Site icon Vistara News

National Cinema Day 2023: ಕೇವಲ 99 ರೂ.ಗೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿ; ಯಾವಾಗ?

Jawan Mark antony the vaccine War

ಅಕ್ಟೋಬರ್ 13ರಂದು, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (MAI) (Multiplex Association of India) ಮತ್ತು ದೇಶಾದ್ಯಂತ ವಿವಿಧ ಚಿತ್ರಮಂದಿರಗಳು ರಾಷ್ಟ್ರೀಯ ಸಿನಿಮಾ ದಿನವನ್ನು (National Cinema Day 2023) ಆಚರಿಸುತ್ತವೆ. ಈ ನಿಟ್ಟಿನಲ್ಲಿ ಆಚರಣೆಯ ಪ್ರಯುಕ್ತ ಕೇವಲ 99 ರೂಪಾಯಿಗೆ (Ticket prices down to Rs 99) ಸಿನಿಮಾ ಟಿಕೆಟ್​ ಮಾರಲು ತೀರ್ಮಾನಿಸಲಾಗಿದೆ. ಅದರಲ್ಲಿ ಪಿವಿಆರ್​, ಐನಾಕ್ಸ್​, ಸಿನಿ ಪೊಲಿಸ್​, ಮಿರಾಜ್​, ಸಿಟಿಪ್ರೈಡ್​, ಏಷ್ಯನ್​, ಮೂವೀ ಟೈನ್​ ಮುಂತಾದ ಮಲ್ಟಿಪ್ಲೆಕ್ಸ್​ಗಳು ಇದರಲ್ಲಿ ಭಾಗವಹಿಸುತ್ತಿವೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ʻಅಕ್ಟೋಬರ್ 13ರಂದು ರಾಷ್ಟ್ರೀಯ ಸಿನಿಮಾ ದಿನವಾಗಿದೆ. ಸಿನಿಮೀಯ ಅನುಭವಕ್ಕಾಗಿ ಭಾರತದಾದ್ಯಂತ 4000+ ಸ್ಕ್ರೀನ್‌ಗಳಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ, ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ ರೂ. 99. ನಿಮ್ಮ ನೆಚ್ಚಿನ ಚಲನಚಿತ್ರಗಳನ್ನು ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಆನಂದಿಸಲು ಇದು ಒಳ್ಳೆಯ ದಿನವಾಗಿದೆʼʼ ಎಂದು ಬರೆದುಕೊಂಡಿದೆ.

ದೇಶಾದ್ಯಂತ ಬಹುತೇಕ ಮಲ್ಟಿಪ್ಲೆಕ್ಸ್​ ಮತ್ತು ಆಯ್ದ ಚಿತ್ರಮಂದಿರಗಳಲ್ಲಿ ಎಲ್ಲ ಸಿನಿಮಾಗಳ ಟಿಕೆಟ್​ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದು ಇದರ ಉದ್ದೇಶ. ಕಳೆದ ವರ್ಷ, ರಾಷ್ಟ್ರೀಯ ಸಿನಿಮಾ ದಿನದಂದು, 65 ಲಕ್ಷಕ್ಕೂ ಹೆಚ್ಚು ಚಲನಚಿತ್ರ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು. ಬಹುತೇಕ ಪ್ರದರ್ಶನಗಳು ಹೌಸ್‌ಫುಲ್ ಕಂಡಿತ್ತು. ಇದರ ಉತ್ತಮ ಪ್ರತಿಕ್ರಿಯೆಯನ್ನು ಗಮನಿಸಿ, ಅಸೋಸಿಯೇಷನ್ ​​ಕಡಿಮೆ ಬೆಲೆಯ ಟಿಕೆಟ್‌ ನಿಗದಿಸಿ ಈ ಪ್ರಯೋಗವನ್ನು ಮುಂದುವರಿಸಲು ನಿರ್ಧರಿಸಿದೆ.

ಇದನ್ನೂ ಓದಿ: National Film Awards 2023: ಕನ್ನಡಕ್ಕೆ ಒಟ್ಟು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ!

2022ರಲ್ಲಿ ಟ್ರೇಡ್ ವೆಬ್‌ಸೈಟ್ ಬಾಕ್ಸ್ ಆಫೀಸ್ ಇಂಡಿಯಾದ ಪ್ರಕಾರ, ಮಿಸ್ಟರಿ ಥ್ರಿಲ್ಲರ್ ‘ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್’ ತನ್ನ ಮೊದಲ ದಿನದಲ್ಲಿ ಸುಮಾರು 2.75ರಿಂದ 3 ಕೋಟಿ ರೂ ಸಂಗ್ರಹಿಸಿತ್ತು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಚಿತ್ರ ‘ಬ್ರಹ್ಮಾಸ್ತ್ರ: ಭಾಗ ಒಂದು – ಶಿವ’ 8.50 ಕೋಟಿ ಗಳಿಸಿತ್ತು. ಈ ವರ್ಷ, ‘ಜವಾನ್’ ಸಹ ವಾರಾಂತ್ಯದಲ್ಲಿ ಇದರ ಪ್ರಯೋಜನ ಪಡೆಯಲಿದೆ.

Exit mobile version