Site icon Vistara News

Nawazuddin and Aaliya : ವಿಚ್ಛೇದನ ಪಡೆಯದೆಯೇ ನವಾಜುದ್ದೀನ್‌ರನ್ನು ವರಿಸಿದ್ದರು ಆಲಿಯಾ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಕೀಲರು

You are a dangerous father: Nawazuddin's wife Aaliya responds to actor’s open letter

Nawazuddin Siddiqui

ಮುಂಬೈ: ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ ಅವರು ಪತ್ನಿ ಆಲಿಯಾಯಿಂದ ವಿಚ್ಛೇದನ ಹಾಗೂ ಆಸ್ತಿ ಹಂಚಿಕೆ ವಿಚಾರದಲ್ಲಿ ಪ್ರಕರಣಗಳನ್ನು (Nawazuddin and Aaliya) ಎದುರಿಸುತ್ತಿದ್ದಾರೆ. ಹೀಗಿರುವಾಗ ನಟನ ಪರ ವಕೀಲರು ಆಲಿಯಾ ಕುರಿತಾಗಿ ಕೆಲವು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ : 100 Days Of Gandhadagudi: 100 ದಿನ ಪೂರೈಸಿದ ಪುನೀತ್‌ ಅಭಿನಯದ ಗಂಧದಗುಡಿ ಸಿನಿಮಾ, ಅಪ್ಪು ಪತ್ನಿ ಅಶ್ವಿನಿ ಸಂತಸ
ಆಲಿಯಾ ಅವರು ತಮ್ಮ ಮೊದಲ ಪತಿಯೊಂದಿಗೆ ವಿಚ್ಛೇದನ ಪಡೆಯದೆಯೇ ನವಾಜುದ್ದೀನ್‌ರೊಂದಿಗೆ ಮದುವೆಯಾಗಿದ್ದರು. ಆ ವಿಚಾರವನ್ನು ನವಾಜುದ್ದೀನ್‌ರಿಂದ ಮುಚ್ಚಿಟ್ಟಿದ್ದರು ಕೂಡ. ಈಗ ನವಾಜುದ್ದೀನ್‌ ಪ್ರಸಿದ್ಧರಾಗಿರುವ ಹಿನ್ನೆಲೆ ಆಲಿಯಾ, ಆಕೆಯ ಸಹೋದರಿ ಹಾಗೂ ಮೊದಲನೇ ಗಂಡ ಸೇರಿಕೊಂಡು ನಟನ ಆಸ್ತಿ ದೋಚುವುದಕ್ಕೆ ಈ ಪ್ಲ್ಯಾನ್‌ ಮಾಡಿದ್ದಾರೆ ಎಂದು ವಕೀಲರಾದ ನದೀಮ್‌ ಜಪರ್‌ ಜೈದಿ ಅವರು ದೂರಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, “2001ರಲ್ಲಿ ಆಲಿಯಾ ಹೆಸರು ಅಂಜಲಿ ಕುಮಾರಿ ಆಗಿತ್ತು. ಎಂಟನೇ ತರಗತಿ ಫೇಲ್‌ ಆಗಿರುವ ಅವರು ಆಗಲೇ ವಿನಯ್‌ ಭಾರ್ಗವ್‌ ಅವರನ್ನು ಮದುವೆಯಾಗಿದ್ದರು. ನಂತರ ಮುಂಬೈಗೆ ಬಂದು ಅಂಜನಾ ಪಾಂಡೆ ಎಂದು ಹೆಸರು ಬದಲಿಸಿಕೊಂಡರು. ನಂತರ 2010ರಲ್ಲಿ ಅಂಜನಾ ಆನಂದ್‌ ಆದರು. ನಂತರ ಇಸ್ಲಾಂಗೆ ಮತಾಂತರವಾಗಿ ಜೈನಾಬ್‌ ಆದರು. 2011ರಲ್ಲಿ ನವಾಜುದ್ದೀನ್‌ ಮತ್ತು ಆಲಿಯಾ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ. ಆದರೆ 2020ರಲ್ಲಿ ನಟನ ಪ್ರಸಿದ್ಧತೆ ಹೆಚ್ಚಿದ ಹಿನ್ನೆಲೆ ಆಲಿಯಾ ಮತ್ತೊಮ್ಮೆ ವಿಚ್ಛೇದನದ ಪತ್ರ ಕಳುಹಿಸಿದ್ದಾರೆ. ಅದರಲ್ಲಿ ಅರ್ಥವೇ ಇಲ್ಲ” ಎಂದು ಹೇಳಿದ್ದಾರೆ.
ಆಲಿಯಾ ಅವರ ಹುಟ್ಟಿದ ದಿನಾಂಕದಲ್ಲೂ ಸುಳ್ಳಿದೆ. ಅವರ ಅಂಕಪಟ್ಟಿಗಳಲ್ಲಿ 1979 ಎಂದಿದ್ದರೆ, ಪಾಸ್‌ಪೋರ್ಟ್‌ನಲ್ಲಿ 1982 ಎಂದಿದೆ ಎಂದೂ ವಕೀಲರು ದೂರಿದ್ದಾರೆ.

ಇದನ್ನೂ ಓದಿ: RRR Movie | ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್‌ನಲ್ಲೂ ಆರ್‌ಆರ್‌ಆರ್‌ ಹವಾ: ಆಲಿಯಾ ಭಟ್‌ ಪೋಸ್ಟ್‌ ವೈರಲ್‌!
2008-09ರ ಸಮಯದಲ್ಲಿ ಅಂಜನಾ ಆಗಿದ್ದ ಆಲಿಯಾ ರಾಹುಲ್‌ ಹೆಸರಿನ ವ್ಯಕ್ತಿಯನ್ನೂ ಮದುವೆಯಾದರು. ಮುಂಬೈನಲ್ಲಿದ್ದರು. ಶ್ರೀಮಂತರಾಗಬೇಕು ಎನ್ನುವ ಆಸೆಯಿಂದ ಅವರು ಸಹೋದರಿ ಅರ್ಚನಾ ಮತ್ತು ರಾಹುಲ್‌ನೊಂದಿಗೆ ಸೇರಿಕೊಂಡು ಗ್ಯಾಂಗ್‌ ಮಾಡಿಕೊಂಡಿದ್ದಾರೆ. ಅದೇ ನಿಟ್ಟಿನಲ್ಲಿ ಅಂಜನಾ ಮುಂಬೈನಲ್ಲಿದ್ದರೆ ಅತ್ತ ಜಬಲ್ಪುರದಲ್ಲಿ ವಿನಯ್‌ ಭಾರ್ಗವ್‌ ಅಂಜನಾಳ ಸಹೋದರಿ ಅರ್ಚನಾಳನ್ನು ಮದುವೆಯಾದ. ಅರ್ಚನಾ ಅದಾಗಲೇ ರಾಜ್‌ಕುಮಾರ್‌ ಶುಕ್ಲಾ ಅವರ ಪತ್ನಿ ಆಗಿದ್ದು, ವಿಚ್ಛೇದನ ಪಡೆಯದೆಯೇ ಮತ್ತೊಂದು ಮದುವೆಯಾದರು ಎಂದು ವಕೀಲರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನವಾಜುದ್ದೀನ್‌ ಮತ್ತು ಆಲಿಯಾ 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ 2021ರಲ್ಲಿ ಆಲಿಯಾ ನವಾಜುದ್ದೀನ್‌ ವಿರುದ್ಧ ಹಿಂಸಾಚಾರದ ಆರೋಪ ಹೊರಿಸಿದ್ದು, ವಿಚ್ಛೇದನದ ನೋಟಿಸ್‌ ಕಳುಹಿಸಿಕೊಟ್ಟಿದ್ದಾರೆ. ಕಳೆದ ತಿಂಗಳು ಆಲಿಯಾ ನವಾಜುದ್ದೀನ್‌ ಅವರ ತಾಯಿಯ ವಿರುದ್ಧವೂ ದೂರು ನೀಡಿದ್ದಾರೆ. ಹಾಗೆಯೇ ನವಾಜುದ್ದೀನ್‌ ಅವರ ತಾಯಿಯೂ ಆಲಿಯಾ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ಈ ಎಲ್ಲ ಘಟನೆಗಳ ಬಗ್ಗೆ ಏನೂ ಹೇಳಿಕೆ ನೀಡದ ನವಾಜುದ್ದೀನ್‌ ಹೋಟೆಲ್‌ ಒಂದರಲ್ಲಿ ವಾಸಿಸುತ್ತಿರುವುದಾಗಿ ವರದಿಯಿದೆ.

Exit mobile version