Site icon Vistara News

Neetu Chandra | ಸಂಬಳ ಕೊಡುವೆ, ಹೆಂಡತಿಯಾಗು ಎಂದು ನಟಿಗೆ ಉದ್ಯಮಿಯಿಂದ ಆಫರ್‌!

Neetu Chandra

ಬೆಂಗಳೂರು : ಉದ್ಯಮಿಯೊಬ್ಬ ತಮಗೆ ತಿಂಗಳಿಗೆ 25 ಲಕ್ಷ ರೂ. ಸಂಬಳದ ಆಧಾರದಲ್ಲಿ ಪತ್ನಿಯಾಗುವಂತೆ ಆಫರ್ ನೀಡಿದ್ದ ಎಂದು ನಟಿ ನೀತು ಚಂದ್ರ (Neetu Chandra) ಹೇಳಿಕೊಂಡಿದ್ದಾರೆ.

ʻಓಯ್ ಲಕ್ಕಿ ಲಕ್ಕಿ ಓಯ್ʼ ಚಿತ್ರದ ಖ್ಯಾತಿಯ ನೀತು ಚಂದ್ರ ಬಾಲಿವುಡ್‌ ಹಂಗಾಮಾದೊಂದಿಗೆ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. ʻʻನನ್ನ ಕಥೆ ಒಬ್ಬ ಯಶಸ್ವಿ ನಟಿಯ ವೈಫಲ್ಯದಿಂದ ಕೂಡಿದ ಕಥೆಯಾಗಿದೆʼʼ ಎಂದು ಹೇಳಿಕೊಂಡಿದ್ದಾರೆ. ʻʻ13 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ನಟರೊಂದಿಗೆ ಹಾಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ನನಗೆ ಇಂದು ಕೆಲಸವಿಲ್ಲ. ಆದಾಯವೂ ಇಲ್ಲʼʼ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ |ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ಕುಟುಂಬ

ನೀತು ಚಂದ್ರ ಅವರು 2005ರಲ್ಲಿ ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಹಾಂ ಜತೆ ನಟಿಸಿದ ʻಗರಂ ಮಸಾಲಾʼ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಟ್ರಾಫಿಕ್ ಸಿಗ್ನಲ್, 13 ಬಿ, ಓಯ್ ಲಕ್ಕಿ ಲಕ್ಕಿ ಓಯ್ ಮುಂತಾದ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ತಮ್ಮದೇ ಚಂಪಾರಣ್ ಟಾಕೀಸ್ ನಿರ್ಮಾಣ ಸಂಸ್ಥೆ ಅನ್ನು ಹೊಂದಿದ್ದಾರೆ. ದೇಸ್ವಾ ಮತ್ತು ಮಿಥಿಲಾ ಮಖಾನ್ ಎಂಬ ಎರಡು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಚಲನಚಿತ್ರಗಳು ʻಓಯ್ ಲಕ್ಕಿ ಲಕ್ಕಿ ಓಯ್ʼ ಮತ್ತು ʻಮಿಥಿಲಾ ಮಖಾನ್ʼ ಸಿನಿಮಾ ಮೂಲಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2021ರಲ್ಲಿ ʻನೆವರ್ ಬ್ಯಾಕ್ ಡೌನ್ʼ ಚಿತ್ರದೊಂದಿಗೆ ಹಾಲಿವುಡ್‌ಗೆ ಪದಾರ್ಪಣೆ ಮಾಡಿದರು.

ಇದನ್ನೂ ಓದಿ | ಬಾಲಿವುಡ್‌ಗೆ ಕೊರೊನಾ ಕಂಟಕ: ಶಾರುಖ್‌, ಕತ್ರಿನಾಗೆ ಸೋಂಕು ದೃಢ

Exit mobile version