Site icon Vistara News

National Film Awards 2023: ಕನ್ನಡಕ್ಕೆ ಒಟ್ಟು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ!

National Film Awards 2023 Kannada

ಬೆಂಗಳೂರು:  69ನೇ ರಾಷ್ಟ್ರೀಯ ಚಲನಚಿತ್ರ (National Film Awards 2023) ಪ್ರಶಸ್ತಿಗಳು ಪ್ರಕಟವಾಗಿದ್ದು, ಕನ್ನಡಕ್ಕೆ ಒಟ್ಟು ನಾಲ್ಕು ಪ್ರಶಸ್ತಿಗಳು ಸಂದಿವೆ. ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.  ನಾನ್ ಫೀಚರ್ ವಿಭಾಗದಲ್ಲಿ ಅನಿರುದ್ಧ್ ಜತ್ಕಾರ್ ನಿರ್ದೇಶನ ಮಾಡಿರುವ ‘ಬಾಳೆ ಬಂಗಾರ’ (baale bangara)ಡಾಕ್ಯುಮೆಂಟರಿಗೆ ತೀರ್ಪುಗಾರರ ವಿಶೇಷ ಮೆಚ್ಚುಗೆ ಲಭಿಸಿದೆ. ನಾನ್ ಫೀಚರ್ ವಿಭಾಗದಲ್ಲಿ ಅತ್ಯುತ್ತಮ ಅನ್ವೇಷಣೆ ಸಿನಿಮಾ ವಿಭಾಗದಲ್ಲಿ ಕನ್ನಡದ ʻಆಯುಷ್ಮಾನ್ʼ ಸಿನಿಮಾಕ್ಕೆ ಪ್ರಶಸ್ತಿ ಲಭಿಸಿದೆ. ಹಿರಿಯ ಚಲನಚಿತ್ರ ಪತ್ರಕರ್ತ ಬಿ.ಎನ್‌ ಸುಬ್ರಹ್ಮಣ್ಯ ಅವರಿಗೆ ಸಿನಿಮಾ ವಿಮರ್ಶೆ ಜ್ಯೂರಿ (Special Mention – Critic) ಪ್ರಶಸ್ತಿ ಲಭಿಸಿದೆ.

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಜೀವನ ಆಧರಿಸಿದ ಡಾಕ್ಯುಮೆಂಟರಿ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಭಾರತಿ ವಿಷ್ಣುವರ್ಧನ್ ಅವರ ಜೀವನ ಮತ್ತು ಅದ್ಭುತ ಕ್ಷಣಗಳನ್ನು ಬಾಳೆ ಬಂಗಾರದಲ್ಲಿದೆ. ಭಾರತಿ ಅವರ ಶಾಲೆ, ಕಾಲೇಜು, ಚಲನಚಿತ್ರಗಳು, ಮದುವೆ, ಜೀವನ ಹೋರಾಟಗಳು ಮತ್ತು ಇತರ ವಿಷಯಗಳನ್ನು ಸೆರೆಹಿಡಿಯಲಾಗಿದೆ. ಬಾಳೆ ಬಂಗಾರವು ಹೆಚ್ಚು ಸಂದರ್ಶನ ಆಧಾರಿತ ಸಾಕ್ಷ್ಯಚಿತ್ರವಾಗಿದೆ ಮತ್ತು ಹೆಚ್ಚು ಕಡಿಮೆ ಒಂದು ಪೂರ್ಣ ಚಲನಚಿತ್ರವಾಗಿದ್ದು, ಅದು ಪೂರ್ಣಗೊಳ್ಳಲು ಮೂರು ವರ್ಷಗಳನ್ನು ತೆಗೆದುಕೊಂಡಿತು ಎಂದು ಅನಿರುದ್ಧ ಈ ಹಿಂದೆ ಹೇಳಿಕೊಂಡಿದ್ದರು.

ಕನ್ನಡದ ಆಯುಷ್ಮಾನ್

ನಾನ್ ಫೀಚರ್ ಭಾಗ ಅತ್ಯುತ್ತಮ ಅನ್ವೇಷಣೆ ಸಿನಿಮಾ ವಿಭಾಗದಲ್ಲಿ ಕನ್ನಡದ ಆಯುಷ್ಮಾನ್ ಸಿನಿಮಾಕ್ಕೆ ಪ್ರಶಸ್ತಿ ಲಭಿಸಿದೆ. ಈ ಸಿನಿಮಾವನ್ನು ಜೇಖಬ್ ವರ್ಗೀಸ್ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಮ್ಯಾಥ್ಯೂ ವರ್ಗೀಸ್, ದಿನೇಶ್ ರಾಜ್​ಕುಮಾರ್ ಮತ್ತು ನವೀನ್ ಫ್ರಾನ್ಸಿಸ್. ಜೇಖಬ್ ವರ್ಗೀಸ್ ಈ ಹಿಂದೆ ಪುನೀತ್ ರಾಜ್​ಕುಮಾರ್ ನಟನೆಯ ‘ಪೃಥ್ವಿ’, ‘ಸವಾರಿ’, ‘ಚಂಬಲ್’ ಇನ್ನೂ ಕೆಲವು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: National Film Awards 2023: ಆಲಿಯಾ, ಕೃತಿ ಅತ್ಯುತ್ತಮ ನಟಿ, ಅಲ್ಲು ಅರ್ಜುನ್ ಬೆಸ್ಟ್ ಆ್ಯಕ್ಟರ್, ರಾಕೆಟ್ರಿ ಅತ್ಯುತ್ತಮ ಸಿನಿಮಾ!

ಕನ್ನಡ ಭಾಷೆಯ ಅತ್ಯುತ್ತಮ ಸಿನಿಮಾ 

69ನೇ ರಾಷ್ಟ್ರೀಯ ಚಲನಚಿತ್ರ (National Film Awards 2023) ಪ್ರಶಸ್ತಿ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಚಿತ್ರ ಮಂದಿರಗಳಲ್ಲಿ ರಾರಾಜಿಸಿದ 777 ಚಾರ್ಲಿ ಸಿನಿಮಾ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿತ್ತು. ಕಿರಣ್‌ ರಾಜ್‌ ನಿರ್ದೇಶನದ ಈ ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಜನರು ನೋಡಿ ಹಾಡಿ ಹೊಗಳಿದ್ದರು.

ರಾಜ್‌ ಬಿ ಶೆಟ್ಟಿ, ದಾನಿಶ್‌ ಸೇಠ್‌, ಸಂಗೀತಾ ಶೃಂಗೇರಿ, ತಮಿಳಿನ ಬಾಬಿ ಸಿಂಹ ನಟಿಸಿದ್ದಾರೆ. ಕಿರಣ್‌ ರಾಜ್‌ ಈ ಚಿತ್ರದ ನಿರ್ದೇಶಕರಾಗಿದ್ದು, ರಕ್ಷಿತ್‌ ಶೆಟ್ಟಿ ತಮ್ಮ ಹೋಮ್‌ ಬ್ಯಾನರ್‌ ಪರಂವಃ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸಿದ್ದಾರೆ. ನೋಬಿನ್‌ ಪೌಲ್‌ ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದು, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣ ಮಾಡಿದ್ದಾರೆ. ಪ್ರತೀಕ್‌ ಶೆಟ್ಟಿ ಸಂಕಲನ, ಪ್ರಗತಿ ರಿಷಬ್‌ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ. ಚಿತ್ರದ ಹಿಂದಿ ಅವತರಣಿಕೆಗೆ ಸಂಜಯ್‌ ಉಪಾಧ್ಯ ಸಂಭಾಷಣೆ ನೀಡಿದ್ದು, ಹಾಡುಗಳಿಗೆ ಹಿಂದಿಯಲ್ಲಿ ಶೈನಿ ದಾಸ್‌, ಕಾರ್ತಿಕಾ ನೈನನ್‌ ದುಬೆ, ಮಾನ್ಸಾ ಪಾಂಡೆ, ಅಲೆಕ್ಸ್‌ ಡಿಸೋಜಾ, ಸಾಯೇಶ್‌ ಪೈ ಪನಂಡಿಕರ್ ಸಾಹಿತ್ಯ ನೀಡಿದ್ದಾರೆ.

ಪತ್ರಕರ್ತ ಬಿ.ಎನ್‌ ಸುಬ್ರಹ್ಮಣ್ಯ

ಹಿರಿಯ ಚಲನಚಿತ್ರ ಪತ್ರಕರ್ತ ಬಿ.ಎನ್‌ ಸುಬ್ರಹ್ಮಣ್ಯ (Special Mention – Critic) ಅವರಿಗೆ ಕೂಡ ಪ್ರಶಸ್ತಿ ಲಭಿಸಿದೆ. 43 ವರ್ಷಗಳಿಂದ ಚಲನಚಿತ್ರ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಚಿತ್ರದೀಪ ಪತ್ರಿಕೆಯಿಂದ ಶುರುಮಾಡಿ ಆಂದೋಲನ ದಿನಪತ್ರಿಕೆ ತನಕ ವರದಿ, ಅಂಕಣ ಬರೆಯುತ್ತ ಬಂದಿದ್ದಾರೆ. ಅವರು ಆಂದೊಲನ ಪತ್ರಿಕೆಯಲ್ಲಿ ಬರೆದ ಚಿತ್ರರಂಗ ಕುರಿತ ಲೇಖನಕ್ಕೆ ಜ್ಯೂರಿ ಗೌರವ ಪ್ರಶಸ್ತಿ ಬಂದಿದೆ.

Exit mobile version