Site icon Vistara News

Nawazuddin Siddiqui : ನವಾಜುದ್ದೀನ್‌ ನೀವು ಕಂಡಂತಲ್ಲ; ನಟನ ಬಗ್ಗೆ ಗಂಭೀರ ಆರೋಪ ಮಾಡಿದ ಸಹೋದರ!

#image_title

ಮುಂಬೈ: ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ದಿಕಿ (Nawazuddin Siddiqui) ಇತ್ತೀಚಿನ ದಿನಗಳಲ್ಲಿ ಹಲವಾರು ವಿವಾದಗಳಿಂದಾಗಿ ಸುದ್ದಿಯಲ್ಲಿರುವ ವ್ಯಕ್ತಿ. ಪತ್ನಿ ಆಲಿಯಾ ಅವರು ನವಾಜುದ್ದೀನ್‌ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದು ಸುದ್ದಿಯಾಗಿದೆ. ಇದರ ಬೆನ್ನಲ್ಲೇ ನವಾಜುದ್ದೀನ್‌ ಅವರ ಸಹೋದರ ಶಮಾಸ್‌ ಕೂಡ ನಟನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: Nawazuddin Siddiqui: ದುಬೈನಲ್ಲಿ ಮಕ್ಕಳ ಆರೈಕೆಗೆ ನವಾಜುದ್ದೀನ್‌ ಸಿದ್ದಿಕಿ ನೇಮಿಸಿದ ಯುವತಿಗೆ ಊಟಕ್ಕೂ ದಿಕ್ಕಿಲ್ಲ, ಏನಿದು ಕೇಸ್?
“ನವಾಜುದ್ದೀನ್‌ ನೀವು ನೋಡಿದಂತಲ್ಲ. ಅವರು ಅತ್ಯಂತ ಕಠಿಣವಾದ ಮನುಷ್ಯ. ನಾನು ಒಂದೆರೆಡು ಟಿವಿ ಶೋಗಳನ್ನು ನಿರ್ದೇಶನ ಮಾಡಿದ್ದೇನೆ. ನವಾಜ್‌ ಕರೆ ಮಾಡಿ, ನನ್ನೊಂದಿಗೆ ಸೇರಿಕೊ ಎಂದರು. 2019ರಲ್ಲಿ ನನ್ನ ʼಬೋಲೆ ಚೂಡಿಯಾʼ ಸಿನಿಮಾ ಬಿಡುಗಡೆಗೆ ಸಿದ್ಧವಾಯಿತು. ಆ ಸಿನಿಮಾದಲ್ಲಿ ನನಗೆ ನವಾಜ್‌ ಜತೆ ಕೆಲಸ ಮಾಡುವುದಕ್ಕೆ ಇಷ್ಟವಿರಲಿಲ್ಲ. ಆದರೆ ನಮ್ಮ ನಿರ್ಮಾಪಕರ ಒತ್ತಾಸೆಯ ಮೇರೆಗೆ ನವಾಜ್‌ನ್ನು ಜತೆ ಸೇರಿಸಿಕೊಳ್ಳಬೇಕಾಯಿತು. ಸಿನಿಮಾ ಮುಗಿದ ಮೇಲೆ ಕೆಲವು ಪ್ಯಾಚ್‌ ವರ್ಕ್‌ಗಳು ಇದ್ದವು. ಆದರೆ ಆಗ ನವಾಜ್‌ ಸಿನಿಮಾದ ಪೂರ್ತಿ ಹಣ ನೀಡದೆ ನಾನು ಕೆಲಸ ಮಾಡುವುದಿಲ್ಲ ಎಂದು ಕುಳಿತುಬಿಟ್ಟ. ನನ್ನ ಸಹೋದರನಾಗಿ ನನ್ನ ಸಿನಿಮಾಗೇ ಹೀಗೇಕೆ ಮಾಡಿದ ಎಂದು ಅರ್ಥವಾಗಲೇ ಇಲ್ಲ” ಎಂದು ಶಮಾಸ್‌ ಹೇಳಿದ್ದಾರೆ.

ಹಾಗೆಯೇ ನನ್ನ ಮಗಳೊಂದಿಗೆ ಕುಟುಂಬದ ಯಾರಿಗೂ ಸಂಪರ್ಕ ಮಾಡುವುದಕ್ಕೆ ಬಿಡುತ್ತಿರಲಿಲ್ಲ. ಕುಟುಂಬದಲ್ಲಿ ನಾನೊಬ್ಬನೇ ಬೆಳೆಯಬೇಕು ಎನ್ನುವ ಭಾವನೆ ಅವನಲ್ಲಿತ್ತು ಎಂದು ಶಮಾಸ್‌ ಅವರು ನವಾಜುದ್ದೀನ್‌ ಬಗ್ಗೆ ಆರೋಪ ಮಾಡಿದ್ದಾರೆ.

Exit mobile version