ಬೆಂಗಳೂರು: ತೆಲುಗು ನಟ ನರೇಶ್ ಹಾಗೂ ನಟ ಪವಿತ್ರಾ ಲೋಕೇಶ್ ವೈವಾಹಿಕ ಜೀವನಕ್ಕೆ (Naresh Pavitra Marriage) ಕಾಲಿಟ್ಟಿದ್ದಾರೆ. ನರೇಶ್ ಸೋಷಿಯಲ್ ಮೀಡಿಯಾ ಸಪ್ತಪದಿ ತುಳಿದರುವ ವಿಡಿಯೊವನ್ನು ಹಂಚಿಕೊಂಡು ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಈ ಮುಂಚೆ ನರೇಶ್ ಜತೆಗಿನ ಸಂಬಂಧದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನಟಿ ಪವಿತ್ರಾ ಲೋಕೇಶ್ ಪೊಲೀಸ್ ಠಾಣೆ ಮಟ್ಟಿಲ್ಲನ್ನೂ ಏರಿದ್ದರು. ಇತ್ತ ನರೇಶ್ ಕೂಡ ತಮ್ಮಿಂದ ವಿಚ್ಛೇದನವನ್ನು ಪಡೆಯಲು ಮೂರನೆ ಪತ್ನಿ ರಮ್ಯಾ ರಘುಪತಿ ಅವರು 10 ಕೋಟಿ ರೂ. ಬೇಡಿಕೆ ಇಡುತ್ತಿದ್ದಾರೆ. ಅವರಿಂದ ಬಿಡುಗಡೆ ಕೊಡಿ ಎಂದು ಕೋರ್ಟ್‌ಗೆ ಮನವಿಯನ್ನೂ ಮಾಡಿದ್ದಾರೆ. ಇದೀಗ ನರೇಶ್ ಪವಿತ್ರಾ ಜತೆ ನಾಲ್ಕನೇ ಮದುವೆಯಾಗಿದ್ದಾರೆ.
ಮದುವೆ ನಡೆಯಲು ಬಿಡುವುದಿಲ್ಲ ಎಂದಿದ್ದ ರಮ್ಯಾ
ನರೇಶ್ ಮೂರನೇ ಪತ್ನಿ ರಮ್ಯಾ ಅವರು ನರೇಶ್ ಅವರನ್ನು ಪವಿತ್ರಾ ಲೋಕೇಶ್ ಮದುವೆಯಾಗಲು ಬಿಡುವುದಿಲ್ಲ ಎಂದು ಮಾಧ್ಯಮದ ಮುಂದೆ ಈ ಹಿಂದೆ ಹೇಳಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ ʻʻನನಗೆ ನರೇಶ್ ವಿಚ್ಛೇದನ ನೀಡಿಲ್ಲ. ತಮ್ಮ ರಾಜಕೀಯ ಆಕಾಂಕ್ಷೆ ಪೂರೈಸಿಕೊಳ್ಳಲು ನರೇಶ್ ನನ್ನನ್ನು ಮದುವೆಯಾಗಿದ್ದಾನೆ. ಆಗಲೇ ನರೇಶ್‌ರ ತಾಯಿ ವಿಜಯ ನಿರ್ಮಲಾ ನರೇಶ್‌ಗೆ ಎಚ್ಚರಿಕೆ ಕೊಟ್ಟಿದ್ದರು. ರಮ್ಯಾ ರಘುಪತಿಗೆ ಹಿಂಸೆ ಕೊಡುವುದು ಮಾಡಿದರೆ ಆಸ್ತಿಯಲ್ಲಿ ಒಂದು ಪೈಸೆಯೂ ಕೊಡುವುದಿಲ್ಲವೆಂದು. ಅದೇ ಕಾರಣಕ್ಕೆ ತಾಯಿ ತೀರಿ ಹೋಗುವವರೆಗೆ ಸುಮ್ಮನಿದ್ದು, ಬಳಿಕ ಪವಿತ್ರಾ ಜತೆ ಸಂಬಂಧ ಬೆಳೆಸಿದ್ದಾನೆʼʼ ಎಂದಿದ್ದರು.
ಇದನ್ನೂ ಓದಿ: Pavitra Lokesh | ನರೇಶ್-ಪವಿತ್ರಾ ಮದುವೆ ನಡೆಯಲು ಬಿಡುವುದಿಲ್ಲ: ರಮ್ಯಾ ರಘುಪತಿ
ಇದರ ಬೆನ್ನಲ್ಲೇ ಲಿಪ್ ಕಿಸ್ ವಿಡಿಯೊ ಹಂಚಿಕೊಂಡಿದ್ದ ನರೇಶ್-ಪವಿತ್ರಾ ಜೋಡಿ
ರಮ್ಯಾ ಅವರ ಈ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮೂಲಕ ನರೇಶ್ ಅವರು ʻʻಶೀಘ್ರದಲ್ಲೇ ಮದುವೆಯಾಗಲಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿʼʼಎಂದು ಪವಿತ್ರಾ ಲೋಕೇಶ್ ಅವರಿಗೆ ಲಿಪ್ ಕಿಸ್ ಕೊಟ್ಟಿರುವ ವಿಡಿಯೊ ಹಂಚಿಕೊಂಡಿದ್ದರು.
ಇದನ್ನೂ ಓದಿ: Pavitra Lokesh | ಶೀಘ್ರವೇ ಮದುವೆಯಾಗಲಿದ್ದೇವೆ ಎಂದು ಪವಿತ್ರಾ ಲೋಕೇಶ್‌ಗೆ ಲಿಪ್‌ಕಿಸ್ ಕೊಟ್ಟ ನರೇಶ್: ವಿಡಿಯೊ ಇಲ್ಲಿದೆ!
ಪವಿತ್ರಾಗಿದು ಮೂರನೇ ಮದುವೆ
ಪವಿತ್ರಾ ಲೋಕೇಶ್ ಅವರಿಗೂ ಇದು ಮೂರನೇ ಮದುವೆ ಎನ್ನಲಾಗುತ್ತಿದೆ. ನಟ ಸುಚೇಂದ್ರ ಪ್ರಸಾದ್ ಜತೆಗಿನ ಸಂಬಂಧದ ಬಗ್ಗೆಯೂ ಪವಿತ್ರಾ ಲೋಕೇಶ್ ಪ್ರತಿಕ್ರಿಯೆ ನೀಡಿದ್ದರು. ʻʻನಾನು ಮದುವೆ ಆಗಿಲ್ಲ. ನಾನೇಕೆ ವಿಚ್ಛೇದನ ತೆಗೆದುಕೊಳ್ಳಬೇಕು?ʼʼ ಎಂದು ಪ್ರಶ್ನಿಸಿದ್ದರು ʻʻನಾನು ಕಳೆದ 6 ವರ್ಷಗಳಿಂದ ಸುಚೇಂದ್ರ ಅವರಿಂದ ಬೇರೆ ಇದ್ದೇನೆ. ನಾನು ಮದುವೆಯಾಗಿರುವುದಕ್ಕೆ ದಾಖಲೆ ಏನಾದರೂ ಇದೆಯಾ? ಮದುವೆ ಆಗದೇ ಯಾಕೆ 11 ವರ್ಷಗಳ ಕಾಲ ಜತೆಗೆ ಇದ್ದೆವು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು. ಮದುವೆ ಆಗದೇ ಇರುವುದಕ್ಕೆ ಅವರೇ ಕಾರಣ. ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯʼʼ ಎಂದಿದ್ದರು.
ರಮ್ಯಾ ರಘುಪತಿಯಿಂದ ಬಿಡುಗಡೆ ಕೊಡಿ ಎಂದು ಕೋರ್ಟ್ ಮೆಟ್ಟಿಲೇರಿದ ನರೇಶ್
ತಮ್ಮಿಂದ ವಿಚ್ಛೇದನವನ್ನು ಪಡೆಯಲು ರಮ್ಯಾ ಅವರು 10 ಕೋಟಿ ರೂ. ಬೇಡಿಕೆ ಇಡುತ್ತಿದ್ದಾರೆ. ಅವರಿಂದ ಬಿಡುಗಡೆ ಕೊಡಿ ಎಂದು ಕೋರ್ಟ್‌ಗೆ ಮನವಿಯನ್ನೂ ಮಾಡಿದ್ದರು ನರೇಶ್. ನರೇಶ್ ಏಕಾಏಕಿ ಕೋರ್ಟ್ ಮೆಟ್ಟಿಲು ಹತ್ತಿದ್ದು, ʻʻತಮ್ಮ ಹೆಂಡತಿ ವಿಪರೀತ ತೊಂದರೆ ಕೊಡುತ್ತಿದ್ದಾರೆ. ನನ್ನನ್ನು ಕೊಲ್ಲಲು ಹಲವರು ನನ್ನ ಮನೆ ಸುತ್ತ ತಿರುಗುತ್ತಾರೆ. ರಮ್ಯಾರಿಂದಾಗಿ ನಾನು ನೆಮ್ಮದಿ ಕಳೆದುಕೊಂಡಿದ್ದೇನೆ. ಕೂಡಲೇ ನನಗೆ ಬಿಡುಗಡೆ ಕೊಡಿʼʼ ಎಂದು ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. ಸದ್ಯ ರಮ್ಯಾ ಮತ್ತು ನರೇಶ್ ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ನರೇಶ್ ವಿಚ್ಛೇದನ ಕೊಡಲು ಒಪ್ಪಿದರೂ, ರಮ್ಯಾ ನಿರಾಕರಿಸುತ್ತಿದ್ದಾರೆ. ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದು, ಪವಿತ್ರಾ ಲೋಕೇಶ್ ಜತೆ ನಾಲ್ಕನೇ ಮದುವೆಯಾಗಿದ್ದಾರೆ. ನಟಿ ಪವಿತ್ರಾ ಲೋಕೇಶ್ ಕೂಡ ಎರಡು ಮದುವೆಯಾಗಿದ್ದು, ಇದು ಮೂರನೇ ವಿವಾಹ ಎನ್ನಲಾಗುತ್ತಿದೆ.