ಬೆಂಗಳೂರು: ʻದಿ ವ್ಯಾಕ್ಸಿನ್ ವಾರ್’ ನಂತರ ನಾನಾ ಪಾಟೇಕರ್ (Nana Patekar) ತಮ್ಮ ಮುಂದಿನ ಚಿತ್ರದ ಚಿತ್ರೀಕರಣವನ್ನು ವಾರಣಾಸಿಯಲ್ಲಿ ನಡೆಸುತ್ತಿದ್ದಾರೆ. ಚಿತ್ರೀಕರಣದ ಸಮಯದಲ್ಲಿ, ಹುಡುಗನೊಬ್ಬ ನಟನ ಹತ್ತಿರ ಬಂದು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದಾನೆ. ಸಿಬ್ಬಂದಿ ಆ ಹುಡುಗನ ಕತ್ತು ಹಿಡಿದು ಸೆಟ್‌ನಿಂದ ಹೊರಹೋಗುವಂತೆ ಮಾಡುತ್ತಾರೆ. ಅದೇ ಸಂದರ್ಭದಲ್ಲಿ ನಟ ನಾನಾ ಪಾಟೇಕರ್ ಹುಡುಗನ ತಲೆಗೆ ಜೋರಾಗಿ ಬಾರಿಸಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನಾ ಪಾಟೇಕರ್ ಅವರ ಈ ವರ್ತನೆಗೆ ಜನ ಛೀಮಾರಿ ಹಾಕಿದ್ದಾರೆ.
ವಾರಣಾಸಿಯಲ್ಲಿ ನಾನಾ ಪಾಟೇಕರ್ ಶೂಟಿಂಗ್ ವೇಳೆ ಹುಡುಗನೊಬ್ಬ ನಟನ ಹತ್ತಿರ ಬಂದು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದಾನೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಪಾಟೇಕರ್ ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ ಅಭಿಮಾನಿಯ ತಲೆಗೆ ಜೋರಾಗಿ ಹೊಡೆಯುವುದನ್ನು ಕಾಣಬಹುದು. ವಾರಣಾಸಿಯ ದಶಾಶ್ವಮೇಧ ಘಾಟ್‌ಗೆ ಹೋಗುವ ರಸ್ತೆಯಲ್ಲಿ ನಾನಾ ಪಾಟೇಕರ್ ಕಂದು ಬಣ್ಣದ ಬ್ಲೇಜರ್ ಮತ್ತು ಟೋಪಿ ಧರಿಸಿದ್ದರು. ನಟನ ಪಕ್ಕದಲ್ಲಿ ನಿಂತಿದ್ದ ಸಿಬ್ಬಂದಿ ಆ ಹುಡುಗನ ಕತ್ತು ಹಿಡಿದು ಸೆಟ್‌ನಿಂದ ಹೊರಹೋಗುವಂತೆ ಮಾಡುತ್ತಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನ ಛೀಮಾರಿ ಹಾಕಿದ್ದಾರೆ.
ವಿಡಿಯೊಗೆ ಅಭಿಮಾನಿಯೊಬ್ಬರು, “ವಾಸ್ತವವಾಗಿ, ನಾವು ಸಾಮಾನ್ಯ ಜನರು ಭಾರತದಲ್ಲಿ ಈ ನಟರು ಮತ್ತು ಕ್ರಿಕೆಟ್ ಆಟಗಾರರಿಗೆ ದೇವರ ಸ್ಥಾನಮಾನವನ್ನು ನೀಡಿದ್ದೇವೆ, ಆದ್ದರಿಂದ ಇಂತಹ ಕೃತ್ಯಗಳು ಆದಾಗ ಕಪಾಳಮೋಕ್ಷ ಮಾಡಲು ಮತ್ತು ಒದೆಯಲು ಸಿದ್ಧರಾಗಿರಬೇಕುʼʼಎಂದು ಬರೆದುಕೊಂಡಿದ್ದಾರೆ. ʻʻಮುಂಬೈ ಅಟ್ಯಾಕ್ ಚಿತ್ರದ ಕೊನೆಯಲ್ಲಿ, ಈ ಸಂಭಾವಿತ ವ್ಯಕ್ತಿ ತಾನೊಬ್ಬ ದೊಡ್ಡ ದೇಶಭಕ್ತ ಎಂಬಂತೆ ಮಾತನಾಡುತ್ತಿದ್ದನು, ಆದರೆ ಇದು ನಾನಾ ಪಾಟೇಕರ್ ಅವರ ವಾಸ್ತವ ಗುಣ. ಸಾಮಾನ್ಯ ಜನರೊಂದಿಗೆ ಇಂತಹ ವರ್ತನೆ ದುರದೃಷ್ಟಕರ. ನಮ್ಮ ನಿಜವಾದ ಹೀರೊಗಳು ಗಡಿಯಲ್ಲಿದ್ದಾರೆ, ಚಲನಚಿತ್ರ ಪರದೆಯ ಮೇಲೆ ಅಲ್ಲʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Tamannaah Bhatia: ತಮನ್ನಾಗೆ ಕುಟುಂಬದಿಂದ ಒತ್ತಡ? ಶೀಘ್ರದಲ್ಲೇ ಹಸೆಮಣೆಗೆ ಮಿಲ್ಕಿ ಬ್ಯೂಟಿ!
ವೈರಲ್ ವಿಡಿಯೊ
वाराणसी में नाना पाटेकर ने अपने फैंस को टपली मारा जर्नी फिल्म की शूटिंग के दौरान सेल्फी लेने पहुंचा था फैंस #Nanapatekar #Varanasi pic.twitter.com/HwUaVAyuIm
— बाबा बकचोद (@iamBakchodguru) November 15, 2023
ನಾನಾ ಪಾಟೇಕರ್ ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿಯವರ ʼದಿ ವ್ಯಾಕ್ಸಿನ್ ವಾರ್ʼನಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಾಜಿ ಡೈರೆಕ್ಟರ್ ಜನರಲ್ ಪಾತ್ರವನ್ನು ನಿರ್ವಹಿಸಿದ್ದರು. ನಾನಾ ಪಾಟೇಕರ್ ಶೀಘ್ರದಲ್ಲೇ ಪ್ರಕಾಶ್ ಝಾ ನಿರ್ದೇಶನದ ರಾಜಕೀಯ ಥ್ರಿಲ್ಲರ್ ಸಿನಿಮಾ ‘ಲಾಲ್ ಬಟ್ಟಿ’ ಮೂಲಕ ಒಟಿಟಿಗೆ ಪದಾರ್ಪಣೆ ಮಾಡಲಿದ್ದಾರೆ.