ಬೆಂಗಳೂರು: ತೆಲುಗು ಚಿತ್ರರಂಗದ ಖ್ಯಾತ ನಟ, ನ್ಯಾಚುರಲ್ ಸ್ಟಾರ್ ನಾನಿ (Nani) ಅಭಿನಯದ ಬಹುನಿರೀಕ್ಷಿತ ‘ದಸರಾ’ ಸಿನಿಮಾ ಆರಂಭದಿಂದ ಬಹಳಷ್ಟು ಸದ್ದು ಮಾಡುತ್ತಿದೆ. ವಿಭಿನ್ನ ಪ್ರಕಾರದ ಸಿನಿಮಾಗಳನ್ನು ಚಿತ್ರಪ್ರೇಮಿಗಳಿಗೆ ಉಣಬಡಿಸುವ ನಾನಿ ಈ ಬಾರಿ ಮತ್ತೊಂದು ಫ್ರೆಶ್ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಶ್ರೀಕಾಂತ್ ಒಡೆಲಾ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಮಾಸ್ ಆ್ಯಕ್ಷನ್ ಸಿನಿಮಾವಾಗಿರುವ “ದಸರಾʼ ಸಿನಿಮಾ ತೆಲುಗು ಜತೆಗೆ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿದೆ. ನಾನಿ ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ. ಈಗಾಗಲೇ ರಿಲೀಸ್ ಆಗಿದ್ದ ಫಸ್ಟ್ ಗ್ಲಿಂಪ್ಸ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಚಿತ್ರತಂಡ ಸ್ನೇಹಿತರ ದಿನದ ಅಂಗವಾಗಿ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದೆ.
ಇದನ್ನೂ ಓದಿ | Rocketry: The Nambi Effect | ಮಾಧವನ್ ನಿರ್ದೇಶಿಸಿ, ನಟಿಸಿರುವ ರಾಕೆಟ್ರಿ ಸಿನಿಮಾ ವೀಕ್ಷಿಸಿದ ಸಂಸದರು
ಫ್ರೆಂಡ್ಸ್‌ಶಿಪ್ ಡೇ ಅಂಗವಾಗಿ ನಾನಿ ಗ್ಯಾಂಗ್ ಅನ್ನು ಚಿತ್ರತಂಡ ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ. ಎರಡು ರೈಲ್ವೇ ಹಳಿಗಳ ನಡುವೆ ಇರುವ ಟ್ರಕ್‌ವೊಂದರಲ್ಲಿ ಕುಳಿತ ನಾನಿ ಟೀಂನಲ್ಲಿ ಕನ್ನಡದ ಹುಡುಗ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಕೂಡ ಕಾಣಿಸಿಕೊಂಡಿರುವುದು ವಿಶೇಷ. ಇದು ಸಿನಿಮಾ ಮೇಲಿನ ನಿರೀಕ್ಷೆ ಇನ್ನೂ ಹೆಚ್ಚಿಸಿದೆ.
ನಾನಿ ಜೋಡಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ. ಕಲ್ಲಿದ್ದಲು ಗಣಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆಯುವ ಮಾಸ್ ಆ್ಯಕ್ಷನ್ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಸಮುದ್ರಖನಿ, ಸಾಯಿ ಕುಮಾರ್, ಜರೀನಾ ವಹಾಬ್ ನಟಿಸಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್‌ನಡಿ ಸುಧಾಕರ್ ಚೆರುಕುರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ, ಸಂತೋಷ್ ನಾರಾಯಣನ್ ಸಂಗೀತ, ನವೀನ್ ನೂಲಿ ಸಂಕಲನ ಸಿನಿಮಾಕ್ಕಿದೆ.
ಇದನ್ನೂ ಓದಿ | Tollywood | ಆಗಸ್ಟ್ 1ರಿಂದ ತೆಲುಗು ಚಿತ್ರೀಕರಣ ಸ್ಥಗಿತ: ಏನು ಟಾಲಿವುಡ್‌ನ ಸಮಸ್ಯೆ?