Site icon Vistara News

Naresh Pavitra Marriage: ಮದುವೆ ವಿಡಿಯೊ ನೋಡಿ ಸಿನಿಮಾ ದೃಶ್ಯ ಅಂದ್ರು ನೆಟ್ಟಿಗರು: ʻಪವಿತ್ರ ಬಂಧನʼ ರೀಲಾ? ರಿಯಲ್ಲಾ?

Naresh Pavitra Marriage Reel or real

ಬೆಂಗಳೂರು: ತೆಲುಗು ನಟ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಸಪ್ತಪದಿ (Naresh Pavitra Marriage) ತುಳಿರಿರುವ ವಿಡಿಯೊ ಹಂಚಿಕೊಂಡ ಬೆನ್ನಲ್ಲೇ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಮನಬಂದಂತೆ ಕಮೆಂಟ್‌ ಮಾಡುತ್ತಿದ್ದಾರೆ. ನರೇಶ್‌ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಸಾಕಷ್ಟು ಬಾರಿ ಪವಿತ್ರಾ ಲೋಕೇಶ್ ಮತ್ತು ನರೇಶ್ ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ಆರೋಪ ಕೂಡ ಮಾಡಿದ್ದರು. ಇದೀಗ ಏಕಾಏಕಿ ನರೇಶ್‌ ಕೂಡ ಮದುವೆಯ ವಿಡಿಯೊ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಈ ವಿಡಿಯೊ ಸಿನಿಮಾ ದೃಶ್ಯಗಳು ಇರಬೇಕೆಂದು ಎಂದು ನೆಟ್ಟಗರು ಕಮೆಂಟ್‌ ಮಾಡುತ್ತಿದ್ದಾರೆ.

ವರದಿ ಪ್ರಕಾರ ಪವಿತ್ರಾ ಮತ್ತು ಲೋಕೇಶ್ ಅವರ ಲವ್ ಸ್ಟೋರಿಯನ್ನೇ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಆ ಸಿನಿಮಾದಲ್ಲಿ ಪವಿತ್ರಾ ನಾಯಕಿ, ನರೇಶ್ ನಾಯಕ. ಇಬ್ಬರ ಬದುಕಿನಲ್ಲಿ ನಡೆದ ಘಟನೆಗಳನ್ನೇ ಚಿತ್ರಕಥೆಯಾಗಿದೆಯಂತೆ. ಸಿನಿಮಾದಲ್ಲಿ ಇಬ್ಬರೂ ಮದುವೆ ಆಗುವ ಸನ್ನಿವೇಶ ಕೂಡ ಇದೆಯಂತೆ. ಸದ್ಯ ಹರಿಬಿಟ್ಟಿರುವ ವಿಡಿಯೊ ಕೂಡ ಸಿನಿಮಾದ ದೃಶ್ಯವೆಂದು ಹೇಳಲಾಗುತ್ತಿದೆ. ಆದರೆ ನರೇಶ್‌ ಮಾತ್ರ ವಿಡಿಯೊ ಹಂಚಿಕೊಂಡು ʻʻನಮ್ಮ ಈ ಹೊಸ ಪ್ರಯಾಣದಲ್ಲಿ ಶಾಂತಿ ಮತ್ತು ಸಂತೋಷದ ಜೀವನಕ್ಕಾಗಿ ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆʼʼಎಂದು ಹಂಚಿಕೊಂಡಿದ್ದಾರೆ. ಜತೆಗೆ “ಒಂದು ಪವಿತ್ರ ಬಂಧ.. ಎರಡು ಮನಸುಗಳು.. ಮೂರು ಮುಳ್ಳುಗಳು.. ಏಳು ಪಾದಗಳು” ಎಂತಲೂ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Naresh Pavitra Marriage: ಮೂರನೇ ಪತ್ನಿ ಡಿವೋರ್ಸ್‌ ಕೇಸ್‌ ನಡೆಯುತ್ತಿರುವಾಗಲೇ ನಾಲ್ಕನೇ ಮದುವೆ ಆದ ನರೇಶ್‌!

ಇನ್ನೂ ಕೆಲವರು ಇದು ರಿಯಲ್‌ ಸ್ಟೋರಿನಾ? ಅಥವಾ ರೀಲಾ? ಎಂತಲೂ ಕಮೆಂಟ್‌ ಮಾಡುತ್ತಿದ್ದಾರೆ. ಇದಕ್ಕೆ ನರೇಶ್‌ ಹಾಗೂ ಪವಿತ್ರಾ ಉತ್ತರ ನೀಡಬೇಕಿದೆ. ನರೇಶ್ ಹಾಗೂ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಕೌಟುಂಬಿಕ ಕಲಹ ಬೀದಿಗೆ ಬಂದಾಗ ಪವಿತ್ರಾ ಲೋಕೇಶ್ ಹೆಸರು ಹೊರಬಿದ್ದಿತ್ತು. ನರೇಶ್‌ ಹಾಗೂ ರಮ್ಯಾ ಅವರ ಡಿವೋರ್ಸ್‌ ಕೇಸ್‌ ಇನ್ನು ನಡೆಯುತ್ತಲೇ ಇದೆಯಾ ಅಥವಾ ವಿಚ್ಛೇದನ ದೊರತೆ ಬಳಿಕವೇ ಜೋಡಿ ಮದುವೆಯಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.

Exit mobile version