Site icon Vistara News

Naveen Sajju | ನವೆಂಬರ್‌ನಲ್ಲಿ ಬರ್ತಿದೆ ನವೀನ್ ಸಜ್ಜು ನಟನೆಯ ಮ್ಯಾನ್ಷನ್ ಹೌಸ್ ಮುತ್ತು

Naveen Sajju

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್ ಸಜ್ಜು (Naveen Sajju) ನಾಯಕರಾಗಿ ಕಾಣಿಸಿಕೊಳ್ಳುತ್ತಿರುವ ‘ಮ್ಯಾನ್ಷನ್ ಹೌಸ್ ಮುತ್ತು’ (Mansion House Muthu) ಸಿನಿಮಾದ ಡಬ್ಬಿಂಗ್ ಈಗಾಗಲೇ ಮುಗಿದಿದ್ದು, ನವೆಂಬರ್‌ನಲ್ಲಿ ಸಿನಿಮಾ ಬಿಡುಗಡೆಗೊಳ್ಳಲು ತಯಾರಿ ನಡೆಯುತ್ತಿದೆ.

ʻಕೆಮಿಸ್ಟ್ರೀ ಆಫ್ ಕರಿಯಪ್ಪʼ, ʻಕ್ರಿಟಿಕಲ್ ಕೀರ್ತನೆಗಳುʼ ಸಿನಿಮಾ ಸಾರಥಿ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಗಿರೀಶ್ ಶಿವಣ್ಣ, ಸಮೀಕ್ಷಾ ರಾಮ್, ಸತೀಶ್ ಚಂದ್ರ, ವಿಜೇತ್ ಸುಮಂತ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಕಾಮಿಡಿ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ‘ಮ್ಯಾನ್ಷನ್ ಹೌಸ್ ಮುತ್ತು’ ಸಿನಿಮಾದಲ್ಲಿ ಒಂದಷ್ಟು ಸಂದೇಶ ಸಾರುವ ಅಂಶಗಳಿದ್ದು, ಪ್ರಕೃತಿ ಪ್ರೇಮಿ ಮುತ್ತಿನ ಸುತ್ತ ಇಡೀ ಕಥೆ ಸಾಗುತ್ತದೆ.

ಇದನ್ನೂ ಓದಿ | Ramya |18ನೇ ವಯಸ್ಸಿನಲ್ಲಿ ಹೇಗಿದ್ರು ಸ್ಯಾಂಡಲ್‌ವುಡ್‌ ಪದ್ಮಾವತಿ ? ಇಲ್ಲಿದೆ ಪೋಟೊ

ಕೇಸರಿ ಫಿಲ್ಮಂ ಕ್ಯಾಪ್ಟರ್ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣಗೊಂಡಿದೆ. ನಾಯಕ ಜತೆಗೆ ನವೀನ್ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದು, ನವೀನ್ ಕುಮಾರ್ ಚೆಲ್ಲ ಛಾಯಾಗ್ರಾಹಣ ಸಿನಿಮಾಕ್ಕಿದೆ. ಮಡಿಕೇರಿ ಸುತ್ತಮುತ್ತ ಬರೋಬ್ಬರಿ 40 ದಿನಗಳ ಕಾಲ ಸಿನಿಮಾದ ಶೂಟಿಂಗ್ ನಡೆಸಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ನವೆಂಬರ್‌ನಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ | Gaalipata 2 | ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್: ಭಾಗಿಯಾದ ಸ್ಯಾಂಡಲ್‌ವುಡ್‌ ತಾರಾ ಬಳಗ

Exit mobile version