Site icon Vistara News

National Youth Day | ರಾಷ್ಟ್ರೀಯ ಯುವ ದಿನದಂದು ಬಾಲ್ಯದ ಫೋಟೊಗಳನ್ನು ಹಂಚಿಕೊಂಡ ಅಜಯ್​ ದೇವಗನ್

Ajay Devgn

ಬೆಂಗಳೂರು : ರಾಷ್ಟ್ರೀಯ ಯುವ ದಿನದಂದು ಅಜಯ್​ ದೇವಗನ್ (National Youth Day ) ಅವರು ತಮ್ಮ ಬಾಲ್ಯ ದಿನಗಳ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಅಜಯ್‌ ಅವರ ಹಳೆಯ ಫೋಟೊಗಳನ್ನು ನೋಡಿ ಅಜಯ್‌ ಅಭಿಮಾನಿಗಳು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿದ್ದಾರೆ. ನಟ ಅಜಯ್‌ ವಿಡಿಯೊ ಹಂಚಿಕೊಂಡು “ನಿಮ್ಮ ನಂಬಿಕೆಗಳು ಮತ್ತು ಕನಸುಗಳಿಗೆ ನೀವು ಭವಿಷ್ಯಕ್ಕಾಗಿ ಅಡಿಪಾಯ ಹಾಕಿದಾಗ ಅದುವೇ ಯೌವನ. ನೀವು ರೂಪಾಂತರಗೊಂಡರೂ, ನಿಮ್ಮ ಆದರ್ಶಗಳು ಗಟ್ಟಿಯಾಗಿ ಉಳಿಯುವುದನ್ನು ಕಾಯ್ದಿರಿಸಿಕೊಳ್ಳಿʼʼಎಂದು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೊಗೆ ನೆಟ್ಟಿಗರು “ಓಲ್ಡ್ ಈಸ್ ಗೋಲ್ಡ್” ಎಂದು ಕಮೆಂಟ್‌ ಮಾಡಿದರೆ, ಇನ್ನೊಬ್ಬರು “90ರ ದಶಕದ ಹೀರೊʼʼ ಎಂದು ಹೇಳಿದ್ದಾರೆ. ಅಜಯ್ 1991ರಲ್ಲಿ ʻಫೂಲ್ ಔರ್ ಕಾಂಟೆʼ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ʻಹಮ್ ದಿಲ್ ದೇ ಚುಕೆ ಸನಮ್, ʻಝಖ್ಮ್ʼ, ʻದಿ ಲೆಜೆಂಡ್ ಆಫ್ ಭಗತ್ ಸಿಂಗ್ ʼ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಅಭಿನಯಕ್ಕಾಗಿ ಹಲವಾರು ಪುರಸ್ಕಾರಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ | Kajol Birthday | ಸ್ಪೆಷಲ್‌ ಕ್ಯಾಪ್ಷನ್‌ ಮೂಲಕ ವಿಶ್‌ ಮಾಡಿದ ಅಜಯ್‌ ದೇವಗನ್‌

ಅಜಯ್ ಕೊನೆಯದಾಗಿ ದೃಶ್ಯಂ-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ನಟ ಮೋಹನ್‌ಲಾಲ್‌ ಅಭಿನಯದ ʻದೃಶ್ಯಂ 2ʼ ಸಿನಿಮಾ ಹಲವು ಭಾಷೆಗಳಲ್ಲಿ ರಿಮೇಕ್‌ ಆಗಿದೆ. ಹಿಂದಿಯಲ್ಲಿ ಅಜಯ್‌ ದೇವಗನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಈ ಸಿನಿಮಾ ಇದುವರೆಗೆ 238.66 ಕೋಟಿ ರೂ. ಕಲೆಕ್ಷನ್ ಮಾಡಿದೆ. ಅಭಿಷೇಕ್ ಪಾಠಕ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ತಬು, ಇಶಿತಾ ದತ್ತಾ ಮತ್ತು ಮೃಣಾಲ್ ಜಾಧವ್ ನಟಿಸಿದ್ದಾರೆ. ದೃಶ್ಯಂ ಮೊದಲನೇ ಭಾಗದಲ್ಲಿಯೂ ಅಜಯ್‌ ದೇವಗನ್‌ ನಟಿಸಿದ್ದರು. 2015ರಲ್ಲಿ ಮೊದಲನೇ ಭಾಗ ತೆರೆ ಕಂಡಿತ್ತು.

ಇದನ್ನೂ ಓದಿ | Kajol | ಚಿತ್ರರಂಗದಲ್ಲಿ 30 ವರ್ಷ ಪೂರೈಸಿದ ನಟಿ ಕಾಜೋಲ್‌: ಅಜಯ್‌ ದೇವಗನ್‌ ಹೇಳಿದ್ದೇನು?

Exit mobile version