Site icon Vistara News

Niharika Konidela: ನಿಹಾರಿಕಾ ದಾಂಪತ್ಯದಲ್ಲಿ ಬಿರುಕು ಪಕ್ಕಾ ಅಂದ್ರು ನೆಟ್ಟಿಗರು; ಫೋಟೊದಿಂದಾಗಿ ಹೆಚ್ಚಾಯ್ತು ಗಾಸಿಪ್‌!

Niharika Konidela hubby absence from Varun Tej engagement

ಬೆಂಗಳೂರು: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರನ ಮಗಳು ನಿಹಾರಿಕಾ ಕೊನಿಡೇಲಾ (Niharika Konidela) ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಹಲವು ದಿನಗಳಿಂದ ಚರ್ಚೆಯಾಗಿತ್ತು. ಟಾಲಿವುಡ್ ನಟ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಜೋಡಿ (Varun Tej-Lavanya Tripathi) ಕೆಲವು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈ ಸಮಾರಂಭಕ್ಕೆ ನಿಹಾರಿಕಾ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ನಟಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ನಿಹಾರಿಕಾ ಅವರ ಪತಿ ಚೈತನ್ಯ ಜೊನ್ನಲಗಡ್ಡ (Chaitanya Jonnalagadda) ಕಾಣಿಸಿಕೊಂಡಿಲ್ಲ. ನಿಹಾರಿಕಾ ಹಾಗೂ ಚೈತನ್ಯ ಸಂಸಾರದಲ್ಲಿ ಬಿರುಕು ಮೂಡಿರುವುದು ಪಕ್ಕಾ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಮೆಗಾ ಸ್ಟಾರ್​’ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರಿಯಾದ ನಿಹಾರಿಕಾ ಅವರು 2020ರ ಡಿಸೆಂಬರ್‌ನಲ್ಲಿ ಉದಯಪುರದ ಉದಯವಿಲಾಸ್‌ನಲ್ಲಿ ಚೈತನ್ಯ ಜೊನ್ನಲಗಡ್ಡ ಅವರೊಂದಿಗೆ ಅದ್ಧೂರಿಯಾಗಿ ಪ್ರೇಮ ವಿವಾಹವಾಗಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ನಿಹಾರಿಕಾ ಕೊನಿಡೆಲಾ ಮತ್ತು ಅವರ ಪತಿ ಚೈತನ್ಯ ಇಬ್ಬರೂ ಬೇರೆಯಾಗಿದ್ದು, ಸದ್ಯದಲ್ಲಿಯೇ ಡಿವೋರ್ಸ್‌ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ವದಂತಿಗಳ ನಡುವೆ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಜೋಡಿ ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿಯ ಜತೆ ಕಂಡಿಲ್ಲ. ಜೋಡಿ ಜೋತೆಯಾಗಿ ಬಾಳುತ್ತಿಲ್ಲ. ಇದು ಕನ್‌ಫರ್ಮ್‌ ಎನ್ನುತ್ತಿದ್ದಾರೆ ನೆಟ್ಟಿಗರು.

2020ರಲ್ಲಿ ನಡೆದ ನಿಹಾರಿಕಾ ಮದುವೆಯಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ನಟರುಗಳಾದ ಚಿರಂಜೀವಿ, ಪವನ್ ಕಲ್ಯಾಣ್, ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಸೇರಿದಂತೆ ಕೊನಿಡೇಲಾ ಕುಟುಂಬದ ಅನೇಕರು ಭಾಗವಹಿಸಿದ್ದರು. ಕೆಲವು ದಿನಗಳ ಹಿಂದೆ ನಿಹಾರಿಕಾ ತನ್ನ ಪತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದರು. ತಮ್ಮ ಮದುವೆಯ ಚಿತ್ರಗಳನ್ನು ಫೋಟೊಗಳನ್ನೂ ಡಿಲಿಟ್‌ ಮಾಡಿದ್ದರು. ತೆಲುಗು ಚಿತ್ರಗಳಾದ ʻಒಕ ಮನಸುʼ ಮತ್ತು ʻಹ್ಯಾಪಿ ವೆಡ್ಡಿಂಗ್‌ʼನಲ್ಲಿ ಕೆಲಸ ಮಾಡಿದ ನಿಹಾರಿಕಾ ಕೊನಿಡೆಲಾ, ಆಗಸ್ಟ್ 2020ರಲ್ಲಿ ಚೈತನ್ಯ ಜೊನ್ನಲಗಡ್ಡಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದನ್ನೂ ಓದಿ: Niharika Konidela: ಪುಷ್ಪ-2 ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ? ಸಾಯಿ ಪಲ್ಲವಿ ಇರಲ್ವಾ?

ನಿಹಾರಿಕಾ ಪೋಸ್ಟ್‌

‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್​’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್​ ಎಲಿಫೆಂಟ್​ ಪಿಕ್ಚರ್ಸ್​’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್​ ಫಾಸಿಲ್​ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್​ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ವರುಣ್ ತೇಜ್ ಅವರು ರಾಮ್ ಚರಣ್ ಅವರ ಮೊದಲ ಸೋದರಸಂಬಂಧಿ. ಕೊನಿಡೆಲ ನಾಗೇಂದ್ರ, ನಾಗ ಬಾಬು ಅವರು ಮೆಗಾಸ್ಟಾರ್ ಚಿರಂಜೀವಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಹೋದರರಾಗಿದ್ದಾರೆ. ನಾಗ ಬಾಬು ಅವರು ವರುಣ್ ತೇಜ್ ಅವರ ತಂದೆ. ತೆಲುಗು ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.

Exit mobile version