Site icon Vistara News

Nandamuri Balakrishna | ಬಾಲಯ್ಯ ಜತೆ ದುನಿಯಾ ವಿಜಯ್ ನಟಿಸಿದ ‘ವೀರ ಸಿಂಹ ರೆಡ್ಡಿ’ ಟ್ರೈಲರ್‌ ಔಟ್‌!

Nandamuri Balakrishna

ಬೆಂಗಳೂರು : ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಆ್ಯಕ್ಷನ್ ಸಿನಿಮಾ ‘ವೀರ ಸಿಂಹ ರೆಡ್ಡಿ’ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ವೀರಸಿಂಹ ರೆಡ್ಡಿ ಜನವರಿ 12 ರಂದು ಚಿತ್ರ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಕನ್ನಡ ದುನಿಯಾ ವಿಜಯ್ ಕೂಡ ಪ್ರಮುಖ ಪಾತ್ರ ನಿರ್ವಹಣೆ ಮಾಡಿದ್ದಾರೆ.

ಟ್ರೈಲರ್ ಸಾಕಷ್ಟು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿದೆ. ಪಂಚ್ ಡೈಲಾಗ್‌ಗಳು ಶಿಳ್ಳೆ ಹೊಡೆಯುವಂತಿವೆ. ವೀರ ಸಿಂಹ ರೆಡ್ಡಿ ಆಕ್ಷನ್ ಡ್ರಾಮಾವಾಗಿದ್ದು, ನಂದಮೂರಿ ಬಾಲಕೃಷ್ಣ ಮಾಸ್ ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್‌ ವಿಲನ್‌ ಆಗಿ ನಟಿಸಿದ್ದಾರೆ. ಮುಸಲಿ ಮಡುಗು ಪ್ರತಾಪ್ ರೆಡ್ಡಿ ಪಾತ್ರವನ್ನು ದುನಿಯಾ ವಿಜಯ್ ನಿರ್ವಹಿಸಿದ್ದಾರೆ.

ಇದನ್ನೂ ಓದಿ | Nandamuri Balakrishna | ಬಾಲಯ್ಯ ಜತೆ ನಟಿಸುವುದು ಸಣ್ಣ ವಿಷಯವೇನಲ್ಲ: ದುನಿಯಾ ವಿಜಯ್‌

ಸಂಗೀತವನ್ನು ಎಸ್ ಥಮನ್ ಸಂಯೋಜಿಸಿದ್ದಾರೆ. ಅಖಂಡ ಸಿನಿಮಾ ನಂತರ ಈ ವರ್ಷ ಬಾಲಕೃಷ್ಣ ಅವರ ಮೊದಲ ಚಿತ್ರ ಇದಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಚಿತ್ರವನ್ನು ನವೀನ್ ಯಾರ್ನೇನಿ ಹಾಗೂ ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಅಜಿತ್ ಕುಮಾರ್ ಅವರ ತುನಿವು ಮತ್ತು ದಳಪತಿ ವಿಜಯ್ ನೇತೃತ್ವದ ವರಿಸು ಕೂಡ ಇದೇ ಅವಧಿಯಲ್ಲಿ ಬಿಡುಗಡೆಗೆ ಸಿದ್ಧವಾಗಿವೆ.

ಇದನ್ನೂ ಓದಿ | Nandamuri Balakrishna | ಅದ್ಧೂರಿಯಾಗಿ ಸೆಟ್ಟೇರಿದೆ ನಂದಮೂರಿ ಬಾಲಕೃಷ್ಣ 108ನೇ ಚಿತ್ರ: ಶ್ರೀಲೀಲಾ ನಾಯಕಿ!

Exit mobile version