Site icon Vistara News

Actor Nani: ಮೃಣಾಲ್ ಠಾಕೂರ್ ಜತೆ ನಾನಿ ಲಿಪ್‌ ಲಾಕ್‌; ಅಭಿಪ್ರಾಯ ಹಂಚಿಕೊಂಡ ನಟ!

Nani lip-lock with Mrunal Thakur

ಬೆಂಗಳೂರು: ಸದ್ಯಕ್ಕೆ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ನಾನಿ (Actor Nani) ಕೂಡ ಒಬ್ಬರು. ನಾನಿ ಸದ್ಯ ʻಹಾಯ್‌ ನಾನ್ನʼ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಮೃಣಾಲ್ ಠಾಕೂರ್ (Mrunal Thakur) ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಅ.15ರಂದು ಸಿನಿಮಾದ ಟೀಸರ್‌ (Nani and Mrunal Thakur) ಅನಾವರಣಗೊಂಡಿದ್ದು, ಲಿಪ್‌ ಲಾಕ್‌ ಸೀನ್‌ಗಳು ಹೈಲೈಟ್‌ ಆಗಿವೆ. ಈ ಬಗ್ಗೆ ವರದಿಗಾರರ ಕೆಲವು ಪ್ರಶ್ನೆಗಳಿಗೆ ಶಾಂತವಾಗಿಯೇ ಉತ್ತರ (kissing scenes) ನೀಡಿದ್ದಾರೆ ನಾನಿ.

ವರದಿಗಾರರೊಬ್ಬರು ʻʻನಾನಿ ಅವರ ಸಿನಿಮಾಗಳಲ್ಲಿ ಚುಂಬನದ ದೃಶ್ಯಗಳು ಸ್ಕ್ರಿಪ್ಟ್‌ನ ಅಗತ್ಯಕ್ಕೆ ಇರಲಿದೆಯೇ? ಅಥವಾ ಈ ದೃಶ್ಯಗಳನ್ನು ಸೇರಿಸಲು ನಟ ಸ್ವತಃ ನಿರ್ದೇಶಕರನ್ನು ಕೇಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ, ನಾನಿ ಶಾಂತವಾಗಿ ಮತ್ತು ವಿನಮ್ರವಾಗಿ ಉತ್ತರಿಸಿದ್ದಾರೆ.

ನಾನಿ ಮಾತನಾಡಿ ʻʻನನ್ನ ಎಲ್ಲ ಸಿನಿಮಾಗಳಲ್ಲಿ ಲಿಪ್‌ ಲಾಕ್‌ ಸೀನ್‌ಗಳು ಒಳಗೊಂಡಿರುವುದಿಲ್ಲ. ಸುಂದರನಿಕಿ ಮತ್ತು ದಸರಾದಲ್ಲಿ ಯಾವುದೇ ಕಿಸ್‌ ದೃಶ್ಯಗಳಿಲ್ಲʼʼ ಎಂದು ನಾನಿ ಉತ್ತರಿಸಿದರು. ನಟ ಮಾತು ಮುಂದುವರಿಸಿ ʻʻಸ್ಕ್ರಿಪ್ಟ್‌ನಲ್ಲಿ ಲಿಪ್‌ ಲಾಕ್‌ ದೃಶ್ಯ ಬೇಕು ಎಂತಾದರೆ ಅದನ್ನು ಮಾಡಬೇಕಾಗಬಹುದು. ನಟನಾಗಿ ನಿರ್ದೇಶಕರ ದೃಷ್ಟಿಗೆ ನಿಷ್ಠರಾಗಿರಬೇಕಾಗುತ್ತದೆ. ಇದು ನಮ್ಮ ವೈಯಕ್ತಿಕ ಆಯ್ಕೆಯಲ್ಲʼʼ ಎಂದು ಅವರು ವಿವರಿಸಿದರು.

ಇದನ್ನೂ ಓದಿ: Actor Nani: ʻಹಾಯ್ ನಾನ್ನʼ ಟೀಸರ್ ರಿಲೀಸ್‌; ಅಪ್ಪ ಮಗಳ ಬಾಂಧವ್ಯದ ಜತೆಗೊಂದು ಪ್ರೀತಿಯ ಪಯಣ!

ಹಾಯ್ ನಾನ್ನ ಸಿನಿಮಾಗೆ ಯುವ ನಿರ್ದೇಶಕ ಶೌರ್ಯುವ್ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಚಿತ್ರವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂಧವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಪ್ಪನಾಗಿ ನಾನಿ ಹಾಗೂ ಮಗಳಾಗಿ ಬೇಬಿ ಕಿಯಾರಾ ಖಾನ್ ನಟಿಸಿದ್ದಾರೆ.

ತಂದೆ ಮತ್ತು ಮಗಳ ಬಾಂಧವ್ಯದ ಜತೆಗೆ ಪ್ರೀತಿ ಕಥಾಹಂದರವೇ ಟೀಸರ್ ಹೈಲೆಟ್. ತಾಯಿ ಇಲ್ಲದ ಮಗಳಿಗೆ ಅಪ್ಪನೇ ಸರ್ವಸ್ವ. ಅಪ್ಪನಿಗೆ ಮಗಳ ಜೀವ. ಈ ಚೆಂದದ ಕುಟುಂಬಕ್ಕೆ ಎಂಟ್ರಿಯಾಗುವ ನಾಯಕಿ. ಆ ನಂತರ ಏನಾಗುತ್ತದೆ ಎನ್ನುವುದೇ ಒನ್‌ ಲೈನ್‌ ಸ್ಟೋರಿ.

ಇದನ್ನೂ ಓದಿ: Actor Nani: ಒಟಿಟಿಗೆ ಬರಲಿದೆ ನಾನಿ ನಟನೆಯ ʻದಸರಾʼ ಸಿನಿಮಾ

ಮೋಹನ್ ಚೆರುಕುರಿ, ಮೂರ್ತಿ ಕಲಗಾರ, ಡಾ. ವಿಜೇಂದ್ರ ರೆಡ್ಡಿ ಅವರು ‘ವೈರ ಎಂಟರ್ಟೇನ್ಮೆಂಟ್’ ಬ್ಯಾನರ್ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಸಾನೂ ಜಾನ್ ವರ್ಗೀಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಂಕಲನದ ಜವಾಬ್ದಾರಿಯನ್ನು ಪ್ರವೀಣ್ ಆಂಥೋನಿ ಅವರು ನಿಭಾಯಿಸುತ್ತಿದ್ದಾರೆ. ಡಿಸೆಂಬರ್ 7ಕ್ಕೆ ಪಂಚ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Exit mobile version