ಬೆಂಗಳೂರು: ನೀನಾ ಗುಪ್ತಾ (Neena Gupta) ಸದ್ಯ ಅಂಥಾಲಜಿ ಸಿನಿಮಾ ʻಲಸ್ಟ್ ಸ್ಟೋರೀಸ್ 2ʼ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನದಲ್ಲಿ ತಮ್ಮ ಮೊದಲ ಆನ್ಸ್ಕ್ರೀನ್ ಕಿಸ್ ದೈಶ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಶೂಟಿಂಗ್ ಮೊದಲು ಹಾಗೂ ನಂತರ ಬಹಳ ಚಿಂತೆಗೆ ಒಳಗಾಗಿದ್ದೆ. ʻʻಕಿಸ್ ದೃಶ್ಯ ಆದ ಕೂಡಲೇ ಡೆಟಾಲ್ನಿಂದ ನನ್ನ ಬಾಯಿಯನ್ನು ತೊಳೆದುಕೊಂಡೆʼʼಎಂದು ಹೇಳಿದರು.
1990ರ ದಶಕದ ಆರಂಭದಲ್ಲಿ ‘ದಿಲ್ಲಗಿ’ ಎಂಬ ಶೋಗೆ ತಾನು ಮೊದಲ ಬಾರಿ ಆನ್ಸ್ಕ್ರೀನ್ ಕಿಸ್ಸಿಂಗ್ ದೃಶ್ಯದಲ್ಲಿ ಭಾಗವಹಿಸಬೇಕಾಗಿ ಬಂತು ಎಂದು ನೀನಾ ಅವರು ಹೇಳಿಕೊಂಡಿದ್ದಾರೆ. ‘ದಿಲ್ಲಗಿ’ ನಲ್ಲಿ ಸಹ-ನಟ ದಿಲೀಪ್ ಧವನ್ನನ್ನು ಚುಂಬಿಸಬೇಕಾಗಿತ್ತು. “ಇದು ಆ ಕಾಲಕ್ಕೆ ಭಾರತೀಯ ಟಿವಿಯಲ್ಲಿ ಮೊದಲ ಲಿಪ್-ಟು-ಲಿಪ್ ಕಿಸ್ ದೃಶ್ಯವಾಗಿತ್ತು. ಈ ವಿಚಾರಕ್ಕೆ ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಸಹ-ನಟ ದಿಲೀಪ್ ನನಗೆ ಸ್ನೇಹಿತನಂತೆ ಇರಲಿಲ್ಲ. ನಾವು ಪರಿಚಿತರಾಗಿದ್ದೆವು ಅಷ್ಟೇ. ಆದರೆ ಆತ ನೋಡುವದಕ್ಕೆ ಚೆಂದವಾಗಿದ್ದ. ಆದರೆ ಈ ಸಂದರ್ಭಗಳಲ್ಲಿ ಅದು ಮುಖ್ಯವೆನಿಸಲಿಲ್ಲ. ಏಕೆಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ, ನಾನು ಸಿದ್ಧವಾಗಿರಲಿಲ್ಲ. ನಾನು ಚಿಂತಿತಳಾಗಿದ್ದೆ. ಆದರೆ ಆ ದೃಶ್ಯ ಮಾಡಲೇಬೇಕಿತ್ತು. ಕೆಲವರಿಗೆ ಕಾಮಿಡಿ ಮಾಡಲು, ಅಳಲು ಕ್ಯಾಮೆರಾ ಮುಂದೆ ಬರುವುದಿಲ್ಲ, ಆದರೆ ನಾನು ಯೋಚಿಸದೇ ಮಾಡಿಯೇ ಬಿಟ್ಟೆ. ಆ ದೃಶ್ಯವನ್ನು ಸವಾಲಾಗಿ ತೆಗೆದುಕೊಂಡೆ. ಕೊನೆಗೆ ಆ ದೃಶ್ಯವನ್ನು ಮಾಡಿದೆ. ಶೊಟ್ ಮುಗಿದ ತಕ್ಷಣ ನಾನು ಡೆಟಾಲ್ನಿಂದ ನನ್ನ ಬಾಯಿಯನ್ನು ತೊಳೆದುಕೊಂಡೆ. ನನಗೆ ಪರಿಚಯವಿಲ್ಲದ, ನಾನು ಪ್ರೀತಿಸದ ಯಾರನ್ನಾದರೂ ಚುಂಬಿಸುವುದು ನನಗೆ ತುಂಬಾ ಕಷ್ಟಕರವಾಗಿತ್ತುʼʼಎಂದು ಹೇಳಿಕೊಂಡರು.
ʻʻಇತ್ತ ಚಾನೆಲ್ನವರು ಈ ಕಿಸ್ಸಿಂಗ್ ದೃಶ್ಯ ಜನಪ್ರಿಯತೆ ಗಳಿಸುತ್ತದೆ ಎಂದು ಭಾವಿಸಿ ಅದನ್ನೇ ಎಪಿಸೋಡ್ನ ಪ್ರಚಾರಕ್ಕೆ ಬಳಸಿಕೊಂಡಿತ್ತು. ಆದರೆ ಅದೇ ಅವರಿಗೆ ಹಿನ್ನಡೆಯಾಯ್ತು. ಆ ಸಮಯದಲ್ಲಿ, ಹೆಚ್ಚು ಟಿವಿ ಚಾನೆಲ್ಗಳು ಇರಲಿಲ್ಲ, ಮತ್ತು ಇಡೀ ಕುಟುಂಬದ ಎಲ್ಲರೂ ಜತೆಯಾಗಿ ಒಟ್ಟಿಗೆ ಟಿವಿ ನೋಡುವ ಪರಿಪಾಠವಿತ್ತು. ಹೀಗಾಗಿ ಆ ದೃಶ್ಯವನ್ನು ಚಾನೆಲ್ನವರು ಸೀರಿಯಲ್ನಿಂದ ತೆಗೆದರುʼʼ ಎಂದು ನೀನಾ ಹೇಳಿದರು. ಇದರ ಜತೆ ಉತ್ಸವ್ ಧಾರವಾಹಿಯಲ್ಲಿ ಪ್ರೀತಿ ಪ್ರೇಮದ ದೃಶ್ಯದಲ್ಲೂ ನಟಿಸಿದ್ದೇನೆ. ಅದೂ ಕೂಡ ಬಲು ಕಷ್ಟಕರವಾಗಿತ್ತು ಎಂದು ನೀನಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Satish Kaushik: ನೀನಾ ಗುಪ್ತಾ ಗರ್ಭಿಣಿಯಾದಾಗ ಮದುವೆ ಆಗಲು ಮುಂದಾಗಿದ್ದ ಸತೀಶ್ ಕೌಶಿಕ್
‘ಲಸ್ಟ್ ಸ್ಟೋರೀಸ್ 2’ ಚಿತ್ರವನ್ನು ಅಮಿತ್ ರವೀಂದ್ರನಾಥ್ ಶರ್ಮಾ, ಕೊಂಕಣ ಸೇನ್ ಶರ್ಮಾ, ಆರ್ ಬಾಲ್ಕಿ ಮತ್ತು ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ. ನೀನಾ ಗುಪ್ತಾ, ವಿಜಯ್ ವರ್ಮಾ, ತಮನ್ನಾ ಭಾಟಿಯಾ ಮತ್ತು ಮೃಣಾಲ್ ಠಾಕೂರ್ ಸೇರಿದಂತೆ ಇತರರು ನಟಿಸಿದ್ದಾರೆ.