Site icon Vistara News

Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !

Narendra Modi Oath Ceremony Celebs Congratulate PM Modi

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಪಡೆದ ಬೆನ್ನಲ್ಲೇ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ (Narendra Modi Oath) ಸ್ವೀಕರಿಸಿದ್ದಾರೆ. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣವಚನ ಬೋಧಿಸಿದಿರು. ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ಕಂಗನಾ ರಣಾವತ್‌, ವಿಕ್ರಾಂತ್ ಮಾಸ್ಸೆ ಮತ್ತು ಇತರ ಸೆಲೆಬ್ರಿಟಿಗಳು ಇದ್ದರು. ಸೆಲೆಬ್ರಿಟಿಗಳು ಮೋದಿ ಅವರಿಗೆ ವಿಶ್‌ ಮಾಡಿದ್ದು ಹೀಗೆ.

“3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು… ಕೌಶಲ್ಯ, ಅಭಿವೃದ್ಧಿ, ಶಿಕ್ಷಣ ಮತ್ತು ದೇಶದ ಸುರಕ್ಷತೆಯ ಕಡೆಗಿನ ನಿಮ್ಮ ಬದ್ಧತೆಗೆ ನಾವು ಧನ್ಯರು’…”ಎಂದು ನಟ ರಿಷಬ್‌ ಶೆಟ್ಟಿ ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: PM Narendra Modi: “ಒಕ್ಕೂಟ ವ್ಯವಸ್ಥೆಯ ಆಶಯ…” ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ನಟ ಅಜಯ್ ದೇವಗನ್ “ಪ್ರಧಾನಿ ನರೇಂದ್ರಮೋದಿ ಜಿ ಅವರ ಮರು ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು! ಅವರ ಬುದ್ಧಿವಂತಿಕೆ ಮತ್ತು ಸಹಾನುಭೂತಿಯಿಂದ ಸಮೃದ್ಧಿ ಮತ್ತು ಶ್ರೇಷ್ಠತೆಯ ಕಡೆಗೆ ಭಾರತವನ್ನು ಮಾರ್ಗದರ್ಶನ ಮಾಡುವಲ್ಲಿ ನಿರಂತರ ಯಶಸ್ಸನ್ನು ಬಯಸುತ್ತೇವೆ, ”ಎಂದು ಬರೆದುಕೊಂಡಿದ್ದಾರೆ.


ರಾಜ್‌ಕುಮಾರ್ ರಾವ್ ಅವರು ಎಕ್ಸ್‌ನಲ್ಲಿ “ಈ ಐತಿಹಾಸಿಕ ಮೂರನೇ ಸತತ ಗೆಲುವಿಗಾಗಿ ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಜೀ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ನಮ್ಮ ದೇಶವು ಅಭಿವೃದ್ಧಿಗೆ ಬರಲಿ. ದೇವರು ನಿಮ್ಮನ್ನು ಆಶೀರ್ವದಿಸಲಿ ಸರ್ʼʼಎಂದು ಬರೆದುಕೊಂಡಿದ್ದಾರೆ.


ಅನುಪಮ್ ಖೇರ್ ಹೀಗೆ ಬರೆದುಕೊಂಡಿದ್ದಾರೆ “ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ. ಇಂದು ನಿಮ್ಮನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ದೇಶವಾಸಿಗಳಿಗಾಗಿ ನೀವು ಹಗಲಿರುಳು ಮಾಡುತ್ತಿರುವ ಶ್ರಮ ಸ್ಪೂರ್ತಿದಾಯಕ! ನಿಮ್ಮ ರಕ್ಷಣೆಗಾಗಿ ನನ್ನ ತಾಯಿ ಕಳುಹಿಸಿದ ರುದ್ರಾಕ್ಷಿ ಮಾಲೆಯನ್ನು ನೀವು ಸ್ವೀಕರಿಸಿದ ಗೌರವವನ್ನು ನಾವು ಯಾವಾಗಲೂ ಸ್ಮರಿಸುತ್ತೇವೆ. ಜೈ ಹೋ. ಜೈ ಹಿಂದ್!” ಎಂದು ಬರೆದುಕೊಂಡಿದ್ದಾರೆ.

“ಹೃತ್ಪೂರ್ವಕ ಅಭಿನಂದನೆಗಳು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರಿಗೆ. ವಸುಧೈವ ಕುಟುಂಬಕಮ್‌ನ ತತ್ತ್ವಚಿಂತನೆಗಳಲ್ಲಿ ಪ್ರೀತಿ ಮತ್ತು ದಯೆಯಿಂದಾಗಿ ನೀವು ಕರುಣೆಯಿಂದ ನಮ್ಮನ್ನು ಅದ್ಭುತವಾದ ಬೆಳವಣಿಗೆ, ಪ್ರಗತಿ, ಸಮೃದ್ಧಿಯ ಯುಗಕ್ಕೆ ಕೊಂಡೊಯ್ಯುತ್ತೀರಿ. ಮತ್ತು ಜಗತ್ತು ವಿಸ್ಮಯದಿಂದ ನೋಡುವ ವೈಭವಯುತ ರಾಷ್ಟ್ರವನ್ನಾಗಿ ಮಾಡುತ್ತೀರಿ ಎಂದು ನಮಗೆ ತಿಳಿದಿದೆ. ನಿಮಗೆ ದೇವರು ಒಳ್ಳೆಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಆರ್ ಮಾಧವನ್ ಬರೆದಿದ್ದಾರೆ.

ಇದನ್ನೂ ಓದಿ: Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭಾಗಿ

ಸಮಾರಂಭದಲ್ಲಿ ರಜನಿಕಾಂತ್ ಅವರು ಭಾಗಿಯಾಗಿದ್ದರು. ಚೆನ್ನೈನಿಂದ ದೆಹಲಿಗೆ ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ನಟ ಮಾತನಾಡಿ ʻʻನಾನು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೇನೆ. ಇದು ಅತ್ಯಂತ ಐತಿಹಾಸಿಕ ಕಾರ್ಯಕ್ರಮ. ಸತತ ಮೂರನೇ ಅವಧಿಗೆ ಮೋದಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಾರೆ. ನರೇಂದ್ರ ಮೋದಿಯವರ ದೊಡ್ಡ ಸಾಧನೆಯಾಗಿದೆ, ಅವರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ಇದು ಪ್ರಜಾಪ್ರಭುತ್ವದ ಆರೋಗ್ಯಕರ ಸಂಕೇತವಾಗಿದೆʼʼಎಂದರು.ವಿಶೇಷವೆಂದರೆ ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಸೀಟು ಸಹ ಬಂದಿಲ್ಲ.

ನರೇಂದ್ರ ಮೋದಿ ಅವರ ಜತೆಗೆ ಹಲವು ಸಂಸದರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ಟಿಡಿಪಿ, ಜೆಡಿಯು, ಜೆಡಿಎಸ್‌ ಹಾಗೂ ಎಲ್‌ಜೆಪಿ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದ ಲೈವ್‌ ವೀಕ್ಷಣೆಗೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಎಲ್‌ಇಡಿ ಪರದೆ, ಟಿವಿಗಳ ವ್ಯವಸ್ಥೆ ಮಾಡಿದ್ದರು. ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಲೇ ಭಾರತ್‌ ಮಾತಾ ಕೀ ಜೈ, ಮೋದಿ ಮೋದಿ ಎಂಬ ಘೋಷಣೆಗಳು ಮೊಳಗಿದವು.

Exit mobile version