ನವ ದೆಹಲಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023 (National Film Awards 2023) ಪ್ರದಾನ ಮಾಡಲಾಯಿತು. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯನ್ನು ಕೆಲವು ದಿನಗಳ ಹಿಂದೆ ಘೋಷಿಸಲಾಗಿತ್ತು. ರಕ್ಷಿತ್ ಶೆಟ್ಟಿ, ರಣಬೀರ್ ಕಪೂರ್, ಆಲಿಯಾ ಭಟ್, ಕೃತಿ ಸನೋನ್, ಅಲ್ಲು ಅರ್ಜುನ್ ಮತ್ತು ಪತ್ನಿ ಸ್ನೇಹಾ ರೆಡ್ಡಿ, ಕರಣ್ ಜೋಹರ್, ಅಪೂರ್ವ ಮೆಹ್ತಾ, ಆರ್.ಮಾಧವನ್ ಮತ್ತಿತರರು ಆಗಮಿಸಿ ಪ್ರಶಸ್ತಿ ಸ್ವೀಕರಿಸಿದರು. ‘777 ಚಾರ್ಲಿ’ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಚಿತ್ರದ ನಿರ್ದೇಶಕ ಕಿರಣ್ ರಾಜ್ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.
National Award Winner – KiranRaj K ❤️❤️❤️🎉🎉🎉 @Kiranraj61 pic.twitter.com/0nulsAoId7
— Ajith Bhave (@ajith14bhave) October 17, 2023
ಪ್ರಶಸ್ತಿ ವಿಜೇತರ ಪಟ್ಟಿ
- ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ಕಾಶ್ಮೀರ್ ಫೈಲ್ಸ್)
- ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ ಸಿನಿಮಾ)
- ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ)
- ಅತ್ಯುತ್ತಮ ನಟಿ: ಆಲಿಯಾ (ಗಂಗೂಬಾಯಿ ಕಾಥಿಯಾವಾಡಿ) ಮತ್ತು ಕೃತಿ ಸನೂನ್ (ಮಿಮಿ)
- ಅತ್ಯುತ್ತಮ ಸಿನಿಮಾ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ತಮಿಳು)
- ಅತ್ಯುತ್ತಮ ಮನೊರಂಜನಾ ಚಿತ್ರ: ಆರ್ಆರ್ಆರ್ ಸಿನಿಮಾ
- ಅತ್ಯುತ್ತಮ ನಿರ್ದೇಶಕ: ನಿಖಿಲ್ ಮಹಾಜನ್ (ಗೋಧಾವರಿ: ಮರಾಠಿ)
- ಅತ್ಯುತ್ತಮ ಸಂಗೀತ: ದೇಶ್ರೀಪ್ರಸಾದ್ (ಪುಷ್ಪ)
- ಅತ್ಯುತ್ತಮ ಗಾಯಕ: RRR (ಕೋಮುರಂ ಭೀಮುಡು)
- ಅತ್ಯುತ್ತಮ ಗಾಯಕಿ: ಇರವಿನ್ ನಿಜಾಲ್ (ಶ್ರೆಯಾ ಘೋಷಾಲ್)
- ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ: ಅನುನಾದ್ (ಅಸ್ಸಾಮಿ)
- ಅತ್ಯುತ್ತಮ ಎಡಿಟಿಂಗ್: ಗಂಗೂಬಾಯಿ ಕಾಥಿಯಾವಾಡಿ
- ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆ್ಯಂಡ್ ಕಂಪೆನಿ (ಗುಜರಾತಿ)
- ಅತ್ಯುತ್ತಮ ಚಿತ್ರಕತೆ: ನಯಾಟ್ಟು (ಮಲಯಾಳಂ)
- ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಥಿಯಾವಾಡಿ
- ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ: ಅವಸ್ಯವ್ಯೂಹಂ (ಮಲಯಾಳಂ)
- ತೀರ್ಪುಗಾರರ ವಿಶೇಷ ಬಹುಮಾನ: ಶೇರ್ಷಾ
- ಅತ್ಯುತ್ತಮ ಸಿನಿಮಾಟೊಗ್ರಫಿ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ್)
- ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ: ಆರ್ಆರ್ಆರ್ (ತೆಲುಗು)
- ಅತ್ಯುತ್ತಮ ಅಸ್ಸಾಮಿ ಚಿತ್ರ: ಅನುರ್
- ಅತ್ಯುತ್ತಮ ಬಂಗಾಳಿ ಚಿತ್ರ: ಕಲ್ಕೋಹೊ
- ಅತ್ಯುತ್ತಮ ಹಿಂದಿ ಚಿತ್ರ: ಸರ್ದಾರ್ ಉದಾಮ್
- ಅತ್ಯುತ್ತಮ ಕನ್ನಡ ಚಿತ್ರ: 777 ಚಾರ್ಲಿ
- ಅತ್ಯುತ್ತಮ ಗುಜರಾತಿ ಚಿತ್ರ: ಚೆಲೋ ಶೋ
- ಅತ್ಯುತ್ತಮ ಮೈಥಿಲಿ ಚಿತ್ರ: ಸಮನಾಂತರ
- ಅತ್ಯುತ್ತಮ ಮರಾಠಿ ಚಿತ್ರ: ಎಕ್ದಾ ಕೇ ಜಲಾ
- ಅತ್ಯುತ್ತಮ ಮಲಯಾಳಂ ಚಿತ್ರ: ಹೋಮ್
- ನಾನ್-ಫೀಚರ್ ಸಿನಿಮಾ: ಸ್ಪೆಷಲ್ ಮೆನ್ಷನ್: ಬಾಳೆ ಬಂಗಾರ (ಕನ್ನಡ)