Site icon Vistara News

Niharika Konidela: ಮತ್ತೆ ಮದುವೆಗೆ ನಿಹಾರಿಕಾ ಗ್ರೀನ್‌ ಸಿಗ್ನಲ್‌? ಅಂತೂ ಸ್ಪಷ್ಟನೆ ಕೊಟ್ಟ ನಟ ತರುಣ್‌!

Niharika Konidela Tharun actor

ಬೆಂಗಳೂರು: ನಟಿ-ನಿರ್ಮಾಪಕಿ ನಿಹಾರಿಕಾ ಕೊನಿಡೇಲಾ (Niharika Konidela) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಚೈತನ್ಯ ಜೊನ್ನಲಗಡ್ಡ ಅವರನ್ನು ವಿವಾಹವಾದ ಎರಡು ವರ್ಷಗಳ ನಂತರ, ದಂಪತಿ ಇತ್ತೀಚೆಗೆ ವಿಚ್ಛೇದನ ಪಡೆದುಕೊಂಡಿದ್ದರು. ಈ ಸುದ್ದಿ ಟ್ರೆಂಡಿಂಗ್ ವಿಷಯವಾಗಿತ್ತು. ಬೇರೆಯಾಗಿರುವುದರ ಬಗ್ಗೆ ಇವರು ನಿಖರವಾದ ಕಾರಣವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ವಿಚ್ಛೇದನದ ಬಳಿಕ ನಿಹಾರಿಕಾ ತಮ್ಮ ಕೆಲಸಗಳಲ್ಲಿ ಗಮನ ಹರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದೀಗ ಈ ಸುದ್ದಿ ನಡುವೆ ಮತ್ತೊಂದು ಸುದ್ದಿ ಸೌಂಡ್ ಮಾಡುತ್ತಿದೆ. ತೆಲುಗಿನ ನಟ ತರುಣ್ (Actor Tarun) ಜತೆ ನಿಹಾರಿಕಾ 2ನೇ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ ತರುಣ್‌ ಕೂಡ ಸ್ಪಷ್ಟನೆ ನೀಡಿದ್ದಾರೆ.

ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಮಿಂಚಿದ್ದ ನಟ ತರುಣ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ತರುಣ್ ತಾಯಿ ರೋಜಾ ಅವರು ನನ್ನ ಮಗ ಮದುವೆಯಾಗುತ್ತಾನೆ. ದೊಡ್ಮನೆಯ ಹುಡುಗಿಯನ್ನೇ ಮದುವೆಯಾಗುತ್ತಾರೆ ಎಂದು ಮಾತನಾಡಿದ್ದರು. ಹಾಗಾಗಿ ನಿಹಾರಿಕಾ ಜತೆ ತರುಣ್ ಹೆಸರು ಕೇಳಿ ಬಂದಿತ್ತು. ನಿಹಾರಿಕಾ ಜತೆಗಿನ ಮದುವೆ ಬಗ್ಗೆ ನಟ ಪ್ರತಿಕ್ರಿಯಿಸಿ, ʻʻಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ನಿಹಾರಿಕಾ ಜತೆ ನಾನು ಮದುವೆಯಾಗುತ್ತಿಲ್ಲʼʼ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಮದುವೆ ಬಗ್ಗೆ ಮುಂದಿನ ದಿನಗಳಲ್ಲಿ ನಾನೇ ತಿಳಿಸುತ್ತೇನೆ ಎಂದು ತರುಣ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Niharika Konidela: ಡಿವೋರ್ಸ್‌ ಬಳಿಕ ಹೊಸ ಅಧ್ಯಾಯ ಶುರು ಮಾಡಿದ ನಿಹಾರಿಕಾ ಕೊನಿಡೇಲಾ!

ಸಿನಿಮಾ ಕಡೆ ನಟಿ ಆಸಕ್ತಿ!

ವರದಿಗಳ ಪ್ರಕಾರ ನಟಿ ಮುಂಬರುವ ಚಿತ್ರಕ್ಕಾಗಿ ಯುವ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ನಿರ್ಮಾಪಕಿಯಾಗಿಯೂ ತನ್ನ ಛಾಪು ಮೂಡಿಸಿರುವ ನಟಿ, ಹಲವಾರು ವೆಬ್ ಸಿರೀಸ್‌ನಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ನಟಿ ಹೊಸ ಪ್ರಾಜೆಕ್ಟ್‌ಗೆ ಒಪ್ಪಿಗೆ ಸೂಚಿಸಿದ್ದು, ಸ್ಕ್ರಿಪ್ಟ್ ಕೂಡ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ವರದಿ ಪ್ರಕಾರ ನಟಿ ಮತ್ತೊಮ್ಮೆ ಕ್ಯಾಮೆರಾ ಮುಂದೆ ಬರಲು ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ವಿರೋಧದ ವದಂತಿಗಳ ನಡುವೆಯೂ, ನಿಹಾರಿಕಾ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವಂತೆ ತೋರುತ್ತಿದೆ.

ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ರಿ ನಿಹಾರಿಕಾ ಮತ್ತು ಚೈತನ್ಯ ಜೋನ್ನಲಗಡ್ಡ ಅವರ ಮದುವೆ 2020ರಲ್ಲಿ ನಡೆದಿತ್ತು. ಮದುವೆಯಾದ ಎರಡು ವರ್ಷಕ್ಕೆ ಸಂಸಾರವು ಹಾಳಾಗಿತ್ತು. ಅವರಿಬ್ಬರು ಪರಸ್ಪರ ಡಿವೋರ್ಸ್ ಬಯಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಲವು ದಿನಗಳಿಂಗದ ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯ ಜೋನ್ನಲಗಡ್ಡ ಅವರು ಪರಸ್ಪರ ದೂರವಾಗಿದ್ದರು. ಜೂನ್ 5ರಂದು ಕೋರ್ಟ್ ಇವರಿಬ್ಬರಿಗೂ ಡಿವೋರ್ಸ್ ನೀಡಿದೆ.

Exit mobile version