Site icon Vistara News

Nandamuri Balakrishna | ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ’ ಬಿಡುಗಡೆ, ಅಭಿಮಾನಿಗಳಿಗೆ ಹಬ್ಬ

Nandamuri Balakrishna

ಬೆಂಗಳೂರು : ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅಭಿನಯದ ಆ್ಯಕ್ಷನ್ ಸಿನಿಮಾ ‘ವೀರ ಸಿಂಹ ರೆಡ್ಡಿ’ ಚಿತ್ರ ಜನವರಿ 12 ಗುರುವಾರ ಬಿಡುಗಡೆಯಾಗಿದೆ. ನಟ ನಂದಮೂರಿ ಬಾಲಕೃಷ್ಣ ಅವರ ಈ ಚಿತ್ರ ಜನಮನ ಸೆಳೆದಿದೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ವೀರಸಿಂಹ ರೆಡ್ಡಿ ಮಾಸ್-ಆ್ಯಕ್ಷನ್ ಡ್ರಾಮಾ ಚಿತ್ರ. ಇದೇ ಮೊದಲ ಬಾರಿಗೆ ಶ್ರುತಿ ಹಾಸನ್ ಮತ್ತು ಬಾಲಕೃಷ್ಣ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕನ್ನಡದ ನಟ ದುನಿಯಾ ವಿಜಯ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಬಾಲಯ್ಯ ಫುಲ್ ಎಮೋಷನಲ್ ಮತ್ತು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಎಂಟರ್‌ಟೈನರ್ ಎಂದು ಟ್ವೀಟ್‌ನಲ್ಲಿ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೈಲರ್ ಸಾಕಷ್ಟು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿದೆ. ಪಂಚ್ ಡೈಲಾಗ್‌ಗಳು ಶಿಳ್ಳೆ ಹೊಡೆಯುವಂತಿವೆ. ಶ್ರುತಿ ಹಾಸನ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್‌ ವಿಲನ್‌ ಆಗಿ ನಟಿಸಿದ್ದಾರೆ. ಮುಸಲಿ ಮಡುಗು ಪ್ರತಾಪ್ ರೆಡ್ಡಿ ಪಾತ್ರವನ್ನು ದುನಿಯಾ ವಿಜಯ್ ನಿರ್ವಹಿಸಿದ್ದಾರೆ.

ಇದನ್ನೂ ಓದಿ | Nandamuri Balakrishna | ಬಾಲಯ್ಯ ಜತೆ ದುನಿಯಾ ವಿಜಯ್ ನಟಿಸಿದ ‘ವೀರ ಸಿಂಹ ರೆಡ್ಡಿ’ ಟ್ರೈಲರ್‌ ಔಟ್‌!

ಸಂಗೀತವನ್ನು ಎಸ್ ಥಮನ್ ಸಂಯೋಜಿಸಿದ್ದಾರೆ. ಅಖಂಡ ಸಿನಿಮಾ ನಂತರ ಈ ವರ್ಷ ಬಾಲಕೃಷ್ಣ ಅವರ ಮೊದಲ ಚಿತ್ರ ಇದಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಚಿತ್ರವನ್ನು ನವೀನ್ ಯಾರ್ನೇನಿ ಹಾಗೂ ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ | Nandamuri Balakrishna | ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ರಿಲೀಸ್

Exit mobile version