Site icon Vistara News

Naresh Pavitra: ನರೇಶ್-ಪವಿತ್ರಾ ಅಭಿನಯದ ‘ಮತ್ತೆ ಮದುವೆ’ಸಿನಿಮಾದ ಮೊದಲ ಹಾಡು ಬಿಡುಗಡೆ

Naresh Pavitra MattheMaduve Film UruloKaalave song Out

ಬೆಂಗಳೂರು: ತೆಲುಗು ನಟ ನರೇಶ್ ಹಾಗೂ ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ (Naresh Pavitra) ನಟನೆಯ ʻಮತ್ತೆ ಮದುವೆʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಚಿತ್ರ ʻಉರುಳೋ ಕಾಲವೇʼ ಎಂಬ ಗಾನಲಹರಿ ಅನಾವರಣಗೊಂಡಿದೆ. ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿರುವ ಹಾಡಿಗೆ ಸಂತೋಷ್ ವೆಂಕಿ ದನಿಯಾಗಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಉರುಳೋ ಕಾಲವೇ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ʻಮತ್ತೆ ಮದುವೆʼ ಸಿನಿಮಾ ಪ್ರತಿಷ್ಠಿತ ವಿಜಯ ಕೃಷ್ಣ ಮೂವೀಸ್ ಬ್ಯಾನರ್‌ನಡಿ ನಿರ್ಮಾಣವಾಗಿದೆ. ʻಮತ್ತೆ ಮದುವೆʼ ಚಿತ್ರಕ್ಕೆ ಎಂ. ಎಸ್. ರಾಜು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ.

ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸುತ್ತಿರುವ ʻಮತ್ತೆ ಮದುವೆʼ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಮೂಡಿಬರುತ್ತಿದ್ದು, ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ: Naresh Pavitra: ರಿಯಲ್ ಲೈಫ್ ಕಥೆಯಂತೆ ಭಾಸವಾದ ‘ಮತ್ತೆ ಮದುವೆ’ ಟೀಸರ್; ಲಿಪ್‌ ಕಿಸ್‌, ಲಾಡ್ಜ್‌ನಲ್ಲಿ ಸೆರೆ ಸಿಕ್ಕ ದೃಶ್ಯಗಳೂ ಇವೆ!

ರಿಯಲ್ ಲೈಫ್ ಕಥೆಯಂತೆ ಭಾಸವಾದ ‘ಮತ್ತೆ ಮದುವೆ’ ಟೀಸರ್

ಹೊಸ ವರ್ಷದಂದು ದಿನದಂದು ಪವಿತ್ರಾ ಲೋಕೇಶ್ ಹಾಗೂ ನರೇಶ್‌ ಲಿಪ್‌ ಕಿಸ್‌ ಮಾಡಿಕೊಂಡಿರುವ ವಿಡಿಯೊ ಹಂಚಿಕೊಂಡಿದ್ದರು. ಅದೊಂದು ಮದುವೆಯ ಆಮಂತ್ರಣ ಎನ್ನುವಂತೆ ವಿಡಿಯೊ ಮಾಡಿದ್ದರು. ಈ ವಿಡಿಯೊ ರಿಲೀಸ್ ಆಗಿ ಕೆಲವು ದಿನಗಳ ನಂತರ, ಅದೊಂದು ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ವಿಡಿಯೊ ಎಂದು ಹೇಳಲಾಯಿತು. ಈ ವಿಚಾರವಾಗಿ ನರೇಶ್ ಪತ್ನಿ ರಮ್ಯಾ ಗರಂ ಕೂಡ ಆದರು. ಅದು ‘ಮತ್ತೆ ಮದುವೆ’ ಸಿನಿಮಾದ ದೃಶ್ಯವೆಂದು ಟೀಸರ್‌ ಮೂಲಕ ಖಚಿತವಾಗಿತ್ತು.

Exit mobile version