Site icon Vistara News

Neetha Ashok | ಎಂಗೇಜ್‌ ಆದ ʻವಿಕ್ರಾಂತ್‌ ರೋಣʼ ಖ್ಯಾತಿಯ ನಟಿ ನೀತಾ ಅಶೋಕ್‌

Neetha Ashok

ಬೆಂಗಳೂರು: ‘ವಿಕ್ರಾಂತ್‌ ರೋಣ’ ಖ್ಯಾತಿಯ ನೀತಾ ಅಶೋಕ್‌ (Neetha Ashok) ತಮ್ಮ ಬಹುಕಾಲದ ಗೆಳೆಯನ ಜತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಚಿತ್ರದ ನಂತರ ಮುಂದೆ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಕಾದು ಕೂತಿದ್ದ ಫ್ಯಾನ್ಸ್‌ಗೆ ಮದುವೆಯ ಸುದ್ದಿ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ತಮ್ಮ ಬಹುಕಾಲದ ಗೆಳೆಯ ಸತೀಶ್‌ ಜತೆ ನಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ʻಕ್ಲಾಸ್‌ಮೇಟ್ ಟು ಸೋಲ್‌ಮೇಟ್ʼ ಎಂಬ ಪೋಸ್ಟ್ ಹಾಕುವ ಮೂಲಕ ತಾವು ಎಂಗೇಜ್ ಆಗಿರುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Actress Haripriya | ʻಸಿಂಹಪ್ರಿಯಾʼ ನಿಶ್ಚಿತಾರ್ಥದ ಫೋಟೊಗಳು ಇಲ್ಲಿವೆ!

ʻಯಶೋದೆʼ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಇವರು ʻʻತುಳುವಿನ ಜಬರ್‌ದಸ್ತ್ ಶಂಕರ’ ಸಿನಿಮಾಗೆ ನಾಯಕಿಯಾಗಿದ್ದರು. ʻವಿಕ್ರಾಂತ್ ರೋಣ’ (Vikant Rona) ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಬಹಳ ವಿಭಿನ್ನವಾಗಿ ವಿಕ್ರಾಂತ್​ ರೋಣದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ನೀತಾ ಅಶೋಕ್​ ಮುಖ ಹೊಸ ಪರಿಚಯವೇನಲ್ಲ. ಈಗಾಗಲೇ ಹಲವು ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ನಾ ನಿನ್ನ ಬಿಡಲಾರೆ, ನೀಲಾಂಬರಿ ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೇವಲ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿ ಸಹ ನೀತಾ ಅಶೋಕ್ ಅಭಿನಯಿಸಿದ್ದಾರೆ.

ಇದನ್ನೂ ಓದಿ | ವೈಷ್ಣವಿ ಗೌಡ ಜತೆ ಎಂಗೇಜ್‌ಮೆಂಟ್ ಆಗಿಲ್ಲ: ನಟಿಯ ವೈರಲ್‌ ಆಡಿಯೋ ಬಳಿಕ ಸ್ಪಷ್ಟನೆ ನೀಡಿದ ನಟ ವಿದ್ಯಾಭರಣ್‌

Exit mobile version