ಬೆಂಗಳೂರು: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಪತ್ನಿ ಆಲಿಯಾ ಸಿದ್ದಿಕಿ ( Aaliya Siddiqui ) ಅವರಿಗೆ ನೀಡುತ್ತಿರುವ ಕಿರುಕುಳ ಬಗ್ಗೆ ಆಲಿಯಾ ವಕೀಲರು ಬಹಿರಂಗಪಡಿಸಿದ್ದಾರೆ. ನಟ ಮತ್ತು ಅವರ ಕುಟುಂಬ ಆಲಿಯಾ ಅವರನ್ನು ಮನೆಯಿಂದ ಹೊರಹಾಕಲು ಏನೆಲ್ಲಾ ಹಿಂಸೆಯನ್ನು ನೀಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಜನವರಿ 23ರಂದು, ನವಾಜ್ ಅವರ ತಾಯಿ ಮೆಹರುನಿಸಾ ಸಿದ್ದಿಕಿ ಅವರು ಆಲಿಯಾ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ್ದರು. ಮುಂಬೈನ ವರ್ಸೋವಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡಿದ್ದರು ಎಂದು ವರದಿ ಆಗಿದೆ. ಈಗ ಹೊಸ ವರದಿಗಳ ಪ್ರಕಾರ, ನವಾಜುದ್ದೀನ್ ಅವರ ಕುಟುಂಬವು ಆಲಿಯಾಳನ್ನು ಹಿಂಸಿಸುತ್ತಿದ್ದು, ನವಾಜ್ ಮತ್ತು ಅವರ ಕುಟುಂಬ ಆಹಾರ, ಹಾಸಿಗೆ ಮತ್ತು ಕನಿಷ್ಠ ಬಾತ್‌ರೂಮ್, ಟಾಯ್ಲೆಟ್ ಹೋಗುವುದಕ್ಕೂ ಸಹ ಅವಕಾಶ ನೀಡುತ್ತಿಲ್ಲ ಎಂಬುದರ ಕುರಿತು ಆಲಿಯಾ ಅವರ ವಕೀಲರು ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ಆಲಿಯಾ ವಕೀಲ ರಿಜ್ವಾನ್ ಸಿದ್ದಿಕಿ ಹೇಳಿಕೆ ನೀಡಿ ʻʻನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರು ಆಲಿಯಾ ಸಿದ್ದಿಕಿ ಅವರನ್ನು ಮನೆಯಿಂದ ಹೊರಹಾಕಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಾರೆ. ಆಕೆಯ ವಿರುದ್ಧ ದೂರು ದಾಖಲಿಸಿದ್ದಾರೆ. ನಂತರ, ಪೊಲೀಸರ ಮೂಲಕ ಅವರು ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರತಿದಿನ ಸಂಜೆ ಹೊತ್ತಿಗೆ ಪೊಲೀಸ್ ಠಾಣೆಗೆ ಕರೆಯುತ್ತಿದ್ದರು. ವಾಸ್ತವವಾಗಿ, ಆಲಿಯಾ ಅವರ ವಕೀಲರು ಪೊಲೀಸರಿಂದ ಯಾವುದೇ ಸಹಾಯವನ್ನು ಪಡೆದಿಲ್ಲʼʼ ಎಂದು ಹೇಳಿದರು.
ಇದನ್ನೂ ಓದಿ: ವಾರದ ವ್ಯಕ್ತಿಚಿತ್ರ : ಪಠಾಣ್ ಸಿನಿಮಾ ಮೂಲಕ ಗತವೈಭವ ಸೃಷ್ಟಿಸಲಿದ್ದಾರಾ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್?
“ಪೊಲೀಸ್ ಇಲಾಖೆಯ ಕ್ರಮಗಳು ಮತ್ತು ವೈಫಲ್ಯಗಳನ್ನು ನಾನು ನೇರವಾಗಿ ಆಪಾದಿಸಲು ಬಯಸುವುದಿಲ್ಲ, ಆದರೂ ನನ್ನ ಕಕ್ಷಿದಾರರ ಹಕ್ಕುಗಳನ್ನು ರಕ್ಷಿಸಲು ಯಾವುದೇ ಪೊಲೀಸ್ ಅಧಿಕಾರಿ ಬರಲಿಲ್ಲ ಎಂಬುದು ಸತ್ಯ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Nawazuddin Siddiqui | ಮಂಗಳಮುಖಿಯಾಗಿ ಕಾಣಿಸಿಕೊಂಡ ನಟ ನವಾಜುದ್ದೀನ್ ಸಿದ್ದಿಕಿ!
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನವಾಜುದ್ದೀನ್ ಸಿದ್ದಿಕಿ ಅವರ ತಾಯಿ ಕಳೆದ ವಾರ ಆಲಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ವಿಶೇಷವೆಂದರೆ, ಆಲಿಯಾ ಪ್ರಸ್ತುತ ಅಂಧೇರಿಯಲ್ಲಿರುವ ನಟನ ಮನೆಯಲ್ಲಿ ತನ್ನ ಮಕ್ಕಳಾದ ಯಾನಿ ಮತ್ತು ಶೋರಾ ಅವರೊಂದಿಗೆ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ನವಾಜ್ ಗೆ ಅವರ ಪತ್ನಿ 2021 ರಲ್ಲಿ ವಾಟ್ಸ್ ಆ್ಯಪ್ ಮೂಲಕ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ.