ಮುಂಬೈ: ಏಪ್ರಿಲ್ 9ರಂದು ಜಯಾ ಬಚ್ಚನ್ (Jaya Bachchan) ಅವರ ಜನುಮದಿನ. 75ನೇ ವಸಂತಕ್ಕೆ ನಟಿ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಅಂಗವಾಗಿ ಹಲವು ಸಿನಿ ತಾರೆಗಳಿಂದ, ಗಣ್ಯರಿಂದ ನಟಿಗೆ ಶುಭಾಶಯ ಕೋರುತ್ತಿದ್ದಾರೆ. ಜಯಾ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ವಿಶೇಷವಾಗಿ ಶುಭ ಹಾರೈಸಿದ್ದಾರೆ. ನವ್ಯಾ ಅವರು ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಹಿರಿಯ ಪುತ್ರಿ ಶ್ವೇತಾ ಬಚ್ಚನ್ ಅವರ ಮಗಳು. ಈ ಸಂತೋಷದ ಸಂದರ್ಭದಲ್ಲಿ, ನವ್ಯಾ ಅವರು ಟೋಪಿ, ಸನ್‌ಗ್ಲಾಸ್ ಮತ್ತು ಬಿಂದಿಯನ್ನು ಧರಿಸಿರುವ ಜಯಾ ಬಚ್ಚನ್ ಅವರ ಹಳೆಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಚಿತ್ರದ ಜತೆಗೆ, “ಹುಟ್ಟುಹಬ್ಬದ ಶುಭಾಶಯಗಳು ನಾನಿ. ನೀನು ನಮ್ಮ ಪವರ್ ಹೌಸ್ʼʼಎಂದು ಬರೆದುಕೊಂಡಿದ್ದಾರೆ.
ಪೋಸ್ಟ್‌ಗೆ ಹಲವರು ಮೆಚ್ಚುಗೆ ಸೂಚಿಸಿದ್ದು, ಸೋನಾಲಿ ಬೇಂದ್ರೆ, ಮಹೀಪ್ ಕಪೂರ್ ಮತ್ತು ಶನಯಾ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವರ್ಷ, ಜಯಾ ಬಚ್ಚನ್ ಮತ್ತು ನವ್ಯಾ ನವೇಲಿ ನಂದಾ ಅವರು ಪ್ರೀತಿ, ಸಂಬಂಧಗಳ ಕುರಿತು ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದರು. ಮಾಡರ್ನ್ ಲವ್: ರೋಮ್ಯಾನ್ಸ್ ಮತ್ತು ರಿಗ್ರೆಟ್ಸ್ ವಿಚಾರದ ಕುರಿತು ಚರ್ಚಿಸಿದ್ದರು. ಕಾಲಗಳು ಕಳೆದಂತೆ ಸಂಬಂಧಗಳ ಪರಿಕಲ್ಪನೆಯು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡಿದರು. ತನ್ನ ಮಗಳು ಶ್ವೇತಾ ಮತ್ತು ಮೊಮ್ಮಗಳು ನವ್ಯಾ ಅವರಂತಹ ಯುವ ಪೀಳಿಗೆಯವರು ಸಂಬಂಧಗಳ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ದೈಹಿಕ ಸಂಬಂಧಗಳನ್ನು ಅನುಭವಿಸುವ ಬಗ್ಗೆ ಜನರು ಇನ್ನೂ ತಪ್ಪಿತಸ್ಥರೆಂದು ಭಾವಿಸುತ್ತಾರೆʼʼಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: Viral Video: ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಕ್ರೋಧದ ವರ್ತನೆ; ಅಧ್ಯಕ್ಷರತ್ತ ಕೈಬೆರಳು ತೋರಿಸಿ ನಡೆದ ಸಂಸದೆ!
ನವ್ಯಾ ನವೇಲಿ ನಂದಾ ಪೋಸ್ಟ್
ಕೆಲವು ವಾರಗಳ ಹಿಂದೆ, ಶ್ವೇತಾ ಬಚ್ಚನ್ ಕೂಡ ತಮ್ಮ ತಾಯಿ ಜಯಾ ಬಚ್ಚನ್ ಅವರೊಂದಿಗೆ ಫೋಟೊಗಳನ್ನು ಹಂಚಿಕೊಂಡಿದ್ದರು. ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರು ಆಯೋಜಿಸಿದ್ದ ಫ್ಯಾಷನ್ ಈವೆಂಟ್‌ನಲ್ಲಿ ಈ ಫೋಟೊ ತೆಗೆಸಿಕೊಂಡಿದ್ದಾರೆ. ಚಿತ್ರವೊಂದರಲ್ಲಿ, ಜಯಾ ಬಚ್ಚನ್ ತನ್ನ ಮಗಳಿಗೆ ಮುತ್ತು ನೀಡುತ್ತಿರುವುದನ್ನು ಕಾಣಬಹುದು. ಶೀರ್ಷಿಕೆಯಲ್ಲಿ “ಒಂದು ರಾತ್ರಿ ಚೆನ್ನಾಗಿ ಕಳೆದಿದೆ ಸ್ನೇಹಿತರು, ಕುಟುಂಬ, ಕೆಲವು ಕ್ರೇಜಿ ಫ್ಯಾಷನ್ ಶೋ ಮುಖ್ಯವಾಗಿ, ನನ್ನ ತಾಯಿಯಿಂದ ಮುತ್ತುಗಳುʼʼಎಂದು ಬರೆದುಕೊಂಡಿದ್ದರು.
ಶ್ವೇತಾ ಬಚ್ಚನ್ ಪೋಸ್ಟ್
ಜಯಾ ಬಚ್ಚನ್ ಮುಂದಿನ ಯೋಜನೆಯಲ್ಲಿ ರಣವೀರ್ ಸಿಂಗ್, ಆಲಿಯಾ ಭಟ್, ಶಬಾನಾ ಅಜ್ಮಿ ಮತ್ತು ಧರ್ಮೇಂದ್ರ ಅವರೊಂದಿಗೆ ಕರಣ್ ಜೋಹರ್ ಅವರ ನಿರ್ದೇಶನದ ಪ್ರಾಜೆಕ್ಟ್ ರಾಕ್ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವ್ಯಾ ನಂದಾ ಅವರು ನ್ಯೂಯಾರ್ಕ್‌ನ ಫೋರ್ಡ್‌ಹ್ಯಾಮ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಆರೋಗ್ಯ ಸಮಸ್ಯೆಗಳು ಮತ್ತು ಹೆಚ್ಚಿನದನ್ನು ಚರ್ಚಿಸುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆರಾ ಹೆಲ್ತ್‌ನ ಸಹ-ಮಾಲೀಕರಾಗಿದ್ದಾರೆ.