Site icon Vistara News

Nandamuri Balakrishna | ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

Nandamuri Balakrishna

ಬೆಂಗಳೂರು: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಆ್ಯಕ್ಷನ್ ಸಿನಿಮಾ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಹಾಡು ‘ಜೈ ಬಾಲಯ್ಯ’ ನವೆಂಬರ್‌ 25ರಂದು ಬಿಡುಗಡೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಡಿ ಗೋಪಿಚಂದ್ ಮಲಿನೇನಿ ನಿರ್ದೇಶಿಸಿರುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಮಾಸ್ ಆಗಿ ನಂದಮೂರಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಅಭಿಮಾನಿಗಳು ಈ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ.

ಹೈದರಾಬಾದ್‌ನಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಹಾಡಿನ ಮೂಲಕ ಸಿನಿರಸಿಕರ ಮನಗೆಲ್ಲಲು ಹೊರಟಿದೆ. ಚಿತ್ರದ ‘ಜೈ ಬಾಲಯ್ಯ’ ಹಾಡಿನ ಲಿರಿಕಲ್ ವೀಡಿಯೊ ಸಾಂಗ್ ಬಿಡುಗಡೆ ಮಾಡಿದೆ. ರಾಮ್ ಜೋಗಯ್ಯ ಶಾಸ್ತ್ರಿ ಸಾಹಿತ್ಯಕ್ಕೆ ಕರಿಮುಲ್ಲ ದನಿಯಾಗಿದ್ದು, ತಮನ್ ಎಸ್ ಮಾಸ್ ಮ್ಯೂಸಿಕ್ ಕಿಕ್ ನೀಡಿದೆ. ಬಾಲಯ್ಯ ಅಭಿಮಾನಿಗಳು ಹಾಡು ಕೇಳಿ ಥ್ರಿಲ್ ಆಗಿದ್ದು, ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಆರು ಲಕ್ಷಕ್ಕೂ ಅಧಿಕ ವೀವ್ಸ್‌ ಪಡೆದುಕೊಂಡಿದೆ.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ನನ್ನ ಕ್ರಶ್‌: ನಟ ನಂದಮೂರಿ ಬಾಲಕೃಷ್ಣ

2023ರ ಸಂಕ್ರಾಂತಿ ಹಬ್ಬಕ್ಕೆ ‘ವೀರ ಸಿಂಹ ರೆಡ್ಡಿ’ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ಹಾಗೂ ವರಲಕ್ಷ್ಮೀ ಶರತ್ ಕುಮಾರ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಚಿತ್ರವನ್ನು ನವೀನ್ ಯಾರ್ನೇನಿ ಹಾಗೂ ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ | Rashmika Mandanna | ರಶ್ಮಿಕಾ ಮಂದಣ್ಣ ನಟನೆಯ 2ನೇ ಹಿಂದಿ ಚಿತ್ರ ನೇರವಾಗಿ ಒಟಿಟಿಗೆ? ನಟಿ ಟ್ರೋಲ್‌ ಆಗಿದ್ಯಾಕೆ?

Exit mobile version