Site icon Vistara News

Nawazuddin Siddiqui | ಮಂಗಳಮುಖಿಯಾಗಿ ಕಾಣಿಸಿಕೊಂಡ ನಟ ನವಾಜುದ್ದೀನ್ ಸಿದ್ದಿಕಿ!

Nawazuddin Siddiqui

ಬೆಂಗಳೂರು: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಮಂಗಳಮುಖಿಯಾಗಿ ನವಾಜುದ್ದೀನ್ ಸಿದ್ದಿಕಿ ಕಾಣಿಸಿಕೊಂಡಿದ್ದಾರೆ. ಇದೀಗ ನಟ ʻಹಡ್ಡಿʼ ಹೆಸರಿನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಸಿನಿಮಾದಲ್ಲಿ ಅವರು ಮಂಗಳಮುಖಿಯ ಪಾತ್ರ ಮಾಡಿದ್ದಾರೆ.

ಮಂಗಳಮುಖಿಯರಂತೆ ಗೆಟಪ್‌ ಕೂಡ ಬದಲಾಯಿಸಿಕೊಂಡಿದ್ದು, ನೆಟ್ಟಿಗರು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ನಟನ ಗಂಭೀರತೆಗೆ ಅವರ ಅಭಿಮಾನಿಗಳು ಮೆಚ್ಚುಗೆಯ ಕಮೆಂಟ್‌ ನೀಡಿದ್ದಾರೆ. ಈ ಕುರಿತು ಅನುಭವ ಹಂಚಿಕೊಂಡ ನಟ ʻʻಎಂಬತ್ತಕ್ಕೂ ಹೆಚ್ಚು ಮಂಗಳಮುಖಿಯರೊಂದಿಗೆ ಕೆಲಸ ಮಾಡಿದ್ದೇನೆ. ಟ್ರಾನ್ಸ್ ಮಹಿಳೆಯರ ಜತೆ ಕೆಲಸ ಮಾಡಿದ್ದು, ಯಾವತ್ತಿಗೂ ಮರೆಯಲಾರದ ಅನುಭವ ನೀಡಿದೆ ಎಂದಿರುವ ಸಿದ್ದಿಕಿ, ಈ ಸಿನಿಮಾದ ಪಾತ್ರ ನೋಡಿ ಸ್ವತಃ ತಮ್ಮ ಮಗಳು ಅಪ್ ಸೆಟ್ ಆಗಿದ್ದ ಸಂಗತಿಯನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Sara Ali Khan | ಬಾಲಿವುಡ್‌ ನಟಿ ಸಾರಾ ಜತೆ ಡೇಟಿಂಗ್ ; ಶುಬ್ಮನ್‌ ಗಿಲ್ ಕೊಟ್ಟ ಉತ್ತರ ಹೀಗಿದೆ

ʻʻಈ ಸಿನಿಮಾ ಮಾಡುವಾಗ ಮಂಗಳಮುಖಿಯರ ಮೇಲೆ ಗೌರವ ಹೆಚ್ಚಾಯಿತು. ಅವರಲ್ಲಿರುವ ತಲ್ಲಣಗಳು ನನಗೆ ಸಿನಿಮಾ ಮಾಡುವಾಗ ಅರ್ಥವಾಗುತ್ತ ಹೋಯಿತುʼʼ ಎಂದು ಭಾವನಾತ್ಮಕವಾಗಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣದ ಕೆಲಸ ನಡೆಯುತ್ತಿದ್ದು 2023 ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ | Bipasha Basu | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ಬಿಪಾಶಾ ಬಸು

Exit mobile version