ಬೆಂಗಳೂರು: ಕಮಲ್ ಹಾಸನ್, ರಜನಿಕಾಂತ್, ಅಜಿತ್, ವಿಜಯ್ ಸೇರಿದಂತೆ ಅನೇಕ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಬಂಡವಾಳ ಹಾಕಿರುವ ಲೈಕಾ ಸಂಸ್ಥೆ ನಿಖಿಲ್ ಕುಮಾರ್ (Nikhil Kumaraswamy) ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಂದ ಖ್ಯಾತಿ ಪಡೆದಿರುವ ಲೈಕಾ ಸಂಸ್ಥೆ ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ 2, ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಇದೀಗ ನಿಖಿಲ್ ಅವರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ನಿಖಿಲ್ ಅವರ ಈ ಸಿನಿಮಾ ಮುಹೂರ್ತಕ್ಕೆ ಕುಮಾರಸ್ವಾಮಿ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಪರೋಕ್ಷವಾಗಿ ಪುನೀತ್ ರಾಜ್‌ಕುಮಾರ್ ಅವರ ಸ್ಥಾನಕ್ಕೆ ನಿಖಿಲ್ ಸೂಕ್ತ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಹೆಸರಿಡಿದ ಈ ಸಿನಿಮಾಗೆ ಲಕ್ಷ್ಮಣ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಮಾತನಾಡಿ ʻʻನಾನು ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡುವುದು ಸರ್ವೇ ಸಾಮಾನ್ಯ. ಲೈಕಾ ಸಂಸ್ಥೆ ಮುಖ್ಯಸ್ಥರು ಸೇರಿದಂತೆ ಅವರ ಕುಟುಂಬದವರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಚಿತ್ರರಂಗಕ್ಕೂ ನನಗೂ ಅವಿನಾಭಾವ ಸಂಬಂಧವಿದೆ. ಚಿತ್ರಮಂದಿರದ ಮಾಲೀಕನಾಗಿ ಅನುಭವಗಳನ್ನು ಪಡೆದೆ. ಸಿನಿಮಾ ನಡೆಸುವುದು ಆಗಿನ ಕಾಲದಲ್ಲಿ ಕಷ್ಟದ ಕೆಲಸ. ಹೊಸ ಥಿಯೇಟರ್ ಕಟ್ಟಿಸಿ ಸಿನಿಮಾ ಓಡಿಸಬೇಕಂದರೆ ಸುಲಭದ ಕೆಲಸವಾಗಿರಲಿಲ್ಲʼʼ ಎಂದರು.
ಕುಮಾರಸ್ವಾಮಿ ಮಾತು ಮುಂದುವರಿಸಿ ʻʻಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ನಷ್ಟ ಅನುಭವಿಸಿದೆ. ಆ ಘಟನೆ ನಡೆದ ಮೇಲೆ ನನಗೆ ತುಂಬಾ ಜನ ಹೇಳಿದ್ದರು. ಕನ್ನಡ ಚಿತ್ರರಂಗದಲ್ಲಿ ಹೀರೊಗಳ ಕೊರತೆಯಿದೆ ಎಂದು. ರಾಜಕೀಯ ಬಿಟ್ಟು ಸಿನಿಮಾದತ್ತ ಗಮನ ವಹಿಸುವುದಕ್ಕೆ ನಿಖಿಲ್‌ಗೆ ಹೇಳಿ ಅಂದಿದ್ದರುʼʼ ಎನ್ನುವ ಮೂಲಕ ಪರೋಕ್ಷವಾಗಿ, ಪುನೀತ್ ರಾಜ್‌ಕುಮಾರ್ ಅವರ ಸ್ಥಾನಕ್ಕೆ ನಿಖಿಲ್ ಸೂಕ್ತ ಎಂಬರ್ಥದಲ್ಲಿ ಹೇಳಿದರು.
ಇದನ್ನೂ ಓದಿ: Film Chamber : ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್ ಸೋದರರಿಂದ ನಿಂದನೆ: ಪೊಲೀಸರಿಗೆ ಚಿತ್ರ ನಿರ್ಮಾಪಕ ದೂರು
ʻʻ4 ವರ್ಷಗಳ ಹಿಂದೆಯೇ ಲೈಕಾ ಸಂಸ್ಥೆ ಜತೆ ಈ ಸಿನಿಮಾ ಮಾಡಬೇಕಿತ್ತು. ನಾನು ಕಮಲ್ ಹಾಸನ್ ಅವರನ್ನ ಭೇಟಿ ಮಾಡಿದ್ದೆ. ನನ್ನ ಕಥೆಗೆ ಸಿನಿಮಾ ಮಾಡಿ ಎಂದು ಅಪ್ರೂಚ್ ಮಾಡಿದ್ದೆ. ಡಬಲ್ ಆ್ಯಕ್ಟಿಂಗ್‌ನ ಆ ಪಾತ್ರ ಕಮಲ್ ಹಾಸನ್ ಮಾತ್ರ ಮಾಡಬೇಕು ಎನ್ನುವ ಮನೋಭಾವ ನನಗೆ ಇತ್ತುʼʼ ಎಂದರು.
ʻʻಈಗಿನ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಆಗ ಇರಲಿಲ್ಲ. ಹಾಗಂತ ಆಗಿನ ಸಿನಿಮಾ ಕಥೆಗಳು ಈಗಿನ ಕಾಲಘಟ್ಟಕ್ಕೆ ನೋಡಲಿಕ್ಕೆ ಆಗುವುದಿಲ್ಲ. ರಾಜಕುಮಾರ್ ಸಿನಿಮಾಗಳೇ ನನಗೆ ಆದರ್ಶಮಾರ್ಗ. ನಿಖಿಲ್ ಕೂರಿಸಿಕೊಂಡು ಒಂದು ಮಾತು ಹೇಳಿದ್ದೆ, ರಾಜಕಾರಣಕ್ಕೆ ಹೋಗಬೇಡ ಎಂದು. ಆಗ ಸರಿ ಅಪ್ಪ ಎಂದು ಹೇಳಿ ಜಾಗ್ವಾರ್ ಸಿನಿಮಾ ಶುರುವಾಯ್ತುʼʼ ಎನ್ನುವುದನ್ನು ನೆನಪಿಸಿಕೊಂಡರು.