Site icon Vistara News

Jawan Success Meet: ʻಜವಾನ್‌ʼ ಸಕ್ಸೆಸ್‌ ಮೀಟ್‌ಗೂ ಬಾರದ ನಯನತಾರಾ; ಶಾರುಖ್‌ ಹೇಳಿದ್ದೇನು?

Jawan Success Meet

ಬೆಂಗಳೂರು: ಲೇಡಿ ಸೂಪರ್‌ಸ್ಟಾರ್ ನಯನತಾರಾ (nayanthara) `ಜವಾನ್‌’ ಮೂಲಕ ಮತ್ತೆ ಕಮ್‌ಬ್ಯಾಕ್‌ ಆಗಿದ್ದಾರೆ. ಸೆಪ್ಟೆಂಬರ್ 15 ರಂದು ಮುಂಬೈನಲ್ಲಿ ಜವಾನ್ ಸಕ್ಸೆಸ್‌ ಮೀಟ್‌ (Jawan Success Meet) ನಡೆದಿದೆ. ಆದರೆ ನಯನತಾರಾ ಮಾತ್ರ ಭಾಗಿಯಾಗಿಲ್ಲ. ನಟಿ ತನ್ನ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ವರ್ಚುವಲ್ ಮೂಲಕ ಸಂದೇಶವನ್ನು (Deepika Padukone) ಕಳುಹಿಸಿದ್ದಾರೆ.ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ದೀಪಿಕಾ ಪಡುಕೋಣೆ, ವಿಜಯ್‌ ಸೇತುಪತಿ, ಅಟ್ಲೀ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಮುಂಬೈನಲ್ಲಿರುವ ತಮ್ಮ ಅಭಿಮಾನಿಗಳಿಗೆ ನಯನತಾರಾ ವಿಡಿಯೊ ಮೂಲಕ, “ನಾನು ವೈಯಕ್ತಿಕವಾಗಿ ಅಲ್ಲಿಲ್ಲದಿದ್ದರೂ, ನನ್ನ ಮಾಧ್ಯಮದ ಸ್ನೇಹಿತರು ಮತ್ತು ನನ್ನ ಅಭಿಮಾನಿಗಳಿಗೆ ನನ್ನ ಅಪ್ಪುಗೆಯನ್ನು ಕಳುಹಿಸುತ್ತಿದ್ದೇನೆ. ನನ್ನ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ. ವೈಯಕ್ತಿಕ ಕಾರಣಗಳಿಂದ ಅಲ್ಲಿ ಬರಲು ಸಾಧ್ಯವಾಗಲಿಲ್ಲ. ನಾನು ಈ ಸಮಯವನ್ನು ಕುಟುಂಬದೊಂದಿಗೆ ಕಳೆಯಬೇಕಿತ್ತು. ನಾನು ನಿಮ್ಮ ಎಲ್ಲಾ ಸಂದೇಶಗಳನ್ನು ಓದುತ್ತಿದ್ದೇನೆ. ನನಗೆ ನರ್ಮದಾ ಪಾತ್ರದಲ್ಲಿ ನಟಿಸಲು ಅವಕಾಶವನ್ನು ನೀಡಿದ ಚಿತ್ರತಂಡಕ್ಕೆ ಧನ್ಯವಾದಗಳು. ಇಂದು ಭೇಟಿಯಾಗಲು ಸಾಧ್ಯವಾಗದಿದ್ದರೆ ಏನು? ನಾನು ಶೀಘ್ರದಲ್ಲೇ ಮುಂಬೈಗೆ ಬರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆʼʼಎಂದು ನಯನಾತಾರ ವಿಡಿಯೊ ಮೂಲಕ ಸಂದೇಶ ರವಾನಿಸಿದರು.

ನಯನತಾರಾ ಕಾರ್ಯಕ್ರಮಕ್ಕೆ ಬಾರದೇ ಇದ್ದುದ್ದಕ್ಕೆ ಕಾರಣ ತಿಳಿಸಿದ ಶಾರುಖ್ ಖಾನ್, ನಯನತಾರಾ ತಾಯಿಯ ಹುಟ್ಟುಹಬ್ಬ ಇರುವ ಕಾರಣ ಅವರು ಬರಲಾಗಲಿಲ್ಲ, ಅವರ ತಾಯಿಗೆ ನನ್ನ ಪ್ರೀತಿಪೂರ್ವಕ ಅಪ್ಪುಗೆಗಳು ಎಂದರು. ಚೆನ್ನೈನಲ್ಲಿ ನಡೆದಿದ್ದ ಪ್ರೀ ರಿಲೀಸ್ ಇವೆಂಟ್​ಗೂ ಸಹ ನಯನತಾರಾ ಗೈರಾಗಿದ್ದರು.

ನಯನತಾರಾ ಸಂದೇಶ

ಇದನ್ನೂ ಓದಿ: Jawan Actress Priyamani: ಪ್ರಿಯಾಮಣಿಗೆ ಮೋಸ ಮಾಡಿದ ʻಜವಾನ್‌ʼ ನಿರ್ದೇಶಕ ಅಟ್ಲೀ!

ಶಾರುಖ್‌ ಜತೆಗೆ ದೀಪಿಕಾ ಪಡುಕೋಣೆ, ನಿರ್ದೇಶಕ ಅಟ್ಲಿ, ವಿಜಯ್ ಸೇತುಪತಿ ಮತ್ತು ಇತರ ಎಲ್ಲಾ ಪಾತ್ರವರ್ಗ ಮತ್ತು ಸಿಬ್ಬಂದಿ ಸದಸ್ಯರು ಸಭೆಗೆ ಹಾಜರಿದ್ದರು.

ಈ ವೇಳೆ ದೀಪಿಕಾ ಪಡುಕೋಣೆ ಮಾತನಾಡಿ ʻʻಶಾರುಖ್‌ ಅವರು ಲಕ್ಕಿ ಚಾರ್ಮ್‌. ನಾನು ಶಾರುಖ್‌ ಅವರಿಗೆ ಇದನ್ನು ಹಲವಾರು ಬಾರಿ ಹೇಳಿದ್ದೇನೆ. ‘ಜವಾನ್’ ಬಾಕ್ಸ್ ಆಫೀಸ್‌ನಲ್ಲಿ ಕಾಡ್ಗಿಚ್ಚನ್ನು ಉಂಟುಮಾಡಿದೆ. ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಕೂಡ. ನಾನು ಈ ಸಿನಿಮಾವನ್ನು ಕೇವಲ ಶಾರುಖ್ ಖಾನ್ ಮೇಲಿನ ಪ್ರೀತಿಯಿಂದಾಗಿ ಮಾಡಿದೆ ಅಷ್ಟೆ. ಈ ಸಿನಿಮಾದಲ್ಲಿ ತಾಯಿಯ ಪಾತ್ರ ನನ್ನದಾಗಿತ್ತು, ಆದರೆ ಆ ಬಗ್ಗೆ ನಾನು ಯೋಚನೆ ಮಾಡಲಿಲ್ಲ. ನಾನು ಎಂದೂ ಎಂತಹ ಪಾತ್ರ ಎಂದು ಯೋಚಿಸುವುದಿಲ್ಲ ಬದಲಿಗೆ ಆ ಪಾತ್ರದ ಉದ್ದೇಶವೇನು ಎಂಬುದಷ್ಟೆ ನೋಡುತ್ತೇನೆ” ಎಂದರು.

ಇದನ್ನೂ ಓದಿ: Jawan Movie: ‘ಜವಾನ್‌’ ಸಿನಿಮಾಗೆ ಅಲ್ಲು ಅರ್ಜುನ್‌ ಫಿದಾ; ಶಾರುಖ್‌ ಹೊಸ ಅವತಾರಕ್ಕೆ ಮೆಚ್ಚುಗೆ

ಚಿತ್ರದ ಯಶಸ್ಸಿನ ಸಂಭ್ರಮವನ್ನು ಹಂಚಿಕೊಂಡ ಶಾರುಖ್ ಖಾನ್, “ಇದೊಂದು ಸಂಭ್ರಮಾಚರಣೆ. ಒಂದು ಚಿತ್ರದೊಂದಿಗೆ ವರ್ಷಗಳ ಕಾಲ ಬದುಕುವ ಅವಕಾಶ ನಮಗೆ ಸಿಗುವುದು ಅಪರೂಪ. ಕೋವಿಡ್ ಮತ್ತು ಸಮಯದ ಕೊರತೆಯಿಂದಾಗಿ ನಾಲ್ಕು ವರ್ಷಗಳಿಂದ ಜವಾನ್ ತಯಾರಿಯಲ್ಲಿ ಇತ್ತು. ಈ ಚಿತ್ರದಲ್ಲಿ ಸಾಕಷ್ಟು ಮಂದಿ ಶ್ರಮ ಪಟ್ಟಿದ್ದಾರೆ. ಅದರಲ್ಲೂ ದಕ್ಷಿಣದ ಜನರು ಮುಂಬೈಗೆ ಬಂದು ನೆಲೆಸಿರುವವರು. ಕಳೆದ ನಾಲ್ಕು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ ಮತ್ತು ಈ ಚಿತ್ರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದು ಅತ್ಯಂತ ಕಷ್ಟದ ಕೆಲಸವಾಗಿದೆʼʼಎಂದರು.

ಜವಾನ್‌ ಸಕ್ಸೆಸ್‌ ಮೀಟ್‌

ಕಾರ್ಯಕ್ರಮಕ್ಕಾಗಿ ದೀಪಿಕಾ ಬಿಳಿ ಸೀರೆಯನ್ನು ಧರಿಸಿದ್ದರು. ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗಳ ಗಡಿ ದಾಟಿದ ಹಿಂದಿ ಸಿನಿಮಾವಾಗಿ ಹೊರಹೊಮ್ಮಿದೆ. ಚಿತ್ರದ ಕಲೆಕ್ಷನ್ ಇಲ್ಲಿಯವರೆಗೆ 520.79 ಕೋಟಿ ರೂ. ಆಗಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಯಿತು. ‘ಜವಾನ್’ ನಲ್ಲಿ, ಶಾರುಖ್‌ ಅವರು ನಯನತಾರಾ, ವಿಜಯ್ ಸೇತುಪತಿ ಮತ್ತು ದೀಪಿಕಾ ಪಡುಕೋಣೆ ಇತರರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.

Exit mobile version