತೆ ಕರೆಯಲು ಹೊರಟಿದ್ದೆ ಆದರೆ ಅವನು ಓಡಿಹೋದನು. ಬಹುಶಃ ಅವನ ಸ್ನೇಹಿತನು ವೀಡಿಯೊವನ್ನು ಶೂಟ್ ಮಾಡಿರಬಹುದು. ನಾನು ಯಾರನ್ನೂ ಫೋಟೊಗೆ ಬರುವುದು ಬೇಡ ಎಂದು ಹೇಳಿಲ್ಲ. ಉದ್ದೇಶಪೂರ್ವಕವಾಗಿ ಮಾಡಿದಲ್ಲ ದಯವಿಟ್ಟು ಕ್ಷಮಿಸಿʼʼಎಂದು ಹೇಳಿದ್ದಾರೆ.

ಇದನ್ನೂ ಓದಿ: Nana Patekar: ಹುಡುಗನ ತಲೆಗೆ ಜೋರಾಗಿ ಥಳಿಸಿದ ನಾನಾ ಪಾಟೇಕರ್!

ನವೆಂಬರ್ 15 ರಂದು, ವಾರಾಣಸಿಯಲ್ಲಿ ನಾನಾ ಪಾಟೇಕರ್ ಅವರ ವೀಡಿಯೊ ವೈರಲ್‌ ಆಗಿತ್ತು.  ಚಿತ್ರೀಕರಣದ ಸಮಯದಲ್ಲಿ, ಹುಡುಗನೊಬ್ಬ ನಟನ ಹತ್ತಿರ ಬಂದು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದ. ಸಿಬ್ಬಂದಿ ಆ ಹುಡುಗನ ಕತ್ತು ಹಿಡಿದು ಸೆಟ್‌ನಿಂದ ಹೊರಹೋಗುವಂತೆ ಮಾಡಿದ್ದರು. ಅದೇ ಸಂದರ್ಭದಲ್ಲಿ ನಟ ನಾನಾ ಪಾಟೇಕರ್ ಹುಡುಗನ ತಲೆಗೆ ಜೋರಾಗಿ ಬಾರಿಸಿದ್ದರು. ನಾನಾ ಪಾಟೇಕರ್ ಅವರ ಈ ವರ್ತನೆಗೆ ಜನ ಛೀಮಾರಿ ಹಾಕಿದ್ದರು.

ನಾನಾ ಪಾಟೇಕರ್ ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿಯವರ ʼದಿ ವ್ಯಾಕ್ಸಿನ್ ವಾರ್‌ʼನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಾಜಿ ಡೈರೆಕ್ಟರ್ ಜನರಲ್ ಪಾತ್ರವನ್ನು ನಿರ್ವಹಿಸಿದ್ದರು. ನಾನಾ ಪಾಟೇಕರ್ ಶೀಘ್ರದಲ್ಲೇ ಪ್ರಕಾಶ್ ಝಾ ನಿರ್ದೇಶನದ ರಾಜಕೀಯ ಥ್ರಿಲ್ಲರ್ ಸಿನಿಮಾ ‘ಲಾಲ್ ಬಟ್ಟಿ’ ಮೂಲಕ ಒಟಿಟಿಗೆ ಪದಾರ್ಪಣೆ ಮಾಡಲಿದ್ದಾರೆ..

Exit mobile version