Site icon Vistara News

Nandamuri Balakrishna: ನಂದಮೂರಿ ಬಾಲಕೃಷ್ಣ NBK 108 ಸಿನಿಮಾದ ಫಸ್ಟ್ ಲುಕ್‌ ಔಟ್‌

Nandamuri Balakrishna NBK 108 First Look Out

ಬೆಂಗಳೂರು: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಶೀಘ್ರದಲ್ಲೇ NBK 108ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರಿಲೇರು ನೀಕೆವ್ವರು ಮತ್ತು ಎಫ್ 2 ನಂತಹ ಸಿನಿಮಾಗಳ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರಗಳ ನಿರ್ದೇಶಕ ಅನಿಲ್ ರವಿಪುಡಿ ಅವರೊಂದಿಗೆ ನಟ ಕೈ ಜೋಡಿಸಿದ್ದಾರೆ. ಹೆಸರಿಡದ ಈ ಸಿನಿಮಾಗೆ ತಾತ್ಕಾಲಿಕವಾಗಿ NBK 108 ಎಂದು ಕರೆಯಲಾಗುತ್ತಿದೆ. ಇದೀಗ ಚಿತ್ರತಂಡ ಫಸ್ಟ್-ಲುಕ್ ಪೋಸ್ಟರ್‌ಗಳನ್ನು ಅನಾವರಣಗೊಳಿಸಿದ್ದು, ಚಲನಚಿತ್ರ ಸಿನಿರಸಿಕರಲ್ಲಿ ಕುತೂಹಲ ಹೆಚ್ಚಾಗಿದೆ.

NBK 108 ಫಸ್ಟ್ ಲುಕ್ ಪೋಸ್ಟರ್ ಔಟ್

ಮಾರ್ಚ್ 22ರಂದು, ಅನಿಲ್ ರವಿಪುಡಿ ಅವರು NBK 108 ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಬಾಲಕೃಷ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ಗಳಲ್ಲಿ ‘ಈ ಬಾರಿ ನಿಮ್ಮ ಕಲ್ಪನೆಗೂ ಮೀರಿ’ ಎಂಬ ಅಡಿಬರಹವಿದೆ. ಈ ಚಿತ್ರವು ಬಾಲಯ್ಯ ಅವರ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚು ಮಾಸ್ ಆಗಿರಲಿದೆ ಎನ್ನಲಾಗಿದೆ.

ಇದನ್ನೂ ಓದಿ: Nandamuri Balakrishna | ಅದ್ಧೂರಿಯಾಗಿ ಸೆಟ್ಟೇರಿದೆ ನಂದಮೂರಿ ಬಾಲಕೃಷ್ಣ 108ನೇ ಚಿತ್ರ: ಶ್ರೀಲೀಲಾ ನಾಯಕಿ!

https://twitter.com/AnilRavipudi/status/1638402102480470017?s=20

ಅನಿಲ್ ರವಿಪುಡಿ ಅವರು ಮಹೇಶ್ ಬಾಬು ಅವರಿಗೆ ಸರಿಲೇರು ನೀಕೆವ್ವರು (2020)ನಲ್ಲಿ ನಿರ್ದೇಶಿಸಿದ ನಂತರ ಸ್ಟಾರ್ ಚಲನಚಿತ್ರ ನಿರ್ದೇಶಕರಾಗಿ ಹೊರಹೊಮ್ಮಿದರು. ಬಾಲಕೃಷ್ಣ ಸಿನಿಮಾದ ಟ್ರೇಡ್ ಮಾರ್ಕ್ ಮಾಸ್ ಅಂಶಗಳೂ ಇದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. NBK 108ನಲ್ಲಿ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ನಾಯಕಿಯರಾಗಿ ನಟಿಸಲಿದ್ದಾರೆ. ಇನ್ನಷ್ಟು ಮಾಹಿತಿಯನ್ನು ಚಿತ್ರತಂಡ ಮುಂದಿನ ದಿನಗಳಲ್ಲಿ ಹೇಳಿಕೊಳ್ಳಲಿದೆ.

Exit mobile version