ಬೆಂಗಳೂರು: ತೆಲುಗು ನಟ ನರೇಶ್ ಹಾಗೂ ನಟ ಪವಿತ್ರಾ ಲೋಕೇಶ್ (Naresh Pavithra) ವೈವಾಹಿಕ ಜೀವನಕ್ಕೆ (Naresh Pavitra Marriage) ಕಾಲಿಟ್ಟಿದ್ದಾರೆ. ಇದೀಗ ಈ ಜೋಡಿ ದುಬೈಗೆ ಹಾರಿದೆ. ಈ ಕುರಿತ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನರೇಶ್ ಸೋಷಿಯಲ್ ಮೀಡಿಯಾದಲ್ಲಿ ಸಪ್ತಪದಿ ತುಳಿದಿರುವ ವಿಡಿಯೊವನ್ನು ಹಂಚಿಕೊಂಡು ಮದುವೆಯಾಗಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.
ದುಬೈನಲ್ಲಿ ನರೇಶ್ ಹಾಗೂ ಪವಿತ್ರಾ ಕಾಲ ಕಳೆದ ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ. ದುಬೈನ ಬೇರೆ ಬೇರೆ ಸ್ಥಳಗಳಲ್ಲಿ ಸೆರೆ ಹಿಡಿಯಲಾದ ಫೋಟೊಗಳು ಕೂಡ ಹಂಚಿಕೆಯಾಗಿವೆ. ಇದೀಗ ನರೇಶ್ ಪವಿತ್ರಾ ಜತೆ ನಾಲ್ಕನೇ ಮದುವೆಯಾಗಿದ್ದಾರೆ. ನರೇಶ್ ಮೂರನೇ ಪತ್ನಿ ರಮ್ಯಾ ಅವರು ನರೇಶ್ ಅವರನ್ನು ಪವಿತ್ರಾ ಲೋಕೇಶ್ ಮದುವೆಯಾಗಲು ಬಿಡುವುದಿಲ್ಲ ಎಂದು ಮಾಧ್ಯಮದ ಮುಂದೆ ಈ ಹಿಂದೆ ಹೇಳಿಕೊಂಡಿದ್ದರು. ರಮ್ಯಾ ಅವರ ಈ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮೂಲಕ ನರೇಶ್ ಅವರು ʻʻಶೀಘ್ರದಲ್ಲೇ ಮದುವೆಯಾಗಲಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಪವಿತ್ರಾ ಲೋಕೇಶ್ ಅವರಿಗೆ ಲಿಪ್ ಕಿಸ್ ಕೊಟ್ಟಿರುವ ವಿಡಿಯೊ ಹಂಚಿಕೊಂಡಿದ್ದರು.
ಇದನ್ನೂ ಓದಿ: Pavitra Lokesh | ನರೇಶ್-ಪವಿತ್ರಾ ಮದುವೆ ನಡೆಯಲು ಬಿಡುವುದಿಲ್ಲ: ರಮ್ಯಾ ರಘುಪತಿ
ಪವಿತ್ರಾ ಲೋಕೇಶ್ ಅವರಿಗೂ ಇದು ಮೂರನೇ ಮದುವೆ ಎನ್ನಲಾಗುತ್ತಿದೆ. ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದು, ಪವಿತ್ರಾ ಲೋಕೇಶ್ ಜತೆ ನಾಲ್ಕನೇ ಮದುವೆಯಾಗಿದ್ದಾರೆ. ನಟಿ ಪವಿತ್ರಾ ಲೋಕೇಶ್ ಕೂಡ ಎರಡು ಮದುವೆಯಾಗಿದ್ದು, ಇದು ಮೂರನೇ ವಿವಾಹ ಎನ್ನಲಾಗುತ್ತಿದೆ.