Site icon Vistara News

Nasir Faraaz | ʻಕಾಬಿಲ್ʼ, ʻಬಾಜೀರಾವ್ ಮಸ್ತಾನಿʼ ಖ್ಯಾತಿಯ ಗೀತ ರಚನೆಕಾರ ನಾಸಿರ್ ಫರಾಜ್ ಇನ್ನಿಲ್ಲ

Nasir Faraaz

ಬೆಂಗಳೂರು : ಬಾಲಿವುಡ್ ಗೀತರಚನೆಕಾರ ನಾಸಿರ್ ಫರಾಜ್ (Nasir Faraaz) ಅವರು ಜನವರಿ 16, ಸೋಮವಾರ ನಿಧನರಾಗಿದರು. ʻಕೈಟ್ಸ್ʼ,ʻ ಕ್ರಿಶ್ʼ ಮತ್ತು ʻಕಾಬಿಲ್ʼ ಮುಂತಾದ ಹಿಟ್‌ ಚಿತ್ರಗಳಿಗೆ ಸಾಹಿತ್ಯ ಬರೆದು ಹೆಸರುವಾಸಿಯಾಗಿದ್ದರು. ಗಾಯಕ ಮುಜ್ತಾಬಾ ಅಜೀಜ್ ನಾಜಾ ತಮ್ಮ ಫೇಸ್‌ ಬುಕ್‌ ಪೋಸ್ಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಅವರೊಂದಿಗಿನ ಜತೆ ಇರುವ ಫೋಟೊಗಳನ್ನು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡ ಅಜೀಜ್ ನಾಜಾ ʻʻನಾಸಿರ್ ಫರಾಜ್ ಸಾಹೇಬ್ ಇನ್ನಿಲ್ಲ. ಅವರು ಭಾರತೀಯ ಚಿತ್ರರಂಗದ ಗೌರವಾನ್ವಿತ ಗೀತರಚನೆಕಾರರಲ್ಲಿ ಗುರುತಿಸಿಕೊಂಡಿದ್ದರು. ನಾವು ʻಬಾಜೀರಾವ್ ಮಸ್ತಾನಿʼ (2015) ಮತ್ತು ʻಹೆಮೊಲಿಂಫ್ʼ (2022) ಸಿನಿಮಾಗಳ ಕೆಲಸದಲ್ಲಿ ಇಬ್ಬರೂ ಜತೆಗೆ ಕೆಲಸ ಮಾಡಿದ್ದೇವೆ. ಅತ್ಯಂತ ಸ್ಮರಣೀಯ ದಿನಗಳವು. ಆತ್ಮಕ್ಕೆ ಶಾಂತಿ ಸಿಗಲಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Sanjay Chouhan | `ಪಾನ್ ಸಿಂಗ್ ತೋಮರ್’ ಸಿನಿಮಾದ ಖ್ಯಾತ ಚಿತ್ರಕಥೆಗಾರ ಸಂಜಯ್ ಚೌಹಾಣ್ ವಿಧಿವಶ

ಫರಾಜ್ ಅವರು ʻಕೋಯಿ ಮಿಲ್ ಗಯಾʼ ಮತ್ತು ʻಬಾಜೀರಾವ್ ಮಸ್ತಾನಿʼಯಂತಹ ಬ್ಲಾಕ್ಬಸ್ಟರ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅದರ ಸಂಗೀತಕ್ಕಾಗಿ ಪ್ರಶಂಸೆಯನ್ನು ಪಡೆದಿದ್ದಾರೆ. 2015ರ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದ ಜನಪ್ರಿಯ ಟ್ರ್ಯಾಕ್ ‘ದೀವಾನಿ ಮಸ್ತಾನಿ’ಗಾಗಿ ನಾಸಿರ್ ಸಾಹಿತ್ಯವನ್ನು ಬರೆದಿದ್ದಾರೆ. ಅವರ ಇತರ ಜನಪ್ರಿಯ ಕೃತಿಗಳಲ್ಲಿ ಕೈಟ್ಸ್‌ ಚಿತ್ರದ ‘ದಿಲ್ ಕ್ಯೂ ಯೆ ಮೇರಾ’ ಸಾಹಿತ್ಯಕ್ಕೆ ದಿವಂಗತ ಬಾಲಿವುಡ್ ಗಾಯಕ ಕೆಕೆ ಅವರು ಧ್ವನಿ ನೀಡಿದ್ದಾರೆ.

ಇದನ್ನೂ ಓದಿ | Death News | ಸಾತ್ವಿಕ ಸಾಧಕಿ ತಂಗಮ್ಮ ಹಿರೇಮಠ ಇನ್ನಿಲ್ಲ, ವಯೋಸಹಜ ಅನಾರೋಗ್ಯದಿಂದ ವಿಧಿವಶ

Exit mobile version