Site icon Vistara News

Niharika Konidela: ‘ಮೆಗಾ’ ಕುಟುಂಬದ ಮತ್ತೊಬ್ಬ ಹೆಣ್ಣಮಗಳು ಡಿವೋರ್ಸ್, 3 ವರ್ಷದ ಹಿಂದೆಯಷ್ಟೇ ಮದ್ವೆ ಆಗಿತ್ತು

Niharika and Chaitanya

ಬೆಂಗಳೂರು: ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ (Mega Star Chiranjeevi) ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್ ಪ್ರಕರಣ (Divorce Case) ನಡೆದಿದೆ. ಚರಂಜೀವಿಯ ಚಿಕ್ಕ ಮಗಳು ಶ್ರೀಜಾ ಡಿವೋರ್ಸ್ ನಡೆದ ಬೆನ್ನಲ್ಲೇ ಈಗ ಅವರು ಸಹೋದರ ನಾಗಬಾಬು (Nagababu) ಅವರ ಪುತ್ರಿ ನಿಹಾರಿಕಾ (Niharika Konidela) ಕೂಡ ತಮ್ಮ ಗಂಡನಿಂದ ಡಿವೋರ್ಸ್ ಪಡೆದುಕೊಂಡಿದ್ದಾರೆ. ನಿಹಾರಿಕಾ ಕೊನೆಡೆಲಾ ಹಾಗೂ ಚೈತನ್ಯ ಜೋನ್ನಲಗಡ್ಡ (chaitanya jonnalagadda) ಅವರು ಪರಸ್ಪರ ಬೇರೆಯಾಗಲಿದ್ದಾರೆ ಎಂದ ಸುದ್ದಿಯು ಹಲವು ದಿನಗಳಿಂದ ಇತ್ತು. ಜೂನ್ 5ರಂದೇ ಕೋರ್ಟ್ ಡಿವೋರ್ಸ್ ನೀಡಿದೆ.

ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ರಿ ನಿಹಾರಿಕಾ ಮತ್ತು ಚೈತನ್ಯ ಜೋನ್ನಲಗಡ್ಡ ಅವರ ಮದುವೆ 2020ರಲ್ಲಿ ನಡೆದಿತ್ತು. ಮದುವೆಯಾದ ಎರಡು ವರ್ಷಕ್ಕೆ ಸಂಸಾರವು ಹಾಳಾಗಿತ್ತು. ಅವರಿಬ್ಬರು ಪರಸ್ಪರ ಡಿವೋರ್ಸ್ ಬಯಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಡಿವೋರ್ಸ್ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Chiranjeevi Daughter: 2ನೇ ಪತಿಗೂ ಡಿವೋರ್ಸ್ ಕೊಟ್ರಾ ಚಿರಂಜೀವಿ ಪುತ್ರಿ; ಇನ್‌ಸ್ಟಾ ಪೋಸ್ಟ್‌ ವೈರಲ್‌!

ಕೆಲವು ದಿನಗಳಿಂಗದ ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯ ಜೋನ್ನಲಗಡ್ಡ ಅವರು ಪರಸ್ಪರ ದೂರವಾಗಿದ್ದರು. ಜೂನ್ 5ರಂದು ಕೋರ್ಟ್ ಇವರಿಬ್ಬರಿಗೂ ಡಿವೋರ್ಸ್ ನೀಡಿದೆ ಎಂದು ತಿಳಿದು ಬಂದಿದೆ. ಡಿವೋರ್ಸ್ ಸಂಬಂಧ ಕೋರ್ಟ್‌ಗೆ ಸಲ್ಲಿಸಿರುವ ಡಿವೋರ್ಸ್ ಅರ್ಜಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version