Site icon Vistara News

Naseeruddin Shah:‌ ಅತಿಯಾದ ದೇಶಪ್ರೇಮ ಒಳ್ಳೇದಲ್ಲ ಎಂದ ನಾಸೀರುದ್ದೀನ್‌ ಶಾಗೆ ನಾನಾ ಪಾಟೇಕರ್ ಗುದ್ದು!

Nana Patekar Naseeruddin Shah

ಬೆಂಗಳೂರು: ನಾಸಿರುದ್ದೀನ್ ಶಾ (Naseeruddin Shah) ಇತ್ತೀಚೆಗೆ ಸನ್ನಿ ಡಿಯೋಲ್ ಅಭಿನಯದ ಗದರ್ 2 ಮತ್ತು ಅದಾ ಶರ್ಮಾ ಅವರ ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ಯಶಸ್ಸಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಈ ದಿನಗಳಲ್ಲಿ ‘ಜಿಂಗೊಯಿಸಂ’ (jingoist) (ಅತಿಯಾದ ದೇಶಪ್ರೇಮ) ಹೇಗೆ ಮಾರಾಟವಾಗುತ್ತಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಈ ಬಗ್ಗೆ ನಟ ನಾನಾ ಪಾಟೇಕರ್ (Nana Patekar ) ಅವರು ನಾಸಿರುದ್ದೀನ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ನಾಸಿರುದ್ದೀನ್ ಹೇಳಿಕೆಗೆ ಗದರ್ 2 ನಿರ್ದೇಶಕ ಅನಿಲ್ ಶರ್ಮಾ ಕೂಡ ಪ್ರತಿಕ್ರಿಯಿಸಿದ್ದಾರೆ.

ನಾಸಿರುದ್ದೀನ್ ಶಾ ಹೇಳಿದ್ದೇನು?

ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ನಾಸಿರುದ್ದೀನ್ ಶಾ ಬಾಲಿವುಡ್‌ನಲ್ಲಿ ಈಗ ಯಾವ ರೀತಿಯ ಚಿತ್ರಗಳು ತಯಾರಾಗುತ್ತಿವೆ ಎಂಬುದರ ಬಗ್ಗೆ ಹೇಳಿಕೊಂಡಿದ್ದರು.ʻʻಅತಿಯಾದ ದೇಶಪ್ರೇಮ ಅಪಾಯಕಾರಿ. ಸಿನಿಮಾದ ಜನಪ್ರಿಯತೆ ಎನ್ನುವುದು ಇದರಿಂದಲೇ ಪ್ರೇರಿತಗೊಂಡಿದೆ. ನಿಮ್ಮ ದೇಶವನ್ನು ಪ್ರೀತಿಸಿದರೆ ಸಾಕಾಗುವುದಿಲ್ಲ. ಗದರ್ 2 ಚಿತ್ರಗಳು ಸಾಕಷ್ಟು ಹಾನಿಕರ. ನಾನು ಆ ಚಿತ್ರಗಳನ್ನು ನೋಡಿಲ್ಲ. ಆದರೆ, ಅವು ಯಾವ ವಿಚಾರದ ಬಗ್ಗೆ ಇದೆ ಎನ್ನುವುದು ಗೊತ್ತಿದೆʼʼ ಎಂದಿದ್ದರು.

“ವಾಸ್ತವವಾಗಿ, ದಿ ಕೇರಳ ಸ್ಟೋರಿ ಮತ್ತು ಗದರ್ 2, ಸಿನಿಮಾಗಳನ್ನು ನಾನು ನೋಡಿಲ್ಲ, ಆದರೆ ಅವುಗಳ ಬಗ್ಗೆ ನನಗೆ ತಿಳಿದಿದೆ. ಕಾಶ್ಮೀರ ಫೈಲ್ಸ್‌ನಂತಹ ಚಲನಚಿತ್ರಗಳು ಹೆಚ್ಚು ಜನಪ್ರಿಯವಾಗಿವೆ. ಆದರೆ ಸುಧೀರ್ ಮಿಶ್ರಾ, ಅನುಭವ್ ಸಿನ್ಹಾ ಮತ್ತು ಹಂಸಲ್ ನಿರ್ಮಿಸಿದ ಚಲನಚಿತ್ರಗಳು ಗೊಂದಲದ ಸಂಗತಿಯಾಗಿದೆ. ತಮ್ಮ ಕಾಲದ ಸತ್ಯವನ್ನು ಬಿಂಬಿಸಲು ಪ್ರಯತ್ನಿಸುತ್ತಿರುವ ಮೆಹ್ತಾ ಅವರು ಯಾರಿಗೂ ಕಾಣುವುದಿಲ್ಲ, ಆದರೆ ಈ ಚಲನಚಿತ್ರ ನಿರ್ಮಾಪಕರು ಎದೆಗುಂದದೆ ಕಥೆಗಳನ್ನು ಹೇಳುವುದನ್ನು ಮುಂದುವರಿಸುವುದು ಮುಖ್ಯವಾಗಿದೆʼʼಎಂದಿದ್ದರು.

ಇದನ್ನೂ ಓದಿ: Naseeruddin Shah Birthday : ಈ ನಟನ ಮೊದಲ ಸಂಬಳ ಬರೀ ಏಳೂವರೆ ರೂಪಾಯಿಯಾಗಿತ್ತಂತೆ!

ನಾಸಿರುದ್ದೀನ್ ಶಾ ಹೇಳಿಕೆಗೆ ನಾನಾ ಪಾಟೇಕರ್ ಪ್ರತಿಕ್ರಿಯೆ ಏನು?

ನಾನಾ ಪಾಟೇಕರ್ ಮಾತನಾಡಿ ʻʻನಾಸಿರ್ ಅವರಿಗೆ ರಾಷ್ಟ್ರೀಯತೆ ಎಂದರೆ ಏನು ಎಂದು ನೀವು ಕೇಳಿದ್ದೀರಾ? ನನ್ನ ಪ್ರಕಾರ, ರಾಷ್ಟ್ರದ ಮೇಲೆ ಪ್ರೀತಿಯನ್ನು ತೋರಿಸುವುದು ರಾಷ್ಟ್ರೀಯತೆ ಮತ್ತು ಅದು ಕೆಟ್ಟದ್ದಲ್ಲ. ಗದರ್ ಆ ರೀತಿಯ ವಿಷಯವನ್ನು ಹೊಂದಿರುತ್ತದೆ. ನಾನು ಕೇರಳ ಸ್ಟೋರಿಯನ್ನು ನೋಡಿಲ್ಲ, ಹಾಗಾಗಿ ನಾನು ಅದರ ಬಗ್ಗೆ ಪ್ರತಿಕ್ರಿಯಿಸಲಾರೆʼʼ ಎಂದು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ನಾಸಿರುದ್ದೀನ್ ಶಾ ಹೇಳಿಕೆಗೆ ನಿರ್ದೇಶಕ ಅನಿಲ್ ಶರ್ಮಾ ಕೂಡ ಪ್ರತಿಕ್ರಿಯಿಸಿದ್ದಾರೆ. ಗದರ್ 2 ಸಿನಿಮಾವನ್ನು ಮೊದಲು ನೋಡುವಂತೆ ಹಿರಿಯ ನಟ ನಾಸಿರುದ್ದೀನ್ ಶಾ ಅವರಿಗೆ ಒತ್ತಾಯಿಸಿದ್ದಾರೆ. ಮಾಧ್ಯಮವೊಂದರಲ್ಲಿ ಈ ಬಗ್ಗೆ ಮಾತನಾಡಿ ʻʻನಾನು ನಾಸಿರುದ್ದೀನ್ ಶಾ ಅವರ ಅಭಿಮಾನಿ. ಅವರು ಆ ಹೇಳಿಕೆಗಳನ್ನು ನೀಡಿದ್ದರೆ, ನನ್ನ ಸಿನಿಮಾವನ್ನು ವೀಕ್ಷಿಸಲು ನಾನು ಅವರಲ್ಲಿ ವಿನಂತಿಸುತ್ತೇನೆ. ಸಿನಿಮಾ ನೋಡಿದ ಮೇಲೆ ಖಂಡಿತವಾಗಿಯೂ ತಮ್ಮ ಅಭಿಪ್ರಾಯವನ್ನು ಬದಲಾಯಿಸುತ್ತಾರೆ. ನಾಸಿರುದ್ದೀನ್ ಶಾ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆʼʼಎಂದಿದ್ದಾರೆ.

Exit mobile version