ಬೆಂಗಳೂರು : ಟಾಲಿವುಡ್‌ನಲ್ಲಿ 2002ರಲ್ಲಿ ಸದ್ದು ಮಾಡಿದ ಸಿನಿಮಾ ಅಂದರೆ ನಂದಮೂರಿ ಬಾಲ ಕೃಷ್ಣ (Nandamuri Balakrishna) ಅಭಿನಯದ ʻಚೆನ್ನಕೇಶವ ರೆಡ್ಡಿ ಸಿನಿಮಾʼ. ಇದೀಗ ಮತ್ತೆ ಈ ಸಿನಿಮಾ ಶನಿವಾರ (ಸೆ.24ರಂದು ) ಯುಎಸ್‌ಎ ಹಾಗೂ ಆಂಧ್ರಪ್ರದೇಶದಲ್ಲಿ ಮರು ಬಿಡುಗಡೆಯಾಗಿದೆ. ಬಿಡುಗಡೆ ಆದ ದಿನ ಚಿತ್ರ ಅದ್ಭುತವಾಗಿ ಪ್ರದರ್ಶನ ಕಂಡಿದೆ.
20 ವರ್ಷಗಳ ನಂತರ ಚಿತ್ರವನ್ನು ಯುಎಸ್‌ಎ ಹಾಗೂ ಆಂಧ್ರಪ್ರದೇಶದ 300 ಸ್ಕ್ರೀನ್‌ಗಳಲ್ಲಿ ಮರು ಬಿಡುಗಡೆ ಮಾಡಲಾಗಿತ್ತು. ಯುಎಸ್‌ಎನಲ್ಲಿ ವಿಶೇಷ ಪ್ರದರ್ಶನ ಕಂಡಿರುವ ಚೆನ್ನಕೇಶವ ರೆಡ್ಡಿ ಚಿತ್ರ 45 ಸಾವಿರ ರೂ. ಅಂದರೆ 36 ಲಕ್ಷಕ್ಕೂ ಅಧಿಕ ಹಣ ಗಳಿಸಿದೆ. ಈ ಮೂಲಕ ಪವನ್ ಕಲ್ಯಾಣ್ ನಟನೆಯ ʻಜಲ್ಸಾʼ ಚಿತ್ರ ಹಾಗೂ ಪುರಿ ಜಗನ್ನಾಥ್ ನಿರ್ದೇಶನದ ʻಪೊಕರಿʼ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.
ಇದನ್ನೂ ಓದಿ | Allu Arjun | ಅಲ್ಲು ಅರ್ಜುನ್ ಫ್ಯಾಮಿಲಿ ಶುರು ಮಾಡಿದೆ ಸ್ಟುಡಿಯೊ: ಪುಷ್ಪ 2 ಶೂಟಿಂಗ್ ತಡವಾಗಿದ್ದೇಕೆ?
ಈ ಚಿತ್ರವನ್ನು ನಿರ್ದೇಶಕ ವಿವಿ ವಿನಾಯಕ್ ತಾವೇ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಿತ್ತು. ಶ್ರೀ ಸಾಯಿ ಗಣೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಬೆಲ್ಲಕೊಂಡ ಸುರೇಶ್ ಚೆನ್ನಕೇಶವ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಬಾಲಯ್ಯ ಹಾಗೂ ಟಬು ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಚೆನ್ನಕೇಶವ ರೆಡ್ಡಿ ಚಿತ್ರ ಹಾಡುಗಳು ಸಹ ಕೇಳುಗರ ಮೆಚ್ಚುಗೆ ಪಡೆದುಕೊಂಡಿದ್ದು, ಮಣಿ ಶರ್ಮಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಶ್ರಿಯಾ ಸರನ್, ಜಯಪ್ರಕಾಶ್ ರೆಡ್ಡಿ, ಆನಂದ್ ರಾಜ್, ಸೀಮಾ ಶಾಸ್ತ್ರಿ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ | Krishnam Raju died | ತೆಲುಗು ಸಿನಿಮಾದ ರೆಬೆಲ್ ಸ್ಟಾರ್ ಕೃಷ್ಣಂ ರಾಜು ಇನ್ನಿಲ್ಲ