Site icon Vistara News

Naveen D Padil | ಮಜಾ ಟಾಕೀಸ್‌ನ ʻಗುಂಡು ಮಾಮಾʼ ಎಂತಲೇ ಖ್ಯಾತಿ ಪಡೆದ ನವೀನ್‌ ಡಿ. ಪಡೀಲ್‌ ಆಸ್ಪತ್ರೆಗೆ ದಾಖಲು

Naveen D Padil

ಬೆಂಗಳೂರು : ತುಳು ಚಿತ್ರರಂಗದ ಖ್ಯಾತ ನಟ ನವೀನ್ ಡಿ. ಪಡೀಲ್‌ (Naveen D Padil) ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಜಾ ಟಾಕೀಸ್‌ನಲ್ಲಿಯೂ ಗುಂಡು ಮಾಮಾ ಎಂದೇ ಪ್ರಖ್ಯಾತಿ ಪಡೆದಿದ್ದರು. ಸಿನಿಮಾದ ಚಿತ್ರೀರಕಣ ವೇಳೆ ಬಿದ್ದು ಏಟು ಮಾಡಿಕೊಂಡ ಪರಿಣಾಮ ಅವರ ತೊಡೆಯ ಮೂಳೆ ಮುರಿತವಾಗಿದ್ದು, ಈಗಾಗಲೇ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಈ ಅವಘಡ ಸಂಭವಿಸಿದೆ. ಬಿದ್ದ ಪರಿಣಾಮ ಬಲವಾಗಿಯೇ ತೊಡೆಗೆ ಏಟು ಬಿದ್ದಿದೆ. ಈ ಸಿನಿಮಾ ಮಾಲಿವುಡ್‌ ಮತ್ತು ಕನ್ನಡದಲ್ಲಿ ಬರುತ್ತಿದ್ದು, ನವೀನ್‌ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ನವೀನ್‌ ಪಡೀಲ್‌ ಅವರಿಗೆ ಮೂರು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ | Kantara Movie | ತುಳುವಿನಲ್ಲಿ ಬರ್ತಾ ಇದೆ ಕಾಂತಾರ: ರಿಷಬ್‌ ಹೇಳಿದ್ದೇನು?

ʻಬಿರ್ಸೆʼ, ʻಒರಿಯರ್ದ್ ಒರಿ ಅಸಲ್ʼ 2011, ʻತೆಲಿಕೆದ ಬೊಳ್ಳಿʼ 2012, ʻಚಾಲಿ ಪೋಲಿಲುʼ (2014), ʻಪಿಲಿಬೈಲ್ ಯಮುನಕ್ಕʼ ,ʻಏಸ ʼ(2016) ಮೊದಲಾದ ಜನಪ್ರಿಯ ತುಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕಟೀಲು ದೇಗುಲಕ್ಕೆ ಸಪ್ತಮಿ ಗೌಡ ಭೇಟಿ; ತುಳು ಸಿನಿಮಾದಲ್ಲಿ ನಟಿಸಲೂ ರೆಡಿ ಎಂದ ನಟಿ


Exit mobile version