Site icon Vistara News

Pavitra Lokesh | ಪವಿತ್ರಾ ಲೋಕೇಶ್‌ ಭುಜದ ಮೇಲೆ ನರೇಶ್‌ ಕೈ: ವಿಡಿಯೊದಲ್ಲಿ ಹೇಳಿದ್ದೇನು?

Pavitra Lokesh

ಬೆಂಗಳೂರು: ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ (Pavitra Lokesh ) ಸೋಷಿಯಲ್‌ ಮೀಡಿಯಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ತಾವಿಬ್ಬರೂ ನಟಿಸಿದ ಚಿತ್ರದ ಕುರಿತು ಮಾತನಾಡಿರುವ ವಿಡಿಯೊ ವೈರಲ್‌ ಆಗಿದೆ. ವಿಡಿಯೊದಲ್ಲಿ ನರೇಶ್‌ ಅವರು ಮಾತನಾಡುವಾಗ ಪವಿತ್ರಾ ಲೋಕೇಶ್‌ ಅವರ ಭುಜದ ಮೇಲೆ ಕೈ ಹಾಕಿರುವುದು ನೋಡಿ ನೆಟ್ಟಿಗರು ಇಬ್ಬರೂ ರಿಲೇಷನ್‌ಶಿಪ್‌ನಲ್ಲಿ ಇದ್ದಂಗಿದೆ ಎಂದು ಕಮೆಂಟ್‌ ಮಾಡಿದ್ದಾರೆ!

ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಒಟ್ಟಿಗೆ ನಟಿಸಿರುವ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. ಇದು ಒಟಿಟಿಗೆ ನೇರವಾಗಿ ಬಂದಿದ್ದು, ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಹಾಸ್ಯ ನಟ ಆಲಿ ನಿರ್ಮಿಸಿ ನಟಿಸಿರುವ ಸಿನಿಮಾ ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಚಿತ್ರದಲ್ಲಿ ನರೇಶ್ ಮತ್ತು ಪವಿತ್ರಾ ಮತ್ತೆ ಗಂಡ- ಹೆಂಡತಿ ಪಾತ್ರಗಳಲ್ಲಿ ನಟಿಸಿದ್ದಾರೆ. ಕಿರಣ್ ಶ್ರೀಪುರಂ ಈ ಚಿತ್ರಕ್ಕೆ ನಿರ್ದೆಶನ ಮಾಡಿದ್ದಾರೆ. ಚಿತ್ರದಲ್ಲಿ ಸಿನಿಮಾ ನೇರವಾಗಿ ‘ಆಹಾ’ ಒಟಿಟಿ ಫ್ಲಾಟ್‌ಫಾರ್ಮ್‌ಗೆ ಬಂದಿದೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ ನರೇಶ್‌ ಮತ್ತು ಪವಿತ್ರಾ ಲೋಕೇಶ್‌.

ಇದನ್ನೂ ಓದಿ | Pavitra Lokesh | ಪವಿತ್ರಾ ಲೋಕೇಶ್‌-ನರೇಶ್‌ ನಡುವೆ ಬ್ರೇಕಪ್‌ ಆಗಿದೆ ಅಂತಿದೆ ಟಾಲಿವುಡ್‌!

ರಮ್ಯಾ ರಘುಪತಿ ಅವರನ್ನು ಕೆಣಕುವಂತಿದೆ ವಿಡಿಯೊ!
ಮಾತು ಮಾತಿಗೂ ನರೇಶ್‌ ಅವರು ಪವಿತ್ರಾ ಲೋಕೇಶ್‌ ಭುಜ ತಟ್ಟುತ್ತಿರುವುದು ಬೇಕಂತಲೇ 3ನೇ ಪತ್ನಿ ರಮ್ಯಾ ರಘುಪತಿ ಅವರನ್ನು ಕೆಣಕುವಂತಿದೆ ಎಂದೂ ಜನ ವ್ಯಾಖ್ಯಾನಿಸುತ್ತಿದ್ದಾರೆ!

ವಿಡಿಯೊದಲ್ಲಿ ಮಾತನಾಡಿದ ನರೇಶ್‌-ಪವಿತ್ರಾ, ಸಿನಿಮಾ ʻಆಹಾʼ ಒಟಿಟಿಗೆ ಬಂದಿದೆ. ಸಿನಿಮಾ ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಫೋನ್‌ ಕರೆಗಳು ಬರುತ್ತಿವೆ. ಕಂಟೆಂಟ್‌ ಸಿನಿಮಾ ಬಂದರೆ ಜನ ಇಷ್ಟ ಪಡುತ್ತಾರೆ. ಸಿನಿಮಾ ನೋಡಿ ಇಷ್ಟ ಪಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.

ಇಬ್ಬರೂ ಜತೆಯಲ್ಲಿ ಇಲ್ಲ?
ಟಾಲಿವುಡ್‌ ನಟ ನರೇಶ್‌ ಹಾಗೂ ನಟಿ ಪವಿತ್ರಾ ಲೋಕೇಶ್‌ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ ಎಂದು ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ಈ ಹಿಂದೆ ಆರೋಪಿಸಿದ್ದರು. ಇಬ್ಬರೂ ಮೈಸೂರಿನ ಹೋಟೆಲ್‌ವೊಂದರಲ್ಲಿ ರಮ್ಯಾ ರಘುಪತಿ ಕೈಗೆ ಸಿಕ್ಕಿಬಿದ್ದಿದ್ದರು. ಇಬ್ಬರೂ ಜತೆಯಲ್ಲಿ ಇಲ್ಲ, ಬೇರೆ ಆಗಿದ್ದಾರೆ ಎಂದು ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿತ್ತು.

ಈ ಪ್ರಕರಣದ ಹಿನ್ನೆಲೆಯಲ್ಲಿ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ಗೆ ಅಷ್ಟಾಗಿ ಸಿನಿಮಾಗಳು ಬರುತ್ತಿಲ್ಲ. ಇಬ್ಬರ ನಡುವಿನ ಬಾಂಧವ್ಯ ಹದಗೆಟ್ಟಿದೆ. ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿದ ಸಿನಿಮಾಗಳು ಹಿಂದೆ ಹಿಟ್‌ ಆಗಿದ್ದವು. ಆದರೆ ಈಗ ಇಬ್ಬರಿಗೂ ಆಫರ್‌ ಕಡಿಮೆಯಾಗಿದೆ ಎಂದು ಟಾಲಿವುಡ್‌ನಲ್ಲಿ ಸುದ್ದಿಯಾಗಿತ್ತು. ವಿವಾದಕ್ಕೆ ಸಿಲುಕಿರುವ ನರೇಶ್ ಹಾಗೂ ಪವಿತ್ರಾ ಲೋಕೇಶ್ ಬಗ್ಗೆ ತೆಲುಗು ಮಂದಿ ಆಸಕ್ತಿ ತೋರುತ್ತಿಲ್ಲ ಎಂದೂ ಸುದ್ದಿಯಾಗಿತ್ತು.

ಇದನ್ನೂ ಓದಿ | Pavitra Lokesh | ನನ್ನ ಮನೆ ಬಾಗಿಲಿಗೆ ಬಂದಿರೋದು ಅವಳು ಎಂದ ರಮ್ಯಾ ರಘುಪತಿ

Exit mobile version