Site icon Vistara News

Neena Gupta: ಮಗಳು ಮಸಾಬಾಗೋಸ್ಕರ ವಿಶೇಷ ಪೋಸ್ಟ್‌ ಹಂಚಿಕೊಂಡ ನೀನಾ ಗುಪ್ತ

ಮುಂಬೈ: ಖ್ಯಾತ ಡಿಸೈನರ್‌ ಬ್ರ್ಯಾಂಡ್‌ ಹೊಂದಿರುವ ಮಸಾಬಾ ಗುಪ್ತಾ ಹಾಗೂ ನಟ ಸತ್ಯದೀಪ್‌ ಮಿಶ್ರಾ ಶುಕ್ರವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಂದರ್ಭದ ಸಂಭ್ರಮದಲ್ಲಿರುವ ಮಸಾಬಾ ತಾಯಿ ನೀನಾ ಗುಪ್ತಾ (Neena Gupta) ಮಗಳಿಗಾಗಿ ವಿಶೇಷವಾದ ಪೋಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Masaba Gupta: ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಸಂಭ್ರಮಿಸಿದ ನವದಂಪತಿ ಮಸಾಬಾ-ಸತ್ಯದೀಪ್

“ಇಂದು ನನ್ನ ಮಗಳ ಮದುವೆ ಆಯಿತು. ಮನಸ್ಸಿನಲ್ಲಿ ಖುಷಿ, ಶಾಂತಿ, ಸಂತೋಷ, ಪ್ರೀತಿಯ ಭಾವವುಂಟಾಗುತ್ತಿದೆ” ಎಂದು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದರೊಂದಿಗೆ ವಧುವಾಗಿ ನಿಂತಿರುವ ಮಗಳು ಮಸಾಬಾರೊಂದಿಗೆ ತಾವು ನಿಂತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.


ನೀನಾ ಗುಪ್ತಾ ಅವರ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅನೇಕರು ನವ ವಧು ವರರಿಗೆ ಶುಭ ಕೋರಿ ಕಾಮೆಂಟ್‌ಗಳನ್ನು ಹಾಕಿದ್ದಾರೆ. “ಇನ್ನು ಅದ್ಭುತವಾದ ದಿನಗಳು ನಿಮ್ಮ ಕಣ್ಮುಂದೆ ಬರಲಿದೆ”, “ಬದುಕು ಬಂಗಾರವಾಗಲಿದೆ” ಎನ್ನುವಂತಹ ಹಲವು ಕಾಮೆಂಟ್‌ಗಳು ಪೋಸ್ಟ್‌ಗೆ ಬಂದಿವೆ.

ಇದನ್ನೂ ಓದಿ: Masaba Gupta: ಫ್ಯಾಮಿಲಿ ಗೆಟ್‌ ಟು ಗೆದರ್‌ನಲ್ಲಿ ಸಂಭ್ರಮಿಸಿದ ನವದಂಪತಿ ಮಸಾಬಾ-ಸತ್ಯದೀಪ್
ಮಸಾಬಾ ಅವರು ಸತ್ಯದೀಪ್‌ ಅವರನ್ನು ತಮ್ಮ ʼಮಸಾಬಾ ಮಸಾಬಾʼ ವೆಬ್‌ ಸೀರಿಸ್‌ನಲ್ಲಿ ಭೇಟಿಯಾಗಿದ್ದರು. ಮಸಾಬಾ ಅವರು ಈ ಮೊದಲೇ ಮದುವೆಯಾಗಿದ್ದು, ಪತಿಯಿಂದ ಬೇರೆಯಾಗಿದ್ದಾರೆ. ಹಾಗೆಯೇ ಸತ್ಯದೀಪ್‌ ಅವರಿಗೂ ಇದು ಎರಡನೇ ಮದುವೆಯಾಗಿದೆ. ಅವರು ಈ ಹಿಂದೆ ನಟಿ ಅದಿತಿ ಹೈದರ್‌ ಅನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ.

Exit mobile version