Site icon Vistara News

National Cinema Day 2022 | ಸೆ.23ಕ್ಕೆ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಟಿಕೆಟ್‌ ದರ 75 ರೂ. ಮಾತ್ರ: ಏನಿದರ ವಿಶೇಷತೆ?

National Cinema Day 2022

ಬೆಂಗಳೂರು : ಸೆಪ್ಟೆಂಬರ್ 23ರಂದು ದೇಶಾದ್ಯಂತ ಇರುವ ಹಲವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನವನ್ನು ((National Cinema Day 2022)) ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (Multiplex Association of India (MAI)) ಸಿನಿಪ್ರಿಯರಿಗೆ ಭರ್ಜರಿ ಆಫರ್‌ವೊಂದನ್ನು ನೀಡಿದೆ. ಸೆ.23ರಂದು ಚಿತ್ರಗಳ ಟಿಕೆಟ್ ದರವನ್ನು ಕೇವಲ 75 ರೂ. ಎಂದು ನಿಗದಿಪಡಿಸಿದೆ.

ಈ ಹಿಂದೆ ಅಷ್ಟೇ ಸೆ.16ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸುವುದಾಗಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿಕೊಂಡಿತ್ತು. ಕಾರಣಾಂತರಗಳಿಂದ ರಾಷ್ಟ್ರೀಯ ಸಿನಿಮಾ ದಿನವನ್ನು ಮುಂದೂಡಲಾಗಿತ್ತು. ಈ ದಿನದಂದು ದೇಶದಾದ್ಯಂತ ಇರುವ 4000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್‌ ದರವನ್ನು 75 ರೂ. ವಿತರಿಸಲಿದೆ. ಅದರಲ್ಲಿ ಪಿವಿಆರ್, ಐನಾಕ್ಸ್, ಕಾರ್ನಿವಾಲ್, ಏಷ್ಯನ್, ಮುಕ್ತ ಎ2, ಸಿನಿಪೊಲಿಸ್‌, ಮೂವಿ ಟೈಮ್‌ ಮತ್ತು ವೇವ್‌ ಹೀಗೆ ಹಲವಾರು ಮಲ್ಟಿಪ್ಲೆಕ್ಸ್‌ಗಳು ಕೈ ಜೋಡಿಸಿವೆ.

ಇದನ್ನೂ ಓದಿ | Diganth | ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಮತ್ತೆ ಒಂದಾದ ಪಂಚರಂಗಿ ಜೋಡಿ

ಕೋವಿಡ್​ ನಂತರದ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದತ್ತ ಸೆಳೆಯಲು ಈ ರೀತಿ ಆಫರ್​ ನೀಡಲಾಗುತ್ತಿದೆ ಎನ್ನಲಾಗಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ 2002 ರಲ್ಲಿ ಎಫ್‌ಐಸಿಸಿಐ (FICCI) ಅಡಿಯಲ್ಲಿ ಸ್ಥಾಪಿಸಲಾಯಿತು. ಮತ್ತು ಪಿವಿಆರ್‌, ಐನಾಕ್ಸ್‌, ಕಾರ್ನಿವಲ್ ಮತ್ತು ಸಿನೆಪೊಲಿಸ್ ಸೇರಿದಂತೆ 18ಕ್ಕೂ ಹೆಚ್ಚು ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಲ್ಟಿಪ್ಲೆಕ್ಸ್‌ಗಳನ್ನು ಪ್ರತಿನಿಧಿಸುವ ಸಂಸ್ಥೆಯಾಗಿದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ʻಪಾʼ: ಬಿಗ್‌ ಬಿ ಬದ್ಧತೆಯ ಸಾಕ್ಷ್ಯ ಚಿತ್ರ!

Exit mobile version