Site icon Vistara News

Neena Gupta: ನಿರ್ದೇಶಕ ಶ್ಯಾಮ್ ಬೆನಗಲ್ ಬಗ್ಗೆ ಅಸಮಾಧಾನ ಹೊರ ಹಾಕಿದ ನಟಿ ನೀನಾ ಗುಪ್ತಾ

Neena Gupta says Mandi director Shyam Benegal never gave her a major role

ಬೆಂಗಳೂರು: ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಪ್ರಮುಖ ಪಾತ್ರಗಳನ್ನು ನನಗೆ ಎಂದಿಗೂ ನೀಡಲಿಲ್ಲ ಎಂದು ನಟಿ ನೀನಾ ಗುಪ್ತಾ (Neena Gupta) ಅವರು ಶ್ಯಾಮ್ ಬೆನಗಲ್ ವಿರುದ್ಧ ಆರೋಪಿಸಿದ್ದಾರೆ. ಶ್ಯಾಮ್ ಬೆನಗಲ್ ಅವರ 3 ಸಿನಿಮಾಗಳಲ್ಲಿ ನೀನಾ ಗುಪ್ತಾ ನಟಿಸಿದ್ದಾರೆ. 1983ರಲ್ಲಿ ತೆರೆಗೆ ಬಂದ ಮಂಡಿ (Mandi ), 1985ರಲ್ಲಿ ರಿಲೀಸ್ ಆದ ತ್ರಿಕಲ್ (Trikal ) ಮತ್ತು 1992ರಲ್ಲಿ ಬಂದ ಸೂರಜ್ ಕಾ ಸತ್ವನ್ ಘೋಡಾ ( Suraj Ka Satvan Ghoda ) ಚಿತ್ರದಲ್ಲಿ ನೀನಾ ನಟಿಸಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನೀನಾ ಗುಪ್ತಾ ಅವರು 1980-90ರ ದಶಕದಲ್ಲಿ ಸಿನಿಮಾಗಳಲ್ಲಿ ‘ಮುಖ್ಯ ಪಾತ್ರ’ಗಳನ್ನು ಪಡೆಯುವುದು ಕಷ್ಟಕರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

“ಕಮರ್ಷಿಯಲ್ ಸಿನಿಮಾದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರನ್ನು ಭೇಟಿಯಾಗುವ ಅವಕಾಶವಿರಲಿಲ್ಲ. ಮುಖ್ಯ ಪಾತ್ರಗಳು ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್, ದೀಪ್ತಿ ಅವರಿಗೆ ಹೋಗುತ್ತಿತ್ತು.  ಅಲ್ಲಿ ನನಗೆ ಅವಕಾಶ ಇರಲಿಲ್ಲ ಶ್ಯಾಮ್ ಬೆನಗಲ್ ನನಗೆ ಎಂದಿಗೂ ಪ್ರಮುಖ ಪಾತ್ರವನ್ನು ನೀಡಲಿಲ್ಲ. ಅವರ ಚಿತ್ರಗಳಲ್ಲಿ ನಾನು ಯಾವಾಗಲೂ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಹಾಗಾಗಿ, ಕಮರ್ಷಿಯಲ್ ಸಿನಿಮಾದಲ್ಲೂ ಇದೇ ಪರಿಸ್ಥಿತಿ ಇತ್ತು. ಸಿನಿಮಾ ವ್ಯಾಪಾರವಾಗಿದೆ. ಅವರು ಬೇಡಿಕೆ ಇರುವ ಮುಖವನ್ನು ಮಾತ್ರ ಆಯ್ಕೆ ಮಾಡಲು ಬಯಸುತ್ತಾರೆ’ ಎಂದು ಹೇಳಿದರು.

ಇದನ್ನೂ ಓದಿ: Masaba gupta : ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀನಾ ಗುಪ್ತಾ ಪುತ್ರಿ ಮಸಾಬಾ ಗುಪ್ತಾ

“ನಾನು ಸ್ಟೀರಿಯೊಟೈಪಿಕಲ್ ಪಾತ್ರಗಳನ್ನು ಬೇಡ ಎಂದು ಹೇಳುತ್ತೇನೆ. ತಾಯಿಯ ಪಾತ್ರಗಳನ್ನು ಕೂಡ. ಜನರು ವಿಭಿನ್ನ ಸ್ಥಳಗಳಲ್ಲಿ ಮಹಿಳೆಯರನ್ನು ನೋಡುತ್ತಿರುವುದು ಒಳ್ಳೆಯದು’ ಎಂದು ಹೇಳಿದರು. ನೀನಾ ಕಳೆದ ಕೆಲವು ದಶಕಗಳಲ್ಲಿ ಅನೇಕ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡಿ (Mandi ) (1983), ಜಾನೆ ಭಿ ದೋ ಯಾರೋ (Jaane Bhi Do Yaaron ) (1983), ಮಿರ್ಜಾ ಗಾಲಿಬ್ (Mirza Ghalib ) (1988 ರಲ್ಲಿ ಧಾರಾವಾಹಿ), ತ್ರಿಕಲ್ (Trikal) (1985), ಸೂರಜ್ ಕಾ ಸತ್ವನ್ ಘೋಡಾ (Suraj Ka Satvan Ghoda) (1992), ದರ್ದ್ (Dard ) (ಧಾರಾವಾಹಿ 1993), ಬಧಾಯಿ ಹೋ (Badhaai Ho) (2018) , ದಿ ಲಾಸ್ಟ್ ಕಲರ್ (The Last Colour ) (2019), ಗುಡ್‌ಬೈ (Goodbye ) (2022), ಸಂದೀಪ್ ಔರ್ ಪಿಂಕಿ ಫರಾರ್ (Sandeep Aur Pinky Faraar) (2021), ಪಂಚಾಯತ್ (Panchayat) (ವೆಬ್ ಸರಣಿ 2020), ಮತ್ತು ಮಸಾಬಾ ಮಸಾಬಾ (Masaba Masaba) (ವೆಬ್ ಸರಣಿ 2020) ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Designer Wedding Fashion : ಡ್ರೀಮ್‌ ಡಿಸೈನರ್‌ವೇರನ್ನು ತಾವೇ ವಿನ್ಯಾಸ ಮಾಡಿ ಮದುವೆಯಲ್ಲಿ ಧರಿಸಿದ ಖ್ಯಾತ ಡಿಸೈನರ್‌ ಮಸಾಬಾ ಗುಪ್ತಾ

ಇತ್ತೀಚೆಗೆ ಬಿಡುಗಡೆಯಾದ ಅಜಯನ್ ವೇಣುಗೋಪಾಲನ್ ಅವರ ʻಶಿವಶಾಸ್ತ್ರಿ ಬಲ್ಬೋವಾʼ ಚಿತ್ರದಲ್ಲಿ ನೀನಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅನುಪಮ್ ಖೇರ್, ಜುಗಲ್ ಹಂಸರಾಜ್, ನರ್ಗೀಸ್ ಫಕ್ರಿ ಮತ್ತು ಶರೀಬ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಫೆಬ್ರವರಿ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

Exit mobile version